ಕಬ್ಬಿನ ಬೆಲೆ ನಿಗದಿ ಪಡೆಸುವಲ್ಲಿ ರೈತರ ಸರಕಾರ ಆಲಸಿಧೋರಣೆ ಶಾಂತಕುಮಾರ ಆರೋಪ
ಸಿಂದಗಿ: ಕಬ್ಬಿನ ಬೆಲೆ ನಿಗದಿ ಪಡೆಸುವಲ್ಲಿ ರೈತರ ಬಗ್ಗೆ ಸರಕಾರ ಬಹಳ ಆಲಸಿಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ಆರೋಪ ಮಾಡಿದ್ದಾರೆ.
ಶನಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕಬ್ಬುಬೆಳೆಗಾರರ ಮೇಲೆ ನಿರಂತರ ದೋರಣೆ ನಡೆಯುತ್ತಿದೆ. ಸರಕಾರ ಸಕ್ಕರೆ ಕಾರ್ಯಾನೆಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಕ್ರೋಷ ವ್ಯಕ್ತ ಪಡೆಸದರು.
ಕಬ್ಬು ಕಲ್ಪವೃಕ್ಷ. ಕಬ್ಬು ಲಾಭದಾಯಕ ಬೆಳೆಯಾಗಿದೆ. ಆದರೆ ರೈತನಿಗೆ ಲಾಭ ಸಿಗದೇ ಸಕ್ಕರೆ ಕಾರ್ಖಾನೆಯರಿಗೆ ಲಾಭಸಿಗುತ್ತಿದೆ. ಕಬ್ಬಿನಿಂದ ಸಕ್ಕರೆ ತಯಾರು ಮಾಡುವ ಜೊತೆಎಗ ವಿದ್ಯುತ್, ಮೊಲಾಸಿಸ್, ಇಥೆಲಾನ ಹೀಗೆ ಅನೇಕ ಉತ್ಪನ್ನಗಳನ್ನು ಮಾಡುತ್ತಾರೆ. ಆದರೆ ರೈತರಿಗೆ ಅಲ್ಪ ಹಣ ಸಿಗುತ್ತದೆ. ರೈತ ಉತ್ಪಾದಿಸುವ ಕಬ್ಬಿನ ವೆಚ್ಚದ ಬಗ್ಗೆ ಸರಕಾರ ಗಮನ ನೀಡುತ್ತಿಲ್ಲ. ಸರಕಾರ ಅಂಗ ಸಂಸ್ಥೆ ಕೃಷಿ ಇಲಾಖೆ ಕಬ್ಬಿನ ಬೆಳೆಯುವ ಖರ್ಚು ಪ್ರತಿ ಟನ್ಗೆ 3200 ರೂ. ಬರುತ್ತದೆ ಎಂದು ಹೇಳುತ್ತದೆ. ಆದರೆ ಸರಕಾರ ಕಡಿಮೆ ಬೆಲೆ ನಿಗದಿ ಪಡೆಸುತ್ತದೆ. ಇದರಿಂದ ರೈತರಿಗೆ ಕಡಿಮೆ ಆದಾಯ ಬರುತ್ತದೆ. ಸಕ್ಕರೆ ಕಾರ್ಖಾನೆಯವರಿಗೆ ಲಾಭ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಹಣ 700 ಕೋಟಿ ರೂ.ಗಿಂತ ಹೆಚ್ಚು. ಕಬ್ಬಿನ ಬಾಕಿ ಹಣದ ವಿವರವನ್ನು ಸರಕಾರಕ್ಕೆ ಸಕ್ಕರೆ ಕಾರ್ಖಾನೆಯವರು ತಪ್ಪು ಮಾಹಿತಿ ನೀಡುತ್ತಾರೆ. ಅದರಂತೆ ಸರಕಾರ ಸಾರ್ವಜನಿಕವಾಗಿ ವಿವರಣೆ ನೀಡುತ್ತಾರೆ. ಕಂಪನಿಯ ಗುಲಾಮರಾಗಿ ಸರಕಾರ ನಡೆದುಕೊಳ್ಳುತ್ತವೇ ಹೊರತು ಕಬ್ಬು ಬೆಳೆಗಾರರ ಬಗ್ಗೆ ಕಿಂಚಿತ್ತು ವಿಚಾರಿಸುವುದಿಲ್ಲ. ಆದ್ದರಿಂದ ಕಬ್ಬು ಬೆಳೆಗಾರರು ಜಾಗೃತರಾಗಬೇಕು. ಜಾತಿ-ಮತ, ಪಕ್ಷ ಮರೆತು ಕಬ್ಬು ಬೆಳೆಗಾರರು ನ್ಯಾಯಕ್ಕಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗೆ ತರಬೇಕು, ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು, ಕಬ್ಬಿನ ಎಫ್ಆರ್ಪಿ ದರ ಪುನರ್ ಪರಿಶೀಲಿಸಬೇಕು, ಅಡುಗೆ ಅನಿಲ, ಡೀಸೈಲ್, ಪೆಟ್ರೋಲ್ ದರ ಇಳಿಸಬೇಕು ಎಂದು ಒತ್ತಾಯಿಸಿ ಸೆ. 27 ರಂದು ಕರ್ನಾಟಕ ಬಂದ ಆಚರಸಿಲಾಗುವುದು. ಆದ್ದರಿಂದ ಕಬ್ಬು ಬೆಳೆಗಾರರು ನಿಮ್ಮ ನಿಮ್ಮ ಗ್ರಾಮ, ಪಟ್ಟಣಗಳಲ್ಲಿ ಬಂದಗೆ ಬೆಂಬಲಿಸಿ ಬಂದ್ ಆಚರಿಸುವ ಮೂಲಕ ರಾಜ್ಯ ಬಂದ ಯಶಸ್ವಿಗೋಳಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನಕಾರ್ಯದರ್ಶಿ ವೀನಗೌಡ ಪಾಟೀಲ, ಕಲಬುರಗಿ ಜಿಲ್ಲಾ ಪ್ರಧಾನಕಾರ್ಯದರ್ಶಿ ರಮೇಶ ಹೂಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ, ತಾಲೂಕಾ ಅಧ್ಯಕ್ಷ ದೌಲತರಾಯ ಬಿರಾದಾರ ಸೇರಿದಂತೆ ಚಿಕ್ಕಹವಳಗಿ, ಕುಮಸಗಿ, ಬಗಲೂರ, ಕಡ್ಲೇವಾಡ ಗ್ರಾಮದ ಕಬ್ಬು ಬೆಳೆಗಾರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.