ತಮ್ಮೆಲ್ಲರ ಸೇವೆಗೆ ಇದೊಂದು ಬಾರಿ ಅವಕಾಶ ಕೊಡಿ: ಹುಕ್ಕೇರಿ
ಕಾಗವಾಡ 09: ಕಳೆದ 50 ವರ್ಷಗಳಿಂದ ಶಾಸಕ, ಸಚಿವ ಸಂಸದನಾಗಿ ರಾಜಕಾರಣ ಮಾಡಿದ್ದೇನೆ, ಪ್ರಸ್ತುತ ಶಿಕ್ಷಕರ ಸಮಸ್ಯೆಗಳೇನಿವೆ ಎಂಬುದನ್ನು ನಾನು ಚನ್ನಾಗಿ ಬಲ್ಲಿದ್ದೇನೆ, ತಮ್ಮೆಲ್ಲರ ಸೇವೆ ಮಾಡಲು ಇದೊಂದು ಬಾರಿಗೆ ಅವಕಾಶ ಮಾಡಿಕೊಡುವಂತೆ ಮಾಜಿ ಸಚಿವ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಶಿಕ್ಷಕರಲ್ಲಿ ಮನವಿ ಮಾಡಿದರು.
ಗುರುವಾರ ದಿ.9 ರಂದು ಕಾಗವಾಡ ಮತಕ್ಷೇತ್ರದ ಮೋಳೆ ಗ್ರಾಮದ ಸಿದ್ದೇಶ್ವರ ಪೌಢ ಶಾಲೆಯಲ್ಲಿ ಏರಿ್ಡಸಿದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ನಾನು ಕಳೆದ 10 ದಿನಗಳಿಂದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಎಲ್ಲ ಕಡೆಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡರೆ ನನ್ನ ಗೆಲುವು ಐತಿಹಾಸಿಕ ದಾಖಲೆಯಾಗಲಿದೆ ಎಂದು ಹುಕ್ಕೇರಿ ಹೇಳಿದರು.
ಪ್ರಕಾಶ ಹುಕ್ಕೇರಿಯಂದರೆ ಅವರೊಬ್ಬ ಕೆಲಸಗಾರ ಎಂಬ ಹೆಸರು ಇದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅವರು ಕ್ಷೇತ್ರದ ಜಿಲ್ಲೆಯ ಕೆಲಸ ಮಾಡಿಕೊಂಡು ಬರುವ ಎದೆಗಾರಿಕೆ ಹೊಂದಿದ್ದಾರೆ. ಸದ್ಯ ವಾಯುವ್ಯ ಶಿಕ್ಷಕರ ಸಂಘದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ನೋಡಿ ಇದರಲ್ಲಿ ಕೆಲಸಗಾರ ಪ್ರಕಾಶ ಹುಕ್ಕೆರಿಯವರಿಗೆ ಮತ ನೀಡುವಂತೆ ಮಾಜಿ ಶಾಸಕ ರಾಜು ಕಾಗೆ ಮನವಿ ಮಾಡಿದರು.
ಗುರುವಾರ ಐನಾಪುರದ ಕೆ.ಆರ್.ಈ ಶಿಕ್ಷಣ ಸಂಸ್ಥೆ, ಪದ್ಮಾವತಿ ಶಿಕ್ಷಣ ಸಂಸ್ಥೆ, ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಕಾಲೇಜು, ಮೋಳೆ ಗ್ರಾಮದ ಸಿದ್ದೇಶ್ವರ ಪೌಢ ಶಾಲೆಗೆ ಭೇಟ್ಟಿ ನೀಡಿ ಮತ ನೀಡುವಂತೆ ಮನವಿ ಮಾಡಿಕೊಂಡರು.
ಕೆಪಿಸಿಸಿ ಸದಸ್ಯ ದಿಗ್ವಿಜಯ ಪವಾರದೇಸಾಯಿ, ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಕಾಂಗ್ರಸ್ ಮುಖಂಡ ಗಜಾನನ ಯರಂಡೋಲಿ, ಪಟ್ಟಣ ಪಂಚಾಯತ್ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಭಿರಡಿ, ಸುರೇಶ ಗಾಣಿಗೇರ, ಸಂಜಯ ಕುಚನೂರೆ, ಆದಿನಾಥ ದಾನೊಳ್ಳಿ, ಬಾಹುಬಲಿ ಕುಸನಾಳೆ, ಬಾಹುಬಲಿ ಟೋಪಗಿ, ಸೇರಿದಂತೆ ಅನೇಕರು ಇದ್ದರು.