ಕಾಗವಾಡ

ಅದ್ದೂರಿಯಿಂದ ಬಸವಣ್ಣ ದೇವರ ರಥೋತ್ಸವ

ಅದ್ದೂರಿಯಿಂದ ಬಸವಣ್ಣ ದೇವರ ರಥೋತ್ಸವ
ಶೇಡಬಾಳ ಗ್ರಾಮದೇವತೆ ಶ್ರೀ ಬಸವಣ್ಣ ದೇವರ ಜಾತ್ರೆ ನಿಮಿತ್ಯ ಜರುಗಿದ ರಥೋತ್ಸವದ ದೃಶ್ಯ.

ಕಾಗವಾಡ 17: ಶೇಡಬಾಳ ಗ್ರಾಮದ ಗ್ರಾಮದೇವತೆ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ಸಂಜೆ ಅಶ್ವೀನಿ ನಕ್ಷತ್ರ ಶ್ರೀ ಘಳಿಗೆಯಲ್ಲಿ ಭಕ್ತರ ಸಾನಿಧ್ಯದಲ್ಲಿ ಭವ್ಯ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕೋವಿಡ್ ನಿಯಮಗಳು ಪಾಲನೆ ಮಾಡುತ್ತಾ ಜಾತ್ರಾ ಕಮೀಟಿಯ ಮುಖ್ಯಸ್ಥರು, ಗೌಡರ ಮನೆತನದ ಮುಖಂಡರು, ಸಹ ಅನೇಕ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿ ಕೈಯಿಂದ ರಥ ಎಳೆದು ಜಾತ್ರೆ ಯಶಸ್ವಿಗೊಳಿಸಿದರು.

ಮಂಗಳವಾರ ಬೆಳಿಗ್ಗೆಯಿಂದ ಶ್ರೀ ಬಸವಣ್ಣ ದೇವರ ಮಂದಿರದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಜರುಗಿತು. ಬಸವೇಶ್ವರ ದೇವಸ್ಥಾನ ಸಮೀತಿಯ ಗೌಡರ ಅಧ್ಯಕ್ಷತೆಯಲ್ಲಿ ಭವ್ಯ ಪಲ್ಲಕ್ಕಿ ಮೇರವಣಿಗೆ ನೇರವೆರಿತು. ಭಕ್ತರಿಂದ ಭವ್ಯ ರಥಕ್ಕೆ ಶ್ರೀಫಳ ಅರ್ಪಿಸಿ ಗ್ರಾಮದ ಮುಖಂಡರ ಉಪಸ್ಥಿತಿಯಲ್ಲಿ ಎಲ್ಲ ಸಮಾಜದ ಪ್ರಮುಖರ ಕೈಯಿಂದ ರಥ ಎಳೆದು ರಥೋತ್ಸವ ಆಚರಿಸಿದರು. ಸರ್ವಧರ್ಮದ ಮುಖಂಡರು ಒಂದುಗೂಡಿ ರಥೋತ್ಸವ ಆಚರಿಸಿದರು.

ಸುದ್ದಿ ಓದಿ