ಇಂಡಿ

ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಎಸ್‌.ಟಿ ಮೀಸಲು ನೀಡಿ: ಶಾಸಕ ಪಾಟೀಲ

ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಎಸ್‌.ಟಿ ಮೀಸಲು ನೀಡಿ: ಶಾಸಕ ಪಾಟೀಲ

ಇಂಡಿ: ತಳವಾರ ಸಮುದಾಯಕ್ಕೆ ಪರಿಶಿಷ್ಠ ಪಂಗಡ ಮೀಸಲು ನೀಡಿದ್ದರಿಂದ ಶೈಕ್ಷಣಿಕವಾಗಿ, ಹಿಂದುಳಿದ ತಳವಾರ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಎಸ್‌.ಟಿ ಮೀಸಲು ನೀಡಿ, ಎಲ್ಲ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು. 

ಅವರು ಶುಕ್ರವಾರ ತಾಲೂಕಿನ ಝಳಕಿ ಸ್ಥಳೀಯ ಪ್ರವಾಸಿ ಮಂದಿರ ಆವರಣದಲ್ಲಿ ತಳವಾರ ಸಮುದಾಯದವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಮೀಸಲಾತಿ ನೀಡಿದ ಈಗಿನ  ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಈ ಸಮುದಾಯದ ಪರವಾಗಿ ನಾನು ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೆನೆ, ನಾನು ಸರಕಾರದ ಪ್ರತಿನಿಧಿಯಾಗಿದ್ದು, ಈ ಭಾಗದ ತಳವಾರ ಸಮುದಾಯವರ ಏಳಿಗೆಗಾಗಿ ನಾನು ಕೂಡಾ ಬದ್ದನಾಗಿರುತ್ತೆನೆ ಎಂದು ಹೇಳಿದರು. 

ಭಾರತ ದೇಶದಲ್ಲಿ ಹಿಂದುಳಿದ ವರ್ಗದವರಿಗೆ ಡಿ. ದೇವರಾಜ ಅರಸುರವರು ಮುಖ್ಯಮಂತ್ರಿ ಇದ್ದಾಗ ಪ್ರತಿ ಸಮುದಾಯದವರಿಗೆ ಸರಕಾರದ ಸೌಲಭ್ಯಗಳನ್ನು ಅನುಕೂಲ ಮಾಡಿದ್ದಾರೆ. ಭಾರತ ಸರಕಾರ ಎಲ್ಲ ಸಮುದಾಯದವರಿಗೆ ಒಂದೇ ನ್ಯಾಯ ಒದಗಿಸಬೇಕು. ಇನ್ನೂ ಕೆಲ ಸಮುದಾಯದ ಬೇಡಿಕೆಗಳು ಇವೆ. ಮುಂದೆ ಯಾವದೇ ಸರಕಾರಗಳು ಬರಲಿ ಎಲ್ಲಾ ಸಮುದಾಯಗಳಿಗೆ ಯೋಗ್ಯವಾದ ನ್ಯಾಯ ಒದಗಿಸಬೇಕು ಎಂದರು. 

ಗ್ರಾ ಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಮಾತನಾಡಿ,  ನಮ್ಮ ಇಂಡಿ ತಾಲೂಕಿನ ತಹಶಿಲದ್ದಾರ ಗ್ರೇಡ್2 ರವರು ತಳವಾರ ಸಮುದಾಯದ ಎಸ್‌.ಟಿ ಪ್ರಮಾಣ ಪತ್ರ ಕೊಡುವಲ್ಲಿ ಬಹಳ ಸತಾಯಿಸುತ್ತಿದ್ದರು. ಅದನ್ನು ನಮ್ಮ ಸಮಾಜದವರು ಶಾಸಕರ ಗಮನಕ್ಕೆ ತಂದಾಗ ಅವರಿಗೆ ಕರೆ ಮಾಡಿ ತಹಶಿಲ್ದಾರಿಗೆ ಸರಕಾರದ ನಿಯಮ ಪ್ರಕಾರ ಅವರಿಗೆ ಎಸ್‌.ಟಿ. ಪ್ರಮಾಣಪತ್ರ ನೀಡಿ ಎಂದು ದೂರವಾಣಿ ಮೂಲಕ ಹೇಳಿದರು. ಈಗ ನಮಗೆ ಎಸ್‌.ಟಿ ಪ್ರಮಾಣ ಪತ್ರ ದೊರಕುತ್ತಿವೆ ಎಂದರು. 

ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಮ್‌.ಆರ್‌. ಪಾಟೀಲ, ತಳವಾರ ಸಮಾಜದ ಮುಖಂಡ ಭೀಮಣ್ಣ ಕೌಲಗಿ, ಸುರೇಶಗೌಡ ಪಾಟೀಲ, ಶ್ರೀಮಂತ ಝಳಕಿ, ಧರ್ಮಣ್ಣ ತಳವಾರ, ಅಣ್ಣಪ್ಪ ತಳವಾರ, ರವಿ ವಗ್ಗಿ, ಹಣಮಂತ ಖಡೇಖಡೇ, ಶಿವಾನಂದ ಬಿರಾದಾರ, ಚಂದ್ರಕಾಂತ ಕೋಳಿ, ಸಾಹೇಬಗೌಡ ಬಿರಾದಾರ, ಡಾ. ಶ್ರೀಶೈಲ ಕೋಳಿ, ಹುಚ್ಚಪ್ಪ ತಳವಾರ, ರಾಯಪ್ಪ ಹರಳಯ್ಯ, ಸಂದೀಪ ಬೆಳ್ಳಿ, ಧನರಾಜ ಮುಜಗೊಂಡ, ಬಸಗೊಂಡ ಪಾಟೀಲ, ಶಂಕರ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಹಣಮಂತ ಕೋಳಿ, ರಮೇಶಗೌಡ ಬಿರಾದಾರ,  ರಾಜು ಗೋಟ್ಯಾಳ, ಹಣಮಂತ ದ್ಯಾಮಗೊಳ, ತಮ್ಮಣ್ಣ ವಾಲಿಕಾರ, ಈರಣ್ಣ ವಾಲಿಕಾರ, ಬಸು ವಾಲಿಕಾರ, ರಾಜು ಧರೆಪ್ಪ ವಾಲಿಕಾರ, ಶೇಕಪ್ಪ ಜೇವೂರ, ರೇವಣ್ಣ ತಳವಾರ, ಪರಶುರಾಮ ತಳವಾರ, ಮುದಕಣ್ಣ ತಳವಾರ, ಸಂಜಯ ಕೋಳಿ, ಅಪ್ಪಾಸಾಹೇಬ ತಳವಾರ, ಶಿವಪುತ್ರ ತಳವಾರ, ಗಜಾನಂದ ತಳವಾರ ಇದ್ದರು. 


ಸುದ್ದಿ ಓದಿ