ಬೈಲಹೊಂಗಲ

ತಮ್ಮ ಸೇವೆಗೆ ಮತ್ತೊಮ್ಮೆ ಅವಕಾಶ ಕೊಡಿ: ಕವಟಗಿಮಠ

ತಮ್ಮ ಸೇವೆಗೆ ಮತ್ತೊಮ್ಮೆ ಅವಕಾಶ ಕೊಡಿ: ಕವಟಗಿಮಠ

ಲೋಕದರ್ಶನ ವರದಿ 


ಬೈಲಹೊಂಗಲ 05: ಕಳೆದ ಎರಡು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯನಾಗಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನ ಒದಗಿಸಿ ಸಾಕಷ್ಟು ಅಭಿವೃದ್ಧಿ ಮಾಡಿದ ಸಂತಸ ಇದೆ.  ಇದೆ ಡಿ.10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಮತ್ತೊಮ್ಮೆ ತಮ್ಮ ಸೇವೆಗೆ ಮಾಡಲು  ಆಯ್ಕೆ ಮಾಡಬೇಕೆಂದು ಮಹಾಂತೇಶ ಕವಟಗಿಮಠ ಮನವಿ ಮಾಡಿದರು.  

     ಅವರು ಭಾನುವಾರ ಬಿಜೆಪಿ ಕಚೇರಿಯಲ್ಲಿ ಚುನಾಯಿತ ಸದಸ್ಯರ ಪ್ರಚಾರ ಸಭೆೆಯಲ್ಲಿ ಮಾತನಾಡಿ, ವಿಧಾನ ಪರಿಷತ್ ಚುನಾವಣೆ ಬಹಳ ಮಹತ್ವಪೂರ್ಣವಾಗಿದೆ. ಚುನಾಯಿತ ಸದಸ್ಯರಿಂದ ಚುನಾವಣೆ ಆಗುವ ಚುನಾವಣೆ ಇದು. ಜಿಲ್ಲೆಯಲ್ಲಿ  506 ಗ್ರಾಪಂ., 1826 ಹಳ್ಳಿ, 18 ವಿಧಾನಸಭಾ ಕ್ಷೇತ್ರ, 13 ಪುರಸಭೆ, 17 ಪಟ್ಟಣ ಪಂಚಾಯಿತಿ, 3 ಮಹಾನಗರ ಸಭೆ, 3 ನಗರಸಭೆ, 1 ಮಹಾನಗರ ಪಾಲಿಕೆೆ,  9500 ಮತದಾರರು ಇದ್ದಾರೆ.  ನಾನು ನಿಮ್ಮ ಭಾಗದ ಅಭಿವೃದ್ಧಿಗಾಗಿ ನಿಮ್ಮ ಧ್ವನಿಯಾಗಿ ಕೆಲಸ ನಿರ್ವಹಿಸುವೆ ಎಲ್ಲರೂ ಆಶೀರ್ವದಿಸಬೇಕೆಂದು ಮನವಿ ಮಾಡಿದರು.  

  ಲೋಕಸಭಾ ಸದಸ್ಯೆ ಮಂಗಳಾ ಅಂಗಡಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಗುರುಪಾದ ಕಳ್ಳಿ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಪುರಸಭೆ ಸದಸ್ಯರು, ಗ್ರಾಪಂ.ಸದಸ್ಯರು ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು. 


ಸುದ್ದಿ ಓದಿ