ಸರ್ಕಾರ ಯೋಜನೆಗಳ ಸದ್ಭಳಕೆ, ವಿದ್ಯಾರ್ಥಿಗಳ ಉನ್ನತೀಕರಣಕ್ಕೆ ರಹದಾರಿ : ಅಂಬಿಗೇರ
ಶಿಗ್ಗಾವಿ : ವಿದ್ಯಾರ್ಥಿಗಳ ಅನುಕೂಲ ಹಾಗು ಏಳಿಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದ್ಭಳಕೆಯಿಂದ ಸಾಧನೆ ಮೆರಯುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ಆಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ ಅಂಬಿಗೇರ ಆಭಿಪ್ರಾಯ ಪಟ್ಟರು.
ಕೇಂದ್ರ ಸಂವಹನ ಇಲಾಖೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ ಧಾರವಾಡ ವತಿಯಿಂದ ಪುರಸಭೆ ಆವರಣದಲ್ಲಿ ನಡೆಯುತ್ತಿರುವ ಮೂರನೇ ದಿನದ ಬುಡಕಟ್ಟು ಗೌರವ ದಿನ ಹಾಗು ಕೇಂದ್ರ ಸರ್ಕಾರದ ಇತರೆ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಛಾಯಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸರ್ಕಾರದ ಸವಲತ್ತುಗಳು ಹಾಗೂ ಯೋಜನೆಗಳ ಕುರಿತ ಮಾಹಿತಿ ಕಾರ್ಯಕ್ರಮ ನೆರವೇರಿತು. ವಿಕಲಚೇತನ ವಿದ್ಯಾರ್ಥಿಗಳು ಹಾಗೂ ಹಲವು ನೂನ್ಯತೆ ಉಳ್ಳ ವಿಶೇಷ ಚೇತನ ಮಕ್ಕಳಿಗೆ ಸಮಾನ ಶಿಕ್ಷಣದ ಹಕ್ಕು, ಮದ್ಯಾಹ್ನದ ಬಿಸಿಯೂಟ, ಸಮನ್ವಯ ಶಿಕ್ಷಣ ಕಾರ್ಯಕ್ರಮಗಳು, ಫಿಟ್ ಇಂಡಿಯಾ, ಇಕೋ ಕ್ಲಬ್, ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆ ಮುಂತಾದ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಸರ್ಕಾರದಿಂದ ಯೋಜನೆಗಳನ್ನು ಪಡೆದ ಹಲವು ಫಲಾನುಭವಿ ವಿದ್ಯಾಥಿಗಳು ವೇದಿಕೆಯಲ್ಲಿ ಸಂತಸ ಹಂಚಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಂದಿಸಿದರು.
ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದ, ಸರ್ಕಾರದ ಯೋಜನೆಗಳನ್ನು ಸಫಲವಾಗಿ ಬಳಸಿಕೊಂಡು ಸಾಧಿಸಿದ ವಿದ್ಯಾರ್ಥಿಗಳಿಗೆ ಕೇಂದ್ರ ಸಂವಹನ ಇಲಾಖೆ ಧಾರವಾಡವು ಪದಕ ವಿತರಿಸಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್ ಟಿ, ಮುರಳೀಧರ್ ಕಾರಬಾರಿ, ಪ್ರಸಾದ್ ಪುತ್ತೂರು, ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ, ಅಕ್ಷರ ದಾಸೋಹ ಸಹಾಯಕ ನಿದರ್ೆಶಕ ಅಶೋಕ ಕುಂಬಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ಹೇಮಪ್ಪ ರೆಡ್ಡಿ, ಶಿಕ್ಷಣ ಇಲಾಖೆ ಸಮನ್ವಯಕಾರ ಬಸವರಾಜ ಬಸರೀಕಟ್ಟಿ, ನಾಗಪ್ಪ ಬೆಂತೂರ, ಹೆಚ್ ಹೆಚ್ ರಟ್ಟಿಹಳ್ಳಿ, ಉಮೇಶ್ ಎಸ್ ಆರ್, ಸಯ್ಯದ್ ಎಸ್ ಎ, ಗೀತಾಂಜಲಿ ತೆಪ್ಪದ, ಹೆಚ್ ಬಿ ಕುಂಕೂರ, ಅನಸೂಯ ಬಳ್ಳಾರಿ ಉಪಸ್ಥಿತರಿದ್ದರು.