ಸಿಂಧಗಿ

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಸಿಂದಗಿ23: ಪಟ್ಟಣದ ಪದ್ಮರಾಜ ಮಹಿಳಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಸಿಂದಗಿ 2022-23 ನೇ ಸಾಲಿನ ತಾಲೂಕಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿದೆ. 

         ಬಾಲಕಿಯರ ಕಬ್ಬಡ್ಡಿ ಮತ್ತು ಖೊಖೊ ಪಂದ್ಯಾವಳಿಯಲ್ಲಿ ಪ್ರಥಮ, ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ, 100*4 ಮತ್ತು 400*4 ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು,  ವೈಯಕ್ತಿಕ ಕ್ರೀಡೆಗಳಾದ 100 ಮೀಟರ್ ಓಟದಲ್ಲಿ ಸಿದ್ದಮ್ಮ ಬಿರಾದಾರ ಪ್ರಥಮ, ಸಂಜನಾ ಚವ್ಹಾಣ ದ್ವೀತಿಯ, 200 ಮೀಟರ್ ಓಟದಲ್ಲಿ ಸಿದ್ದಮ್ಮ ಬಿರಾದಾರ ಪ್ರಥಮ, 400 ಮೀಟರ್ ಓಟದಲ್ಲಿ ಭವಾನಿ ಹಡಪದ ದ್ವಿತೀಯ, 800 ಮೀಟರ್ ಓಟದಲ್ಲಿ ಸಾದಿಯಾ ರೂಗಿ ದ್ವೀತಿಯ,  3000 ಮೀ ಓಟದಲ್ಲಿ ಶರಣಮ್ಮ ಕಲಶೆಟ್ಟಿ ದ್ವೀತಿಯ, ಗುಂಡು ಎಸೆತದಲ್ಲಿ ಭಾಗ್ಯಶ್ರೀ ಹುಡೇದ ಪ್ರಥಮ, ಗುರುಲಿಂಗಮ್ಮ ಪಾಟೀಲ ದ್ವಿತೀಯ, ಚಕ್ರ ಎಸೆತದಲ್ಲಿ ಭಾಗ್ಯಶ್ರೀ ಹುಡೇದ  ದ್ವಿತೀಯ, ಉದ್ದ ಜಿಗಿತದಲ್ಲಿ ಸಾದಿಯಾ ರೂಗಿ ಪ್ರಥಮ  ಹಾಗೂ ಶರಣಮ್ಮ ಕಲಶೆಟ್ಟಿ ದ್ವಿತೀಯ, ಎತ್ತರ ಜಿಗಿತದಲ್ಲಿ ಸಿದ್ದಮ್ಮ ಬಿರಾದಾರ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.  

ಈ ವಿದ್ಯಾರ್ಥಿನಿಯರಿಗೆ, ಮಾರ್ಗದರ್ಶನ ನೀಡಿದ ಉಪನ್ಯಾಸಕರಾದ ಶ್ರೀ ಯು.ಸಿ ಪೂಜೇರಿ, ಶ್ರೀಮತಿ ವರ್ಷ ಪಾಟೀಲ, ಶ್ರೀಮತಿ ಹೇಮಾ ವಿ ಹಿರೇಮಠ ಹಾಗೂ ವಿದ್ಯಾರ್ಥಿನಿಯರಿಗೆ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ನಿರ್ದೇಶಕ ಮಂಡಳಿಯವರು, ಪ್ರಾಚಾರ್ಯರು ಮತ್ತು ಬೋಧಕ ಮತ್ತು ಬೋಧಕೇತರ  ಸಿಬ್ಬಂದಿವರ್ಗದವರು  ಅಭಿನಂಸಿದ್ದಾರೆ. 


ಸುದ್ದಿ ಓದಿ