ತುಂಗಭದ್ರಾ ಪ್ರೌಢಶಾಲೆಯಲ್ಲಿ ವೈಭವದ ಗುರುವಂದನಾ ಸ್ನೇಹ ಸಮ್ಮಿಲನ
ಹೂವಿನ ಹಡಗಲಿ 14: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಆದ್ಯತೆ ನೀಡಬೇಕು ಎಂದು ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ ಎಂ ಧರ್ಮಣ್ಣ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಭಾನುವಾರ 2000-01್ಘ 2003-04 ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಆಂಗ್ಲ ಭಾಷೆಯಲ್ಲಿ ವ್ಯಾಮೋಹದಿಂದ ಕನ್ನಡಕ್ಕೆ ಹಿನ್ನಡೆ ಉಂಟಾಗಿದೆ. ತುಂಗಭದ್ರಾ ವಿದ್ಯಾ ಸಂಸ್ಥೆಯು ಮೊದಲಿನಿಂದಲೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದ ಹೆಗ್ಗಳಿಕೆ ಹೊಂದಿದೆ ಎಂದು ತಿಳಿಸಿದರು.ಸಂಸ್ಥೆಯ ಪ್ರಾಥಮಿಕ ಪ್ರೌಢಶಾಲೆಗಳಲ್ಲಿ ಓದುವ ಮಕ್ಕಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.ಕನ್ನಡ ಭಾಷೆಯಲ್ಲಿ ಓದಿದವರೇ ಹೆಚ್ಚು ಸಾಧನೆ ಮಾಡಿದ್ದಾರೆ.ಸಂಸ್ಥೆ ಕಟ್ಟಿ ಬೆಳಸಿದ ಸರ್ವ ಪದಾಧಿಕಾರಿಗಳ ಪರಿಶ್ರಮ ಸ್ಮರಿಸಿದರು. ಸಂಸ್ಥೆಯ ತುಂಗಭದ್ರಾ ಪ್ರಾಥಮಿಕ ಪ್ರೌಢಶಾಲೆಯ ಹಳೆಯ ಹಾಗೂ ಈಗಿನ ಒಟ್ಟು 56 ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ನೆರವೇರಿಸಲಾಯಿತು.
ಶಿಕ್ಷಕರಾದ ಹೇಮಲತಾ ಗಾಡ್ವಿನ್, ಹಣ್ಣಿ ಚನ್ನಪ್ಪ, ಮಲ್ಲಮ್ಮ, ಜ್ಯೋತಿ, ದೇವಿರಮ್ಮ, ಸುವರ್ಣ, ಶಿಲ್ಪಿ ನಿರಂಜನ ಮೂರ್ತಿ, ಸಿದ್ದೇಶ್, ದ್ವಾರಕೀಶ್ ರೆಡ್ಡಿ, ವೈ ಜಯಮ್ಮ, ಕಡ್ಲಿ ಗುರುಬಸವರಾಜ ಸ್ವಾಮಿನಾಥ ರಾಮಸ್ವಾಮಿ ಇತರರು ಅಭಿಪ್ರಾಯ ತಿಳಿಸಿದರು. ಮುಖ್ಯ ಗುರುಗಳಾದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು.
ಹಳೆಯ ವಿದ್ಯಾರ್ಥಿಗಳಾದ ಜಾವೀದ್, ರಾಘವೇಂದ್ರ ಭಟ್, ದೀಪಾ ಸೊಪ್ಪಿನ, ಮಧು ಪ್ರಸಾದಿ ಮಠ, ಸುದರ್ಶನ್ ಬಣಕಾರ, ತರುಣ್, ಸಂಜೋತಾ, ಕವಿತಾ ಸೊಪ್ಪಿನ, ಬಸವರಾಜ, ಶ್ರೇಣಿಕ್ ದೇಸಾಯಿ ಮನದಾಳದ ಮಾತು ಆಡಿದರು. ಎಂ. ಖ. ಪವಿತ್ರ, ಚೇತನ್ ಹೊನ್ನಪ್ಪನವರ್, ರವಿ ಕುಮಾರ್ ಎಸ್ ಎಂ, ಗಿರಿರಾಜ, ಪುನೀತ್ ಆರ್, ಪ್ರದೀಪ್, ಕೆ ಚೇತನ್, ಕೆ ಅಶೋಕ್, ಸುನೀಲ್ ಶೆಟ್ಟಿ , ವೀರೇಶ ಇತರರು ಗುರುವಂದನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.