ಪ್ರತಿಯೊಬ್ಬರು ಆರೋಗ್ಯ ಕಾರ್ಡ್ ಪಡೆದುಕೊಳ್ಳಿ: ಬುರ್ಲಿ ಕರೆ
ಕಾಗವಾಡ 29: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗ್ರಾಮವನ್ನು ಯೋಜನೆ ಅಡಿಯಲ್ಲಿ ಗ್ರಾಮೀಣ ಭಾಗದ ಜನರು “ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ” ಯೋಜನೆಯ ಲಾಭ ತೆಗೆದುಕೊಳ್ಳಲು ಪ್ರತಿಯೊಬ್ಬರು ಬಿಪಿಎಲ್ ರೇಷನ್ ಕಾರ್ಡ ಧಾರಕರು, ತಮ್ಮ ಬಳಿಇರುವ ಆಧಾರ ಕಾರ್ಡ್ ತೆಗೆದುಕೊಂಡು ಗ್ರಾಮದ ಕೇಂದ್ರಕ್ಕೆ ಹೋಗಿ ಆರೋಗ್ಯ ಕಾರ್ಡ್ ಪಡೆದುಕೊಳ್ಳಬೇಕೆಂದು ಕಾಗವಾಡ ತಹಶೀಲ್ದಾರ್ ರಾಜೇಶ್ ಬುರ್ಲಿ ಕರೆ ನೀಡಿದ್ದಾರೆ.
ಮಂಗಳವಾರ ದಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದ್ದು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ಸುಮಾರು 5 ಲಕ್ಷ, ಎಪಿಎಲ್ ಕಾರ್ಡ್ ದಾರರಿಗೆ ಸುಮಾರು 1 ಲಕ್ಷ ವರೆಗೆ ಆರೋಗ್ಯ ಚಿಕಿತ್ಸೆಯಲ್ಲಿ ಉಪಚ್ಚಾರಕ್ಕಾಗಿ ಯೋಜನೆಯ ಸಹಾಯ ಪಡೆಯಲು ಸಾಧ್ಯವಿದೆ. ಪ್ರತಿಯೊಬ್ಬರು ಇದರ ಲಾಭ ತೆಗೆದುಕೊಳ್ಳಿರಿ ಎಂದು ಹೇಳಿದರು.
ಶಿಕ್ಷಕರ ಮತ್ತು ಪದವೀಧರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗಿದೆ. ಇದರ ಲಾಭ ತೆಗೆದುಕೊಂಡು ಪದವೀಧರ ಮತದಾರರು ಅರ್ಜಿ ನಮುನೆ ನಂ. 18ರ ಮತ್ತು ಶಿಕ್ಷಕರ ಮತದಾರರು ಅರ್ಜಿ ನಮೂನೆ 19ರ ಹೆಸರು ನೋಂದಾಯಿಸಿ ತಹಶೀಲ್ದಾರ್ ಕಚೇರಿಗೆ ಮಾಹಿತಿ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ಮತ್ತು ನಿಪ್ಪಾಣಿ ತಾಲೂಕುಗಳು ಗುಣಮಟ್ಟದ ಮತದಾರರ ಪಟ್ಟಿ ತಯಾರಿಸಲು ಆಯ್ಕೆಮಾಡಿದ್ದಾರೆ. ತಾಲೂಕಿನಲ್ಲಿ ಶಿಕ್ಷಕರು ಮತ್ತು ಬಿ.ಎಲ್.ಒ.ಗಳು ಮನೆಗೆ ಬಂದು ಮಾಹಿತಿ ಕೇಳಿದರೆ ನಾಗರಿಕರು ಸರಿಯಾಗಿ ಮಾಹಿತಿ ನೀಡಿರಿ ಮತ್ತು 18 ರಿಂದ 19 ವಯಸ್ಸಿನ ಎಲ್ಲ ಮತದಾರರು ತಮ್ಮ ಹೆಸರನ್ನು ದಾಖಲಿಸಿ. ಅದರೊಂದಿಗೆ ಮದುವೆಯಾದ ಯುವತಿಯರು ಹಾಗೂ ಮರಣ ಹೊಂದಿದವರನ್ನು ಹೆಸರು ಕಡಿಮೆಮಾಡುವ ಬಗ್ಗೆ ಎಲ್ಲ ಮಾಹಿತಿ ನೀಡಿ ಗುಣಮಟ್ಟದ ಮತದಾರರಪಟ್ಟಿ ನಿರ್ಮಿಸಲು ಸಹಕರಿಸಿರಿ ಎಂದು ತಹಶೀಲ್ದಾರ್ ರಾಜೇಶ್ ಬುರ್ಲಿ ಮನವಿ ಮಾಡಿಕೊಂಡಿದ್ದಾರೆ.