ರಾಣೆಬೆನ್ನೂರ

ಇಂಗ್ಲೀಷ್ ಭಾಷೆಗಳ ವೈಭವಿಕರಣ: ಸಂಘಟನೆಗಳ ಆಕ್ರೋಶ ಪ್ರತಿಭಟನೆ

ಇಂಗ್ಲೀಷ್ ಭಾಷೆಗಳ ವೈಭವಿಕರಣ: ಸಂಘಟನೆಗಳ ಆಕ್ರೋಶ ಪ್ರತಿಭಟನೆ

ರಾಣೇಬೆನ್ನೂರ 02:  ರೈಲ್ವೆ ಸ್ಟೇಟಷನ ರಸ್ತೆಯಲ್ಲಿ ಇರುವ ರಾಮದೇವ ಪೈಪ್ ಅಂಗಡಿಗೆ ವಿವಿಧ ಸಂಘಟನೆಗಳಿಂದ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು.ಒಂದೇ ಮಾತರಂ ಸ್ವಯಂ ಸೇವಾ ಯುವಕರ ಸಮಿತಿಯ ಅಧ್ಯಕ್ಷರಾದ ಜಗದೀಶ್ ಕೆರೋಡಿ ಮಾತನಾಡಿ ಅಂಗಡಿಯ ಮಾಲೀಕರು ನಾಮಫಲಕದಲ್ಲಿ ಆಂಗ್ಲ ಭಾಷೆಯನ್ನು ಹೆಚ್ಚಾಗಿ ಬಳಸಿದ್ದಾರೆ. ತಕ್ಷಣವೇ ಈ ನಾಮಾ ಫಲಕವನ್ನು ತೆಗೆದು ಕನ್ನಡದ ದೊಡ್ಡ ದೊಡ್ಡ ಅಕ್ಷರದಲ್ಲಿ ನಾಮಫಲಕವನ್ನು ಅಳವಡಿಸಬೇಕೆಂದು ಒತ್ತಾಯಿಸಿದರು. ತಕ್ಷಣವೇ ಅಂಗಡಿಯ ಮಾಲೀಕ ಎಚ್ಚೆತ್ತುಕೊಂಡು ಇನ್ನೊಂದು ವಾರದಲ್ಲಿ ಈ ಇಂಗ್ಲಿಷ್ ನಾಮಫಲಕ ತೆಗೆದು ಕನ್ನಡ ನಾಮಫಲಕ ಹಾಕುತ್ತೇವೆ ಎಂದು ಸ್ಪಷ್ಟ ಭರವಸೆ ಕೊಟ್ಟ ನಂತರ ಪ್ರತಿಭಟನೆಯನ್ನು ವಾಪಸ್ ಪಡೆದರು.

ಇತ್ತೀಚಿಗೆ ರಾಣಿಬೆನ್ನೂರ ನಗರದಲ್ಲಿ ಅಂಗಡಿ, ಶಾಲಾ, ಕಾಲೇಜು, ಕಾಂಪ್ಲೆಕ್ಸ್‌ ಗಳಲ್ಲಿ ಕನ್ನಡ ಬದಲಾಗಿ ಇಂಗ್ಲಿಷ್ ಭಾಷೆಯ ನಾಮಫಲಕ ಅಳವಡಿಕೆ ಹೆಚ್ಚಾಗುತ್ತಿದೆ. ಆದರಿಂದ ಸ್ಥಳೀಯ ನಗರಸಭೆ ಆಡಳಿತ ಮಂಡಳಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಆಂಗ್ಲ ಭಾಷೆಯ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯಬೇಕಾಗುತ್ತದೆ. ನಗರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅವುಗಳನ್ನು ತೆರವುಗೊಳಿಸಿ ಕನ್ನಡ ನಾಮ ಫಲಕವನ್ನು ಅಳವಡಿಸಬೇಕೆಂದು ಎಚ್ಚರಿಸಲಾಯಿತು. ಕರ್ನಾಟಕ ಕನ್ನಡ ಅಭಿವೃದ್ದಿ ಪ್ರಾಧಿಕಾರದ ನಿಯಮದ ಪ್ರಕಾರ ರಾಜ್ಯದಲ್ಲಿ ಕನ್ನಡ ನಾಮಫಲಕಗಳ ಅಡವಡಿಕೆಗೆ ಶೇಕಡ  80ರಷ್ಟು ಕನ್ನಡ ಭಾಷೆಯನ್ನು ಹಾಕಬೇಕು. ಎನ್ನುವ ಕಡ್ಡಾಯ ನಿಯಮ ಜಾರಿಯಲ್ಲಿದ್ದರು, ವ್ಯಾಪಾರಿಗಳು ಮಾತ್ರ ಈ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇದೇ ವೇಳೆ ಯಲ್ಲಪ್ಪ ಚಿಕ್ಕಣ್ಣನವರ, ಪ್ರದೀಪ್ ಚಲವಾದಿ, ರಾಜು ಓಲೇಕಾರ್, ರವಿ ಕೆರೋಡಿ, ಧರ್ಮಣ್ಣ ಬಡಿಗೇರ್, ಹುಲಿಗೆಪ್ಪ ಚಲವಾದಿ, ರಮೇಶ್ ಮಾಗೋಡ, ಮಾಂತೇಶ ವಡ್ಡರ್, ಅಜ್ಜಪ್ಪ ನಾಯಕ್ ವಿವಿಧ ಸಂಘಟನೆಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ