ಹಾಲು ಮಣ್ಣಿಗೆ ಎರೆಯುವ ಬದಲು ಮಕ್ಕಳಿಗೆ ಕೊಡಿ: ಕೊಲೇರ
ರಾಣೇಬೆನ್ನೂರು 22: ಉತ್ತರ ಕರ್ನಾಟಕದ ವಿಶಿಷ್ಟ ಹಬ್ಬವಾದ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುತ್ತದೆ. ನಿಜವಾದ ನಾಗರ ಕಂಡರೆ ಅದನ್ನು ಹೊಡೆಯುತ್ತಾರೆ. ಕಲ್ಲಿನ ನಾಗರ ಕಂಡರೆ ಹಾಲು ಎರೆಯುತ್ತಾರೆ. ಇಂತಹ ಮೂಡನಂಬಿಕೆಯನ್ನು ಸಮಾಜದಲ್ಲಿ ಇನ್ನೂ ಇದೆ ಅಂದರೆ ಅದು ಜನರ ಮನೋಭಾವನೆಗೆ ಬಿಟ್ಟದ್ದು, ಪೌಷ್ಟಿಕ ಹಾಲು ಮಣ್ಣು ಪಾಲಾಗುತ್ತಿದೆ. ಜನರು ಇದನ್ನು ಮನವರಿಕೆ ಮಾಡಿಕೊಂಡು ಅದನೇ ಬಡವರ ಮಕ್ಕಳಿಗೆ ಹಾಲನ್ನು ನೀಡಿದರೆ ಅವರು ಸದೃಢವಾಗಿ ಬೆಳೆಯುತ್ತಾರೆ ಎಂದು ತಾಲೂಕ ಮಾನವ ಬಂದುತ್ವ ವೇದಿಕೆ ಸಂಚಾಲಕ ಕರಬಸಪ್ಪ ಎಚ್ ಕೂಲೇರ ಹೇಳಿದರು. ಸೋಮವಾರ ಮಾನವ ಬಂದತ್ವ ವೇದಿಕೆ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಇಲ್ಲಿನ ಹೊರವಲಯದ ಕಮಲಾ ನಗರದಲ್ಲಿ ಅಲೆಮಾರಿ ಜನಾಂಗದವರಾದ ಎಳವರ ಗುಡಿಸಲು ನಿವಾಸಿಗಳ ಮಕ್ಕಳಿಗೆ ಮತ್ತು ವೃದ್ಧರನ್ನು ಭೇಟಿ ಮಾಡಿ ಹಾಲು, ಹಣ್ಣು, ಸಿಹಿ ತಿನಿಸುಗಳನ್ನು ವಿಸ್ತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚಮಿಯ ಹಬ್ಬದ ಹೆಸರಿನಲ್ಲಿ ಮೌಡ್ಯಾಚರಣೆ ಮಾಡಲಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಂಥವರಿಗೆ ಪೌಷ್ಟಿಕವಾಗಿರುವ ಅಮೃತ ಹಾಲನ್ನು ನೀಡಿ ಹಬ್ಬದ ನೆನಪಲ್ಲಾದರು ನಾವುಗಳು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆ ಮಾಡಿ. ಹಾಲು ಹಣ್ಣು ಸಿಹಿ ನೀಡುವ ಮೂಲಕ ಮಾದರಿಯಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಕೆಪಿಸಿಸಿ ರಾಜ್ಯ ಎಸ್ಟಿ ಘಟಕದ ಉಪಾಧ್ಯಕ್ಷ ಚಂದ್ರಪ್ಪ ಬೇಡರ ಮಾತನಾಡಿ ಉತ್ತರ ಕರ್ನಾಟಕದ ವಿಶೇಷವಾಗಿ ಎಲ್ಲರೂ ಈ ಹಬ್ಬವನ್ನು ಆಚರಿಸುತ್ತಾರೆ. ಕಲ್ಲಿನ ಹಾವು, ಹುತ್ತಕ್ಕೆ ಹಾಲೇರೆಯದೆ ಅದೇ ಹಾಲನ್ನು ಉಪಯೋಗಿಸಿಕೊಂಡು ಅವಶ್ಯಕತೆ ಇರುವ ವೃದ್ರಾಶ್ರಮ ವೃದ್ಧರಿಗೆ ಅನಾಥ ಮಕ್ಕಳಿಗೆ ಅಲೆಮಾರಿ ಸಮುದಾಯದ ಮಕ್ಕಳಿಗೆ ದಾನ ಮಾಡುವ ಪರಿಪಾಠವನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ. ನಾಗರ ಪಂಚಮಿ ಬಸವ ಪಂಚಮಿಯಾಗಲಿ ಎಂದರು.ಕಮಲ ನಗರದ ಅಲೆಮಾರಿ ಜನಾಂಗದ ಎಳವರ ಸಮುದಾಯದ 25ಕ್ಕೂ ಹೆಚ್ಚು ಮಕ್ಕಳಿಗೆ ಬಾದಾಮಿ ಹಾಲು ಸಿಹಿ ತಿನಿಸುಗಳನ್ನು ಹಂಚಲಾಯಿತು.
ಹಾವೇರಿ ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷರಾದ ಬಸವರಾಜ್ ತಳವಾರ್ ಕಾಂಗ್ರೆಸ್ ಯುವ ಮುಖಂಡರಾದ ಸಂಜೀವ್ ಶಿಡಗನಾಳ ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು.