ಗುಳೇಗುಡ್ಡ

ಉತ್ತಮ ಮಳೆ: ರಸಗೊಬ್ಬರ ವಿತರಣೆ

ಉತ್ತಮ ಮಳೆ: ರಸಗೊಬ್ಬರ ವಿತರಣೆ

ಗುಳೇದಗುಡ್ಡ: ಕಳೆದ ವರ್ಷದಂತೆ  ಈ ವರ್ಷವು ಕೋವಿಡ್ನಿಂದ ಕೃಷಿಕರು ನಷ್ಟ ಅನುಭವಿಸಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದೂ, ಸಕರ್ಾರ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುತ್ತಿದೆ. ಅದರ ಸದುಪಯೋಗವನ್ನು  ರೈತರು ಪಡೆದುಕೊಳ್ಳಬೇಕೇಂದು ಹೇಳಿದರು ಲಾಯದಗುಂದಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ ಗೌಡರ ಹೇಳಿದರು.ಗುರುವಾರ ಅವರು ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಸಂಬಂಧಿಸಿದ ಎಲ್ಲ ರೈತರಿಗೆ ಸಬ್ಸಿಡಿಯ ದರದಲ್ಲಿ ರಸಗೊಬ್ಬರ ವಿತರಣೆ ಮಾಡಿ ಮಾತನಾಡಿ, ಮುಂಗಾರು ಬೆಳೆ ಬಿತ್ತನೆ ಆರಂಭವಾಗಿರುವುದರಿಂದ ರೈತರಿಗೆ ಸಬ್ಸಿಡಿಯ ದರದಲ್ಲಿ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೊರೋನಾ ಸಂಕಷ್ಟ ಕಾಲದಲ್ಲಿಯೂ ರೈತರು ಬಿತ್ತನೆ ಮಾಡಬೇಕಾಗುತ್ತದೆ. ಯವುದಕ್ಕೂ ಸಾಮಾಜಿಕ ಅಂತರ ಕಾಯ್ದುಕೊಂಡು, ಲಸಿಕೆ ಹಾಕಿಸಿಕೊಂಡು ಆರೋಗ್ಯದಿಂದ ಇರಬೆಕೆಂದು ಹೇಳಿದರು.  ವಿತರಣೆ ಮಾಡಿದ ರಸಗೊಬ್ಬರವನ್ನು ತಾಲೂಕಿನ ನಾಗರಾಳ, ಸಬ್ಬಲಹುಣಸಿ, ಆಸಂಗಿ, ಕೊಟ್ನಳ್ಳಿ, ಕಟಗಿನಹಳ್ಳಿ ಗ್ರಾಮದ ರೈತರು ಗೊಬ್ಬರ ಖರೀದಿಸಿ, ತಮ್ಮ ಚಕ್ಕಡಿಯಲ್ಲಿ ಹಾಕಿಕೊಂಡು ಹೋದರು. ಈ ಸಂದರ್ಭದಲ್ಲಿ ಲಾಯದಗುಂದಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.ರೈತರು ಗೊಬ್ಬರ ಖರೀದಿಸಿ ಚಕ್ಕಡಿಯಲ್ಲಿ ಹಾಕಿಕೊಂಡು ಹೋಗುತ್ತಿರುವುದು 

ಸುದ್ದಿ ಓದಿ