ರಾಣೆಬೆನ್ನೂರ

ಮಕ್ಕಳು ಓದಿನ ಜೊತೆಗೆ ಕೌಶಲ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ: ಪ್ರಕಾಶ ಕೋಳಿವಾಡ

ಮಕ್ಕಳು ಓದಿನ ಜೊತೆಗೆ ಕೌಶಲ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ  ಗುರಿ ಮುಟ್ಟಲು ಸಾಧ್ಯ: ಪ್ರಕಾಶ ಕೋಳಿವಾಡ

ರಾಣೇಬೆನ್ನೂರು,19:  ಮಕ್ಕಳು ಓದಿನ ಜೊತೆಗೆ ಕೌಶಲ್ಯಗಳನ್ನು ವೃದ್ಧಿಸಿಕೊಂಡಾಗ ಮಾತ್ರ ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಗುರಿ ಮುಟ್ಟಲು ಸಾಧ್ಯ ಇದಕ್ಕೆ ಪೂರಕವಾಗಿ ಸ್ಮಾರ್ಟ್‌ ಕ್ಲಾಸ್‌ಗಳು ಅಭ್ಯಾಸ ಮಟ್ಟವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. 

ನಗರದ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಂ-7 ರ ಲ್ಲಿ ನಡೆದ ತಾಲೂಕಿನ 100 ಸರಕಾರಿ ಶಾಲೆಗಳಲ್ಲಿ ಶಾಸಕರ ಅನುದಾನದಲ್ಲಿ ಭಾರತದ 41 ಕ್ಲಬ್‌ಗಳ ಸಂಘದ ಸಹಯೋಗದಲ್ಲಿ ಸ್ಥಾಪಿಸಿಲಾದ ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.  

ಸ್ಮಾರ್ಟ್‌ ಕ್ಲಾಸ್‌ಗಳು ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೇ ಮಕ್ಕಳು ಇಲ್ಲಿ ಬಹುಬೇಗ ವಿಷಯಗಳನ್ನು ಗ್ರಹಿಸುತ್ತಾರೆ ಎಂದರು. ಜೀವನದಲ್ಲಿ ಸರಿಯಾದ ರೀತಿಯಲ್ಲಿ ಬದುಕಬೇಕಾದರೆ ನಮಗೆ ಬೇಕಾದುದನ್ನು ಪಡೆಯಬೇಕಾದರೆ ಮನುಷ್ಯನಿಗೆ ಕೌಶಲ್ಯ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಯಾವುದೇ ಒಂದು ಉದ್ಯೋಗ ಅಥವಾ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರು ಕೌಶಲ್ಯ ಬಹಳ ಮುಖ್ಯವಾಗಿದೆ. ಕೌಶಲ್ಯ ಇದ್ದವರಿಗೆ ಉದ್ಯೋಗವಕಾಶಗಳು ಹೆಚ್ಚು. ಕೌಶಲ್ಯ ಇಲ್ಲದಿದ್ದರೆ ನೀವು ಎಷ್ಟೇ ಓದಿದರು ಉಪಯೋಗಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಇಂಗ್ಲೀಷ್ ಭಾಷೆ ಹಾಗೂ ಕಂಪ್ಯೂಟರ್ ಜ್ಞಾನವನ್ನು ಪಡೆದುಕೊಳ್ಳುವುದು ಅತೀ ಅವಶ್ಯಕ ಎಂದು ಕೋಳಿವಾಡ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.  

41 ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಅಸೋಸಿಯೇಶನ್ ಎಆರ್ ಶ್ರೀನಿವಾಸ  ಸರಸ್ವತುಲು ಮಾತನಾಡಿ, ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರಿಕರಿಸುವುದ ರಿಂದ ಪಠ್ಯದ ವಿಷಯಗಳು ಬಹುಬೇಗನೇ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಶಿಕ್ಷಕರು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಉದಾಹರಣೆಗಳ ಮೂಲಕ ತೋರಿಸುವುದರಿಂದ ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದರು.      

 ವಿವೇಕ ಪಿ ಆರ್, ಕಿರಣ ಹೆಬಸೂರು , ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ್ ಅಡಿಗ, ಅನುರಾಗ ಮೆಹರಾನ್, ಗೀರೀಶ ಪದಕಿ, ಗಿರಿರಾಜ  ಎಂಡನೂರು, ಪರಶುರಾಮ ಸಲಗರ, ಪ್ರಶಾಂತ ರಾಮನಗೌಡ್ರ, ಅಲಿಂ, ವಿರುಪಾಕ್ಷಪ್ಪ, ವಿ.ಸಿ.ತಿವಾರಿ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ನಾಸಿಗರ,ಆನಂದಗೌಡ ಹೆಚ್‌.ಹೇಮಣ್ಣ ಕಾಕೋಳ.ಕುಬೇರ​‍್ಪ ಕೊಂಡಜ್ಜಿ. ಸೇರಿದಂತೆ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಮಂಜನಾಯ್ಕ ಎಸ್ ನಿರೂಪಿಸಿ, ಜೆ. ಜಿ.. ಗವೇನವರ  ವಂದಿಸಿದರು. 


ಸುದ್ದಿ ಓದಿ