ಪ್ರತಿ ಹೆಕ್ಟೇರಿಗೆ ರೂ. 50ಸಾವಿರ ಪರಿಹಾರ ನೀಡಿ : ಎಫ್ ಎಸ್ ಸಿದ್ದನಗೌಡರ ಒತ್ತಾಯ
ಲೋಕದರ್ಶನ ವರದಿ
ಬೈಲಹೊಂಗಲ 04: ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆಗೆ ಪ್ರತಿಯೊಬ್ಬ ರೈತರಿಗೂ ಪ್ರತಿಯೊಂದು ಬೆಳೆಗಳಿಗೂ ಹಾನಿಯಾಗಿದ್ದು ಬೆಳೆಗಳು ಆಧಾರದ ಮೇಲೆ ರೈತರನ್ನು ಬೇರಿ್ಡಸಿ ಪರಿಹಾರ ಹಣದಿಂದ ವಂಚಿತರನ್ನಾಗಿ ಮಾಡಿದೆ. ಅವರಿಂದ ಯಾವುದೇ ಅರ್ಜಿ ತೆಗೆದುಕೊಳ್ಳದೆ ಪ್ರತಿ ಹೆಕ್ಟೇರಿಗೆ 50ಸಾವಿರ ರೂಪಾಯಿಗಳು ಪರಿಹಾರ ನೀಡಬೇಕೆಂದು ಸವದತ್ತಿ ಎಪಿಎಂಸಿ ಸದಸ್ಯ ಎಫ್ ಎಸ್ ಸಿದ್ದನಗೌಡರ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು.
ಅವರು ಶನಿವಾರ ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅತಿಯಾದ ಮಳೆಯಿಂದ ಬೆಳೆಗಳೆಲ್ಲ ಹಾನಿಯಾಗಿ, ಈ ವರ್ಷವೂ ಅತಿಯಾದ ಮಳೆಯಿಂದ ರಾಜ್ಯದ ರೈತರು ಕಂಗಾಲಾಗಿದ್ದು ಅವರ ಜೀವನಕ್ಕೆ ರಾಜ್ಯ ಸರ್ಕಾರ ಆಸರೆಯಾಗಬೇಕಾಗಿದೆ. ಮುಂಗಾರು ಬೆಳೆಯಲಿ ಅತಿಯಾದ ಮಳೆ ಒಂದು ಕಡೆಯಾದರೆ ಹಿಂಗಾರು ಬಿತ್ತನೆ ನಂತರ ಬಿದ್ದ ಮಳೆಯಿಂದ ಕಡಲೆ ಕುಸುಬೆ ಜೋಳ, ಗೋಧಿ, ಗೋವಿನ ಜೋಳ ಹೀಗೆ ಎಲ್ಲ ಬೆಳೆಗಳು ನೆಲಕಚ್ಚಿವೆ ಇನ್ನು ಕಬ್ಬು ಬೆಳೆದ ಬೆಳೆಗಾರ ಕಾರ್ಖಾನೆಗಳಿಗೆ ಕಬ್ಬು
ಕಳಿಸಲಾಗಿದೆ ಪರಿತಪಿಸುವಂತಾಗಿದೆ ಆದ್ದರಿಂದ ರಾಜ್ಯ ಸರ್ಕಾರ ಬೆಳೆಗಳ ಮೇಲೆ ರೈತರನ್ನು ವಿಂಗಡಿಸದೆ ಎಲ್ಲಾ ರೈತರಿಗೂ ಪ್ರತಿ ಹೆಕ್ಟೇರ್ ಜಮೀನುಗಳಿಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದರು.
ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ್ ಕಾಮತ್ ಮಾತನಾಡಿ, ಬೆಳೆ ಪರಿಹಾರಕ್ಕಾಗಿ ರೈತರ ಕಡೆಯಿಂದ ಅರ್ಜಿ ತೆಗೆದುಕೊಳ್ಳುವುದು ಅರ್ಜಿಗೆ ಪಹಣಿ ಪತ್ರಿಕೆ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಫೋಟೋ ಲಗಿತಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸುತ್ತಿದ್ದಾರೆ.
ವಾಸ್ತವಿಕವಾಗಿ ಪ್ರತಿಯೊಬ್ಬ ರೈತರು ಪಹಣಿ ಪತ್ರಿಕೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಯಾಗಿದ್ದು ಅಲ್ಲದೆ ಬ್ಯಾಂಕ್ ಪಾಸ್ ಬುಕ್ ಸಹಿತ ಜೋಡಣೆಯಲ್ಲಿದ್ದು ಪ್ರತಿಯೊಬ್ಬ ರೈತರ ಸಂಖ್ಯೆಗಳು ಬಂದಿದ್ದು ಅಲ್ಲದೆ ತೆರಿಗೆ ರಹಿತ ಸರಕಾರಿ ನೌಕರರಲ್ಲದ ರೈತರಿಗೆ ನೇರವಾಗಿ ಕಿಸಾನ್ ಸಮ್ಮಾನ್ ಹಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಮೆ ಆಗುತ್ತಿದ್ದು ಇಂತಹ ಸಂದರ್ಭದಲ್ಲಿ ರೈತರಿಂದ ಮತ್ತೊಮ್ಮೆ ದಾಖಲೆಗಳನ್ನು ತೆಗೆದುಕೊಳ್ಳುವುದು ಕಾಗದರಹಿತ ಆಡಳಿತಕ್ಕೆ ಕಪ್ಪುಚುಕ್ಕಿ ಯಾದಂತೆ ಆಗುತ್ತದೆ ಆದ್ದರಿಂದ ತಕ್ಷಣ ಈ ವ್ಯವಸ್ಥೆಯನ್ನು ರದ್ದುಗೊಳಿಸಿ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಗೆ ಹಾನಿಯಾದ ಎಲ್ಲ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡಬೇಕು ಸರಕಾರ ರೈತರ ಅಲೆದಾಟ ಹಾಗೂ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಬೇಕುಎಂದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಮಹಾಂತೇಶ್ ವಿವೇಕಿ, ಮಹಾದೇವ ಕಲಭಾಂವಿ, ಸುರೇಶ್ ಹೋಳಿ, ಶ್ರೀಶೈಲ ಗಾಣಿಗೇರ, ಮಡಿವಾಳಪ್ಪ ಬುಳ್ಳಿ, ಗಂಗಾಧರ ಮತ್ತಿಕೊಪ್ಪ, ಗೋಪಾಲ ಮರಬಸಣ್ಣವರ, ಬಸವರಾಜ್ ಗ್ಯಾಳಗೋಳ, ಸಂಜು ಹಾವನ್ನವರ, ಮಹಾಲಿಂಗ ಮೋರೆ
ಮಂಜು ಬೋಗಾರ, ಈರಯ್ಯ ಹೀರೆಮಠ, ಈರಣ್ಣಾ ಆರೇರ ಮುಂತಾದ ರೈತ ಮುಖಂಡರು ಇದ್ದರು.
್ಷ್ಷ್ಷ್ಷ್ಷ್ಷ್ಷ್ಷ್ಷ್ಷ
ರೈತರು ಮಾಡುತ್ತಿರುವ ಮನವಿಗೆ ಅನುಗುಣವಾಗಿ ಯಾವುದೇ ಹಳ್ಳಿಗಳಲ್ಲಿ ಮಳೆಯಿಂದ ಬೆಳೆಗಳು ಹಾನಿಗೊಳಗಾದ ರೈತರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ನೀಡಲು ಕಟ್ಟುನಿಟ್ಟಾದ ಕ್ರಮಕೈಗೊಳ್ಳುತ್ತೆವೆ. ತಕ್ಷಣ ನಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಹಾಗೂ ತಹಶೀಲ್ದಾರ್ಗಳ ಸಭೆಯನ್ನು ರೈತ ಮುಖಂಡರ ಉಪಸ್ಥಿತಿಯಲ್ಲಿ ಕರೆದು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲಾಗುವುದು ರೈತರು ಧೈರ್ಯದಿಂದ ಇರಬೇಕು.
ಶಶಿಧರ್ ಬಗಲಿ
ಉಪವಿಭಾಗಾಧಿಕಾರಿಗಳು ಬೈಲಹೊಂಗಲ