ದೇವಿಗೆ ಬಿಟ್ಟ ದೇವರ ಕೋಣ ರೈಲಿಗೆ ಬಡಿದು ಸಾವು
ರಾಣಿಬೆನ್ನೂರ 30: ತಾಲೂಕಿನ ಮಾಕನೂರ ಗ್ರಾಮದ ಗ್ರಾಮದೇವತೆ ಮರಡಿ ಕೆಂಚಮ್ಮ ದೇವಿಗೆ ಬಿಟ್ಟ ದೇವರ ಕೋಣ ಶನಿವಾರ ರೈಲಿಗೆ ಬಡಿದು ಸ್ಥಳದಲ್ಲಿವೇ ಮೃತಪಟ್ಟ ಘಟನೆ ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ಬಳಿ ನಡೆದಿದೆ.
ವಿಷಯ ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ಕೋಣನ ಕಳೆಬರವನ್ನು ಗ್ರಾಮದ ಮರಡಿಕೆಂಚಮ್ಮ ದೇವಸ್ಥಾನಕ್ಕೆ ತಂದು ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನ ಆವರಣದಲ್ಲಿ ಶವಸಂಸ್ಕಾರ ಮಾಡಿದರು. ಮೆರವಣಗೆಯುದ್ದಕ್ಕೂ ಪ್ರತಿ ಮನೆಯ ಮುಂದೆ ಮಹಿಳೆಯರು ಆರತಿ ಬೆಳಗಿ ಅಂತಿಮ ದರ್ಶನ ಪಡೆದು ನಮಸ್ಕರಿಸುವುದು ಕಂಡು ಬಂದಿತು.
ಮೆರವಣೆಗೆಯಲ್ಲಿ ಗ್ರಾಮದ ಮುಖಂಡರಾದ ಈರಣ್ಣ ಹಲಗೇರಿ, ಕೆಂಚಪ್ಪ ಪೂಜಾರ, ಭೀಮಪ್ಪ ಪೂಜಾರ, ಸಿದ್ಧಾರೂಢ ಕುಂಬಳೂರ, ದೇವಿಯ ಆರಾಧಕರಾದ ದೊಡ್ಡಗೌಡ್ರ, ಭರಮಗೌಡ್ರ, ನಂದಿಗಾವಿ, ಕುರಗೋಡಪ್ಪನವರ ಬಂಧುಗಳು ಹಾಗೂ ಗಾಮ್ರಸ್ಥರು ಇದ್ದರು.