ಕಂಪ್ಲಿ

ಬಾಲಕಿಯರ ಕಬ್ಬಡಿ: ತಾಲೂಕು ಮಟ್ಟಕ್ಕೆ ಆಯ್ಕೆಯಾದ ದೇವಲಾಪುರ ಸರ್ಕಾರಿ ಶಾಲೆ

ಬಾಲಕಿಯರ ಕಬ್ಬಡಿ: ತಾಲೂಕು ಮಟ್ಟಕ್ಕೆ ಆಯ್ಕೆಯಾದ ದೇವಲಾಪುರ ಸರ್ಕಾರಿ ಶಾಲೆ

ಕಂಪ್ಲಿ 01: ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ವಲಯ 2ರ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ಕಬ್ಬಡಿಯಲ್ಲಿ ಗೆದ್ದು ಬೀಗುವ ಜತೆಗೆ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡು ಕ್ರೀಡಾ ಪ್ರೇಮಿಗಳ ಮನ ಗೆದ್ದಿದ್ದಾರೆ. ಅನಿತ, ಮಹಾಲಕ್ಷ್ಮಿ, ತುಳಸಿ, ಸೇವಂತಿ, ಜ್ಯೋತಿ, ಅಂಕಿತ, ಚಂದನ, ನಿರ್ಮಲ, ಅರಿಣಿ, ಬಳ್ಳಾರಿ ಜಯಂತಿ, ಕಲ್ಪನ ನೇತೃತ್ವದ ತಂಡ ಪೈನಲ್ ಪಂದ್ಯಾವಳಿಯಲ್ಲಿ ವಿರುದ್ಧ ತಂಡವನ್ನು ಮಣಿಸಿ, ಅಮೋಘ ಜಯದೊಂದಿಗೆ ತಾಲೂಕು ಮಟ್ಟಕ್ಕೆ ದಾಪುಗಾಲಿಟ್ಟಿದ್ದಾರೆ. ಬಾಲಕರು ಕಬ್ಬಡಿಯಲ್ಲಿ ದ್ವಿತೀಯ ಸ್ಥಾನದ ಸಾಧನೆ ಮಾಡಿದರು.  

ಈ ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯಗುರು ಎಚ್‌.ಪಿ.ಸೋಮಶೇಖರ, ಶಿಕ್ಷಕರಾದ ವಿರುಪಾಕ್ಷಿ, ಉಮೇಶ, ನಾಗರಾಜ, ಕವಿತಾ, ಬಸವರಾಜ ಹಾಗೂ ಶಾಲಾ ಆಡಳಿತ ಮಂಡಳಿಯವರು ಪ್ರಶಂಸೆ ವ್ಯಕ್ತಪಡಿಸುವ ಜತೆಗೆ ತಾಲೂಕು ಮಟ್ಟದಲ್ಲಿ ಜಯಶಾಲಿಯಾಗಿ ಹೊರ ಹೊಮ್ಮಲಿ ಎಂದು ಹಾರೈಯಿಸಿದರು. ಈ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಕ್ರೀಡಾಕೂಟದ ಅಧ್ಯಕ್ಷ ಎಂ.ರೇವಣ್ಣ, ಕಾರ್ಯದರ್ಶಿ ವಿ.ಆರ್‌.ಮೂರ್ತಿ ಇದ್ದರು. 


ಸುದ್ದಿ ಓದಿ