ಶಾಸಕ ರಾಜು ಕಾಗೆಯವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ಕೊಡಿ: ಸಿದ್ಧಪ್ಪಾ ಕನಾಳೆ ಆಗ್ರಹ
Give cabinet minister position to MLA Raju Kage: Siddappa Kanale demands
ಅಥಣಿ 25: ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಐದು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕಾಗವಾಡ ಶಾಸಕ ರಾಜು ಕಾಗೆ ಇವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಕೊಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಿದ್ಧಪ್ಪಾ ಕನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಆಗ್ರಹಿಸಿದರು.
ಅವರು ಮೋಳೆ ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಶಾಸಕ ರಾಜು ಕಾಗೆ ಎಸ್.ಎಮ್.ಕೃಷ್ಣಾ, ಎನ್.ಧರ್ಮಸಿಂಗ, ಸಿದ್ಧರಾಮಯ್ಯನವರ ಮೊದಲ ಮತ್ತು ಈಗಿನ ಸರಕಾರಗಳ ಸಹಿತ ಇನ್ನೂ ಅನೇಕ ಮಹನೀಯರ ಸರಕಾರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ ರಾಜು ಕಾಗೆ ಇವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದರು.
ಮೋಳೆ ಕೃಷ್ಣಾ ಕಿತ್ತೂರ ಗ್ರಾಮದ ವರೆಗೆ, ಮೋಳೆ ಹುಲಗಬಾಳಿ ರಸ್ತೆ, ಆಜೂರ ಖಿಳೇಗಾಂವ ರಸ್ತೆಯಿಂದ ಧಡ್ಡಣ್ಣವರ ವಸತಿ ವರೆಗಿನ ಕಾಮಗಾರಿಗೆ, ಆಜೂರ ಶಿರೂರ ಗ್ರಾಮದ ವರೆಗೆ, ಆಜೂರ ಕೊಕಳೆ ವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯನ್ನು ಕಾಂಗ್ರೆಸ್ ಮುಖಂಡರು ನೆರವೇರಿಸಿದರು. ಶಾಸಕ ರಾಜು ಕಾಗೆಯವರ ಆಪ್ತ ಸಹಾಯಕ ಕುಮಾರ ಪಾಟೀಲ, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಸಹಾಯಕ ಇಂಜನೀಯರ ಮಡಿವಾಳಪ್ಪ ಪಾಟೀಲ, ಗುತ್ತಿಗೆದಾರರಾದ ಚಿದಾನಂದ ಹಣಮಾಪುರೆ, ಬಸವರಾಜ ನಾವಿ, ಸಚಿನ ಗೊಲಭಾವಿ, ಧುರೀಣರಾದ ವಿಶಾಲ ನಿಂಬಾಳ, ವಿನೋದ ಕೊಳೇಕರ, ಸತೀಶ ಯರಂಡೋಲಿ, ಬಾಳಾಸಾಹೇಬ ಯರಂಡೋಲಿ, ಧರ್ಮಾ ಕೊಳೇಕರ, ಗುರು ಕಡಕೋಳ, ವಿದ್ಯಾನಂದ ತೇಲಿ, ಅಶೋಕ ಹುಗ್ಗಿ, ಹಣಮಂತ ಕಡಕೋಳ, ಗಜಾನನ ಮಂಜೆ, ಶಿವಾಜಿ ರೂಪನವರ, ಬಾಳಪ್ಪಾ ನರಟ್ಟಿ, ಶಂಕರ ಕಾಂಬಳೆ, ಮಹಾದೇವ ತುಗಶೆಟ್ಟಿ, ಹಣಮಂತ ಬಣಚೋಡ, ಮಲ್ಲಪ್ಪಾ ದೊಡ್ಡನ್ನವರ, ಚಿದಾನಂದ ಡೊಡ್ಡಣ್ಣವರ, ಅಶೋಕ ದೊಡ್ಡಣ್ಣವರ, ಸಂಗಪ್ಪಾ ದೊಡ್ಡಣ್ಣವರ, ಮುರಿಗೆಪ್ಪಾ ದೊಡ್ಡಣ್ಣವರ, ಕಾಕಾಸಾಹೇಬ ಹೊನಖಾಂಡೆ, ಶ್ರೀಶೈಲ ಧಡ್ಡಣ್ಣವರ, ರಾಮಗೊಂಡ ಧಡ್ಡಣ್ಣವರ, ಆನಂದ ಬಾಮನೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 