ಕಾಗವಾಡ

ಚಿನ್ನದ ಮೂರ್ತಿ ಪುರಪ್ರವೇಶ

ಚಿನ್ನದ ಮೂರ್ತಿ ಪುರಪ್ರವೇಶ

ಮಧುವನಗಿತ್ತಿಯಂತೆ ಸಿಂಗಾರಗೊಂಡ ಉಗಾರ ಬಿಕೆ ಗ್ರಾಮ 

ಕಾಗವಾಡ 14: ಇತಿಹಾಸ ಪ್ರಸಿದ್ದ ಹಾಗೂ ಭಕ್ತರ ಆರಾಧ್ಯ ದೇವಿಯಾಗಿರುವ ಶ್ರೀ ಪದ್ಮಾವತಿ ದೇವಿಯ ಚಿನ್ನದ ಮೂರ್ತಿ ಪುರ ಪ್ರವೇಶ ಕಾರ್ಯಕ್ರಮಕ್ಕೆ ಉಗಾರ ಬಿಕೆ ಗ್ರಾಮ ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ.

ಅಲ್ಲಲ್ಲಿ ಕಟ್ಟಿರುವ ತಳಿರು ತೋರಣಗಳು, ಭವ್ಯ ಸ್ವಾಗತ ಕೋರುತ್ತಿವೆ. ಪ್ರಮುಖ ರಸ್ತೆ ಹಾಗೂ ಗಲ್ಲಿಗಲ್ಲಿಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಕಣ್ಮನ ಸೆಳೆಯುತ್ತಿವೆ. ಜೈನ ಸಮಾಜದ ಧರ್ಮ ದ್ವಜಗಳು ಭಕ್ತಾಧಿಗಳಿಗೆ ಶುಭ ಕೋರುತ್ತಿವೆ. ಒಟ್ಟಾರೆಯಾಗಿ ಉಗಾರ ಬಿಕೆ ಗ್ರಾಮದಲ್ಲಿ ಸಂಬ್ರಮ ಮನೆ ಮಾಡಿದೆ. ಉಗಾರ ಗ್ರಾಮದಲ್ಲಿ ನೆಲೆ ನಿಂತಿರುವ ಇತಿಹಾಸ ಪ್ರಸಿದ್ದ ಚಿನ್ನದ ಮೂರ್ತಿಯ ಪುರ ಪ್ರವೇಶದ ಅದ್ದೂರಿ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ

ಇದೀಗ 3.5 ಕೆಜಿ ತೂಕದ ಚಿನ್ನದ ಪದ್ಮಾವತಿ ದೇವಿಯ ಮೂರ್ತಿಯನ್ನು ಸಿದ್ದ ಪಡಿಸಿದ್ದು, ಸೋಮವಾರ ದಿ 15 ರಂದು ಮೂರ್ತಿಯ ಪುರ ಪ್ರವೇಶ ಜರುಗಲಿದ್ದು, ಅದರಲ್ಲಿ ಪ.ಪೂ.ಶ್ರೀ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಸ್ವಾದಿ ದಿಗಂಬರ ಜೈನ ಮಠ ಸೋಂದಾ ಇವರ ಪಾವನ ಸಾನಿಧ್ಯ. ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಮತ್ತು ಪ.ಪೂ.ಶ್ರೀ ಸ್ವಸ್ತಿಶ್ರೀ ಜಿನಸೇನಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ಜೈನ ಮಠ ನಾಂದಣಿ ಇವರ ಸಾನಿದ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.

ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಶ್ರಾವಕ ರತ್ನ ರಾವಸಾಹೇಬ ಪಾಟೀಲ ಪ್ರಮುಖ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಮಹಾರಾಷ್ಟ್ರದ ಸಚಿವ ರಾಜೇಂದ್ರ ಯಪಾಟೀಲ(ಯಡ್ರಾಂವಕರ) ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಸಂಸದರು ಹಾಲಿ ಶಾಸಕರಾದ ಪ್ರಕಾಶ ಅವಾಡೆ, ಸೇರಿದಂತೆ ಇನ್ನೀತರ ಪ್ರಮುಖರು ಉಪಸ್ಥಿತಯಿರುವರು.

ಸುದ್ದಿ ಓದಿ