ಸಿರುಗುಪ್ಪ

ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್‌ ಪಡೆಯಿರಿ: ಅಬ್ದುಲ್ ನಬಿ

ಪ್ರತಿಯೊಬ್ಬರೂ ಆರೋಗ್ಯ ಕಾರ್ಡ್‌ ಪಡೆಯಿರಿ: ಅಬ್ದುಲ್ ನಬಿ

ಸಿರುಗುಪ್ಪ 30: ಆರೋಗ್ಯ ಮಾನವನ ಹಕ್ಕು ಆರೋಗ್ಯ ಭಾಗ್ಯ ನಮ್ಮೆಲ್ಲರ ಭಾಗ್ಯ ಉತ್ತಮ ರೀತಿಯಲ್ಲಿ  ಜೀವನ ಸಾಗಿಸಿ ಸೂಕ್ತ ಆಹಾರ ಸೇವಿಸಿ ಪ್ರತಿಯೊಬ್ಬರು ಆರೋಗ್ಯ ಕಾರ್ಡ್‌ ಪಡೆಯಿರಿ ಎಂದು  ಭಾರತ ಸರಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಬಳ್ಳಾರಿ ಜಿಲ್ಲಾ ಸಾಕ್ಷರತಾ ಕಾರ್ಯಕಾರಿ ಸದಸ್ಯರು ಸಮಾಜ ಕಾರ್ಯಕರ್ತ ಅಬ್ದುಲ್ ನಬಿ ಹೇಳಿದರು. 

ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜಿಲ್‌ನಲ್ಲಿ 75ನೇ  ಸ್ವಾತಂತ್ರ್ಯದ ಅಮೃತ ಮಹೋತ್ಸವ ಕರ್ನಾಟಕ ಸರ್ಕಾರ ಭಾರತ ಸರ್ಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನ ಆರೋಗ್ಯ ಕರ್ನಾಟಕದಾದ್ಯಂತ ಹಮ್ಮಿಕೊಂಡಿರುವ  ಆಯುಷ್ಮಾನ್ ಭಾರತ ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ 1990ರ ದಶಕದಿಂದ ದೇಶದ ಆರೋಗ್ಯ ಅಭಿಯಾನವನ್ನು ಗಮನಿಸಿದರೆ ಸದೃಢ ಆರೋಗ್ಯದ ಬಗ್ಗೆ ದೇಶ ಹೆಚ್ಚು ಒತ್ತು  ನೀಡುತ್ತಿದುದ್ದು ಗರ್ಭಿಣಿ ಮಹಿಳೆಯರಿಗೆ ನವಜಾತ ಶಿಶುಗಳಿಗೆ ಮತ್ತು ಮಕ್ಕಳಿಗೆ ಇನ್ನೂ 2000ದ ನಂತರ ರ ದಶಕದಲ್ಲಿ ಟಿಬಿ ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಸುವ ಬಗ್ಗೆ ಅರಿವು ಮೂಡಿಸುವ ಕೆಲಸಗಳು ನಡೆದವು ಶೇಕಡಾ ಅರುವತ್ತು ರಷ್ಟು ಬಡವರಿಗೆ ಸಿಗಬೇಕಾಗಿದ್ದ ಕಣ್ಣಿನ ಸಮಸ್ಯೆ ಕಿವಿ ಮೂಗು ಸಮಸ್ಯೆ ಅರ್ಥಪೆಡಿಕ್ ಮೂತ್ರ ಪಿಂಡದ ಸಮಸ್ಯೆಗಳ ಬಗ್ಗೆ ಚಿಕಿತ್ಸೆಯ ಕೊರತೆ ಕಾಣುತ್ತಿತ್ತು ಗ್ರಾಮೀಣ  ಭಾಗದ ಜನರಿಗೆ ಇದರ ಕುರಿತು ಅರಿವು ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆ ಇರಲಿಲ್ಲ. ಆಯುಷ್ಮಾನ್ ಭಾರತ ಇದರಡಿ ವಿಮೆಯು ಬಡತನ ರೇಖೆಗಿಂತ ಕೆಳಗಿನವರಿಗೆ ಒದಗಿಸಬೇಕು ಎಂಬ ಉದ್ದೇಶದಿಂದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಪಿಎಂ ಜನ ಆರೋಗ್ಯ ಯೋಜನೆ 23ಸೆಪ್ಟೆಂಬರ್ 2018 ರಂದು ರಾಂಚಿಯಲ್ಲಿ ಆರಂಭಿಸಿದರು. ಈ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ತಲಾ 5ಲಕ್ಷ ವಾರ್ಷಿಕ ಆರೋಗ್ಯ ವಿಮೆಯನ್ನು ಮತ್ತು ಯಾವುದೇ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕೊಳ್ಳಬಹುದಾಗಿತ್ತು ಇದು ಇಡೀ ಪ್ರಪಂಚದಲ್ಲೇ ಅತ್ಯಂತ ಆರೋಗ್ಯ ವಿಮಾ ಯೋಜನೆ ಎಂದು ಖ್ಯಾತವಾಗಿದೆ ಸರ್ವರಿಗೂ ಆರೋಗ್ಯ ಸಿಗಲಿ ಎಂದು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ತಿಳಿಸಿದರು. 

ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡುತ್ತಾ ಇದೊಂದು ಮಹತ್ತರ ಹೆಜ್ಜೆ ಸಾಮಾಜಿಕ ಕ್ಷೇತ್ರದಲ್ಲಿ ಬಡಜನರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಉತ್ತಮ  ಗುಣಮಟ್ಟದ ಆರೋಗ್ಯದ ಚಿಕಿತ್ಸೆ ಸೇವೆಗಳು ಸುಲಭವಾಗಿ ದೊರೆಯು ವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಸಮಾಜ ಸೇವಕ ಮೊಹಮ್ಮದ್ ನೌಶಾದ್ ಅಲಿ  ಉಪಸ್ಥಿತರಿದ್ದರು. 


ಸುದ್ದಿ ಓದಿ