ರಾಣೆಬೆನ್ನೂರ

ಶಿಕ್ಷಣ ಪಡೆದು ಉತ್ತಮ ವೃತ್ತಿ ಜೀವನವನ್ನು ನಿರೂಪಿಸಿಕೊಳ್ಳಬೇಕು: ಡಾ. ಆರ್‌.ಎಂ. ಕುಬೇರಪ

ಶಿಕ್ಷಣ ಪಡೆದು ಉತ್ತಮ ವೃತ್ತಿ ಜೀವನವನ್ನು ನಿರೂಪಿಸಿಕೊಳ್ಳಬೇಕು: ಡಾ. ಆರ್‌.ಎಂ. ಕುಬೇರಪ

ರಾಣಿಬೆನ್ನೂರು,6: ವಿದ್ಯಾರ್ಥಿನಿಯರು ತಂದೆ ತಾಯಿಗಳಿಗೆ ಮತ್ತು ಶಿಕ್ಷಕರಿಗೆ ಗೌರವ ತರುವ ರೀತಿಯಲ್ಲಿ ಶಿಕ್ಷಣವನ್ನು ಪಡೆದು ಉತ್ತಮ ವೃತ್ತಿ ಜೀವನವನ್ನು ನಿರೂಪಿಸಿಕೊಳ್ಳಬೇಕು ಅಂದಾಗ ಮಾತ್ರ ನಿಮ್ಮ ಬದುಕು ಹಸನವಾಗಲಿದೆ ಎಂದು ಆಡಳಿತಾಧಿಕಾರಿ ಡಾ. ಆರ್‌.ಎಂ. ಕುಬೇರ​‍್ಪ ಹೇಳಿದರು. 

ನಗರದ ಬಿಎಜೆಎಸ್‌ಎಸ್ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಹಾಗೂ ಎನ್‌.ಎಸ್‌.ಎಸ್, ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ವೀರಮದಕರಿ ನಾಯಕ ಹೆಣ್ಣು ಮಕ್ಕಳ ಪ್ರೌಢಶಾಲೆಯ ಸಹಶಿಕ್ಷಕ ಪ್ರಭು ಎರೇಶಿಮಿ ಮಾತನಾಡಿ, ಬಿಎಜೆಎಸ್‌ಎಸ್ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯವು ಹೆಣ್ಣುಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವುದರ ಮೂಲಕ ತಾಲೂಕಿನಲ್ಲಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ತಾಲೂಕಿನಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದರು.  

ಪ್ರಾಚಾರ್ಯ ಹೆಚ್‌.ಬಿ.ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಪ್ರಾಚಾರ್ಯ ಕೆ.ಕೆ.ಹಾವಿನಾಳ, ಗೊಪಾಲರೆಡ್ಡಿ, ಎಸ್‌.ಹೆಚ್‌.ಹುಚ್ಚಗೊಂಡರ, ಎನ್‌.ಎಸ್‌.ಎಸ್‌. ಅಧಿಕಾರಿ ಬಿ.ಕೆ. ಚೌಡಣ್ಣನವರ, ಸಾಂಸ್ಕ್ರತಿಕ ವಿಭಾಗದ ಕಾರ್ಯದರ್ಶಿ ರಾಜು ಎಂ,ಎನ್, ಶಾರದಾ ವಾಲಿ, ಎ.ಶಂಕರ ನಾಯ್ಕ, ಲತಾ ಧೂಳೆಹೊಳಿ, ಅಶೋಕ ಬಣಕಾರ, ಲಚ್ಚನಾಯ್ಕ ಎಲ್, ಸೈದಾಬಾನು ಮುದೇನೂರ, ಮೇಘಾ ಮಾಸೂರು, ನೇತ್ರಾ ರಾಮಾಳದ, ರೇಣುಕಮ್ಮ ಎಮ್ ಇದ್ದರು. 


ಸುದ್ದಿ ಓದಿ