ಸಿರುಗುಪ್ಪ

ಪೋಸ್ಟ್‌ ಫೋರಂ ಸದಸ್ಯರ ಸಾಮಾನ್ಯ ಸಭೆ

ಪೋಸ್ಟ್‌ ಫೋರಂ ಸದಸ್ಯರ ಸಾಮಾನ್ಯ ಸಭೆ

ಸಿರುಗುಪ್ಪ  01: ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಮಂಗಳವಾರ ಸಂಜೆ ಎಂಡಿಜಿ ಎಸ್‌ಜಿಪಿ ಪೋಸ್ಟ್‌ ಫೊರಂ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ನೂತನವಾಗಿ ಎಂ ಮಂಜುನಾಥ ಶೆಟ್ಟಿ ಅವರು ಪೋಸ್ಟ್‌ ಮಾಸ್ಟರ್ ಆಗಿ ಕಾರ್ಯ ಭಾರ ವಹಿಸಿ ಕೊಂಡ ಅವರಿಗೆ ದೊರೆತಿರುವ ಗೌರವಕ್ಕೆ  ಸದಸ್ಯ ಎ ಅಬ್ದುಲ್ ನಬಿ, ಜೈಸಿಂಗ್ ಅಲ್ವರಿ,ಪಿ. ಎ.ಕೆ.ರಾಘವ ರೆಡ್ಡಿ, ಅಂಚೆ ಸಿಬ್ಬಂದಿ ವರ್ಗದವರು ಹೃತ್ಪೂರ್ವಕವಾಗಿ ಅವರನ್ನು ಅಭಿನಂದಿಸಿದರು.  


ಪೋಸ್ಟ್‌ ಫೋರಂ ಸಭೆಯಲ್ಲಿ ಪೋಸ್ಟ್‌ ಮ್ಯಾನ್ ಗಳು ಸಿಬ್ಬಂದಿ ವರ್ಗದವರು ಸಾರ್ವಜನಿಕರ ಮನೆ ಮನೆಗೆ ತೆರಳಿ ಅಂಚೆ ಬಟವಾಡೆ ತಲುಪಿಸುವದು ಸಾರ್ವಜನಿಕರೊಂದಿಗೆ ಜನಸಂಪರ್ಕ ನಿಸ್ವಾರ್ಥ ಉತ್ಸಾಹದಿಂದ ಹಗಲಿರಳು ಸೇವೆಯನ್ನು  ಸಲ್ಲಿಸುತ್ತಿರುವುದು ಶ್ಲಾಘನೀಯ ಅಂಚೆ ಕಚೇರಿಯಲ್ಲಿ ಆಧಾರ್ ಮತ್ತು ರೈಲ್ವೆ ಟಿಕೆಟ್ ಗಾಗಿ  ಒಂದು ಕೌಂಟರ್ ತೆರೆಯಬೇಕು ವೃದ್ಯಾಪ ವೇತನ ಹಿರಿಯ ನಾಗರಿಕರಿಗಾಗಿ ಅಂಗವಿಕಲರ ವಿಧವಾ ವೇತನ ಸೇವಿಂಗ್ ಬ್ಯಾಂಕ್ ಉಳಿತಾಯ ಖಾತೆ ತೆರೆಯುವಂತೆ ಮತ್ತಿತರ ಮನಿ ಆರ್ಡರ್  ತಲುಪಿಸುವ ವ್ಯವಸ್ಥೆ ಇದ್ದು ಅದಕ್ಕಾಗಿಯೂ ಒಂದು ಕೌಂಟರ್ ತೆರೆಯಬೇಕು ಮತ್ತು ಅಂಚೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸೂಚಿಸಿದರು ಕೆ ರಾಘವರೆಡ್ಡಿ ಅವರು ಸ್ವಾಗತಬಯಸಿದರು ಮತ್ತು ವಂದಿಸಿದರು. 


ಸುದ್ದಿ ಓದಿ