ಪದ್ಮಾವತಿ ದೇವಿಯ ಸುವರ್ಣ ಮೂರ್ತಿಗೆ ಅದ್ದೂರಿ ಸ್ವಾಗತ
ಆನೆ, ಕುದುರೆಗಳು 1008 ಪೂರ್ಣಕುಂಭ ಹೊತ್ತ ಸುಮಂಗಲೆಯರು, 25 ಕ್ಕೂ ಹೆಚ್ಚು ವಾದ್ಯ ವೃಂದಗಳು ಮೆರವಣಿಗೆಯಲ್ಲಿ ಭಾಗಿ
ಕಾಗವಾಡ 15: ಅಲ್ಲಿ ಇಲ್ಲಿ ಎಲ್ಲಿ ನೋಡಿದರಲ್ಲಿ ಲಕ್ಷಾಂತರ ಜೈನ ಹಾಗೂ ಜೈನೆತ್ತರ ಶ್ರಾವಕ-ಶ್ರಾವಕಿಯರಿಂದ ಪದ್ಮಾವತಿ ಮಾತಾಕೀ ಜೈ....ಎಂಬ ಜೈಘೋಷ, ಮುನಿಗಳು, ಆಚಾರ್ಯರು, ಸಾದ್ವಿಗಳ ಪೂಜೆ ಪುನಸ್ಕಾರ ಜೈಘೋಷಗಳು ಮೊಳಗುತ್ತಿದ್ದವು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ್ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಶೇಡಬಾಳ ಗ್ರಾಮದಿಂದ ಮೆರವಣಿಗೆಯ ಮೂಲಕ ಭವ್ಯ ಮೂರ್ತಿಗಳ ಸ್ವಾಗತ ಮಾಡುವ ಮೂಲಕ ಪುರ ಪ್ರವೇಶ ಕಾರ್ಯಕ್ರಮ ಜರುಗಿತು. ಮೆರವಣಿಗೆಯುದ್ದಕ್ಕೂ ಶ್ರಾವಕಿಯರು ಪೂರ್ಣ ಕುಂಭಗಳನ್ನು ಹೊತ್ತುಕೊಂಡು ಭವ್ಯ ಮೆರವಣಿಗೆಯೊಂದಿಗೆ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪದ್ಮಾವತಿ ಮಾತಾ ಕೀ ಜೈ, ಜೈನ ಮುನಿಕಿ ಜೈ, ಚೋವಿಸ ಭಗವಾನ ಕೀ ಜೈ ಎಂದು ಜೈ ಘೋಷಗಳನ್ನು ಹಾಕುತ್ತ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತು.
ಸೋಮವಾರ ದಿ. 15ರಂದು ಬೆಳಿಗ್ಗೆ ಶೇಡಬಾಳ ಮಾರ್ಗವಾಗಿ ಸುಮಾರು 3 ಕಿಮೀ ದೂರದಿಂದ ಸೊಂದಾ ಮಠದ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ನಾಂದಣಿ ಮಠದ ಜಿನಸೇನ ಭಟ್ಟಾರಕ ಮಹಾಸ್ವಾಮಿಗಳ ಸಾನಿಧÀ್ಯದಲ್ಲಿ ಬೆಳ್ಳಿಯ ರಥದಲ್ಲಿ ಮಂದಿರದ ಮುಖ್ಯಸ್ಥ ಶೀತಲಗೌಡ ಪಾಟೀಲ ದಂಪತಿಯವರು ವಿರಾಜಮಾನರಾಗಿರುವ ಭವ್ಯ ಮೆರವಣಿಗೆ ಜರುಗಿತು.
ಭವ್ಯ ಮೆರವಣಿಗೆ ಮೂಲಕ ಆಗಮಿಸಿದ ಪದ್ಮಾವತಿ ದೇವಿಯ ಸುವರ್ಣ ಮೂರ್ತಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ ಕತ್ತಿ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಅಥಣಿ ಶಾಸಕರು ಹಾಗೂ ಕೊಳಗೇರಿ ಮಂಡಳಿಯ ಅಧ್ಯಕ್ಷ ಮಹೇಶ ಕುಮಠಳ್ಳಿ ಮಾಜಿ ಶಾಸಕÀ ಮೋಹನರಾವ್ ಶಹಾ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ, ಸಂಜಯ ಪಾಟೀಲ, ಮುಖಂಡರಾದ ಕಿರಣಕುಮಾರ ಪಾಟೀಲ, ಶ್ರೀನಿವಾಸ ಪಾಟೀಲ, ಜಿಲ್ಲಾ ಕೆಎಂಎಫ್ ನಿರ್ದೇಶಕ ಅಪ್ಪಾಸಾಬ ಅವತಾಡೆ, ಚಂದನ ಶಿರಗಾಂವಕರ, ಅಭಯಕುಮಾರ ಅಕಿವಾಟೆ, ವೃಷಭಗೌಡ ಪಾಟೀಲ, ಅಣ್ಣಾಗೌಡ ಪಾಟೀಲ, ಅಪ್ಪಾಸಾಬ ಚೌಗುಲಾ, ಜಯಪಾಲ ಯರಂಡೋಲಿ, ಮನೋಜ ಕುಸನಾಳೆ, ಪ್ರಮೋದ ಹೊಸುರೆ, ದಾದಾ ಪಾಟೀಲ, ವಜ್ರಕುಮಾರ ಮಗದುಮ, ವಿನಾಯಕ ಶಿಂಧೆ, ವಿಜಯ ಶಿಂಧೆ, ಸೇರಿದಂತೆ ಸಾವಿರಾರು ಭಕ್ತರು ಆಗಮಿಸಿ ಭಕ್ತಿಯಿಂದ ದೇವಿಯ ದರ್ಶನ ಪಡೆದು ಸುವರ್ಣ ಮೂರ್ತಿಗೆ ಪುಪ್ಪವೃಷ್ಟಿ ನೆರವೇರಿಸಿದರು.
ಈ ವೇಳೆ ಮೆರವಣಿಗೆಯಲ್ಲಿ ಆನೆಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಣ್ಣಾಗೌಡ ಪಾಟೀಲ ದಂಪತಿ ಸಮೇತ ವಿರಾಜಮಾನರಾಗಿ ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಆನೆ, ಕುದುರೆಗಳು 1008 ಪೂರ್ಣಕುಂಭ ಹೊತ್ತ ಸುಮಂಗಲೆಯರು, 25 ಕ್ಕೂ ಹೆಚ್ಚು ವಾದ್ಯ ವೃಂದಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದ ಸಾವಿರಾರು ಶ್ರಾವಕ-ಶ್ರಾವಕಿಯರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಜೈನ ಹಾಗೂ ಜೈನೇತರರು ಬಿಳಿ ಬಟ್ಟೆಗಳನ್ನು ಧರಿಸಿಕೊಂಡು ಜಾತ್ಯಾತೀತವಾಗಿ ಪಾಲ್ಗೊಂಡಿರುವುದು ಎದ್ದು ಕಾಣುತ್ತಿತ್ತು.
ದೇಶದ ಮೂಲೆ-ಮೂಲೆಗಳಿಂದ ವಿವಿಧ ವಾದ್ಯ ವೃಂದಗಳು, ಕುದುರೆ, ಆನೆಗಳು, ರಥ, ಸೇರಿದಂತೆ ವಿವಿಧ 24 ಟ್ರ್ಯಾಕ್ಟರಗಳಲ್ಲಿ 24(ಚೋವಿಸ್) ತೀರ್ಥಂಕರರ ಮೂರ್ತಿಗಳನ್ನು ಇಟ್ಟು ವಾಧ್ಯ ವೈಭವಗಳೊಂದಿಗೆ ಪ್ರಾರಂಭವಾದ ಮೆರವಣಿಗೆ ಸಭಾ ಮಂಟಪವನ್ನು ಏಳು ಬಾರಿ ಪ್ರದಕ್ಷಿಣೆ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಟಕಳ ಜಿಲ್ಲೆಯ ಚಂಡಿವಾದ್ಯ, ಕರಂಡಳ, ಮಹಿಳೆಯರಿಂದ ಲೇಜಿಂ, ಕೋಲಾಟ, 2500 ಮಹಿಳೆಯರು ಜಲಕುಂಭ ತೆಗೆದುಕೊಂಡು ಪಾಲ್ಗೊಂಡಿದ್ದರು. ಆನೆ, 5 ಕುದುರೆ, ನಾದಸ್ವರ, 54 ಶಂಖ ನಾದ, ಮಂದಿರದ ಹಕ್ಕದಾರರಿಂದ ದೀಪದ ದಿವಟಿ, ಬೆಳ್ಳಿಯ ರಥದೊಂದಿಗೆ ಜರುಗಿದ ಮೆರವಣಿಗೆ ಭಕ್ತಿಸಾಗರ ಎದ್ದು ಕಾಣುತ್ತಿತ್ತು.
ಮೆರವಣಿಗೆಯನ್ನು ವೀಕ್ಷಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸುಮಾರು 50 ಸಾವಿರ ಶ್ರಾವಕ-ಶ್ರಾವಕಿಯರು ರಸ್ತೆಯ ಎರಡು ಬದಿಗೆ ನಿಂತು ಜೈ ಘೋಷಗಳನ್ನು ಹಾಕುತ್ತ ಮೆರವಣಿಗೆಯ ಮೇಲೆ ಪುಷ್ಪವೃಷ್ಟಿ ಮಾಡಿದರು.
ಈ ಸಮಾರಂಭ ನಾ ಭೂತೊ ನಾ ಭವಿಷ್ಯತವಾಗಿತ್ತು ಎಂದು ಸದ್ಭಕ್ತರು ಹೇಳಿಕೊಳ್ಳುತ್ತಿದ್ದರು.