ವಾಲೀಕಾರ್‌ಗೆ ಗೊರುಚ ಪ್ರಶಸ್ತಿ
ಗುಳೇದಗುಡ್ಡ,ಜು.11: ಮೈಸೂರಿನ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಮಾಡುವ 2019 ನೇ ಸಾಲಿನ ಗೊರುಚ ಜಾನಪದ ಸಾಹಿತ್ಯ ಗ್ರಂಥ ಪ್ರಶಸ್ತಿಗೆ ತಾಲೂಕಿನ ಲಕ್ಕಸಕೊಪ್ಪ ಗ್ರಾಮದ ಪಿ.ಡಿ.ವಾಲೀಕಾರ ಆಯ್ಕೆಯಾಗಿದ್ದಾರೆ.
ಆಗಷ್ಟ್ 1 ರಂದು ಭಾನುವಾರ ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜು ಸಭಾಭವನದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿ.ಡಿ.ವಾಲೀಕಾರ ಪ್ರಶಸ್ತಿ ಸ್ವೀಕರಿಸಲಿದ್ದಾರೆಂದು ಪರಿಷತ್ತಿನ ತಿಳಿಸಿದೆ.