ಸಾರ್ವತ್ರಿಕ ಲೋಕಸಭಾ ಚುನಾವಣೆ: ಮತದಾನ ಜನ ಜಾಗೃತಿ ಜಾಥಾ
ರಾಣೆಬೆನ್ನೂರು 05: ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರು ಮತ್ತು ಯುವ ಮತದಾರರು, ನಿರ್ಲಕ್ಷ ತೋರದೆ ಅತ್ಯಂತ ಜಾಗರೂಕತೆಯಿಂದ, ತಮ್ಮ ಮತವನ್ನು ದಾನ ಮಾಡುವುದರ ಮೂಲಕ ದೇಶದ ಸಮಗ್ರ, ಆರ್ಥಿಕತೆ ಮತ್ತು ಸಮಾನತೆ ತರುವಲ್ಲಿ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಿ.ಎಸ್. ಮುಳ್ಳಳ್ಳಿ ಕರೆ ನೀಡಿದರು.
ಶನಿವಾರ ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಸ್ವೀಫ ತಂಡವು ಆಯೋಜಿಸಿದ್ದ, ಸಾರ್ವತ್ರಿಕ ಲೋಕಸಭಾ ಚುನಾವಣೆ ಮತದಾನ ಜನ ಜಾಗೃತಿ ಜಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚುನಾವಣಾ ಆಯೋಗವು, ಸರಳ ಮತ್ತು, ಅತ್ಯಂತ ಜನ ಜಾಗೃತಿಯೊಂದಿಗೆ, ಮತದಾನ ಹೆಚ್ಚಳದ ಹಿನ್ನೆಲೆಯಲ್ಲಿ ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ, ಎಲ್ಲರಿಗೂ ಸರಳ ಮತದಾನ ಮಾಡುವ ಪ್ರಕ್ರಿಯೆಗೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಂಡಿದೆ. ಈ ಬಾರಿಯ ಮತದಾನವು ಯುವ ಸಮುದಾಯದೊಂದಿಗೆ ಕೂಡಿರುತ್ತದೆ. ಮತದಾನ ನಮ್ಮ ಹಕ್ಕು, ಜೊತೆಗೆ ಕರ್ತವ್ಯವು ಸಹ ನಮ್ಮ ಹಕ್ಕಾಗಬೇಕು ಎಂದು ಸಲಹೆ ನೀಡಿದರು.
ಕ್ರೀಡಾಂಗಣದಿಂದ ವಿವಿಧ ಕಲಾವಿದರು ಮತ್ತು ಕಲಾತಂಡಗಳೊಂದಿಗೆ ಹೊರಟ ಭವ್ಯ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಸಾಂಗತ್ಯ ಗೊಂಡಿತು. ಜನಜಾಗೃತಿ ಜಾತ ಯಶಸ್ವಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ತಾಲೂಕಿನ ಕಲಾತಂಡಗಳು, ಮತ್ತು ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕ ಆಡಳಿತ, ತಾಲೂಕಾ ಪಂಚಾಯತ್, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಹೆಸ್ಕಾಂ ವಿದ್ಯುತ್, ಡೇ -ನಲ್ಮ ಯೋಜನೆಯ ಸ್ವಸಹಾಯ ಸಂಘಗಳು ಸೇರಿದಂತೆ ಇತರೆ ಇಲಾಖೆಗಳು ಸಹಕಾರ ನೀಡಿದ್ದವು.
ಕಾರ್ಯಕ್ರಮದ ಮುಂಚೂಣಿಯಲ್ಲಿ ಎ ಆರ್ ಓ,ರೇಷ್ಮಾ ಕೌಸರ್, ಪೌರಾಯುಕ್ತ ನಿಂಗಪ್ಪ ಕುಮ್ಮಣ್ಣನವರ,ಬಿ. ಇ. ಓ ಎಂ.ಹೆಚ್. ಪಾಟೀಲ್, ಇ ಓ, ಸುಮಲತಾ ಎಸ್ ಪಿ, ತಹಸಿಲ್ದಾರ್ ವಿಜಯಕುಮಾರ್, ಲತಾ ಜ್ಯೋತಿ, ಎನ್. ಆರ್.ಹಲಗೇರಿ, ಹಸು ಇಲಾಖೆಯ ನೀಲಕಂಠಪ್ಪ ಅಂಗಡಿ, ತಾ.ಪಂಸ. ನಿರ್ದೇಶಕ ಪರಶುರಾಮ ನರೇಗಾ ಸಂಚಾಲಕ ಡಿ. ಬಿ. ಅಂಗೂರ, ಪೂಜಾರ್, ಅನಸೂಯ ಕಂಬಳಿ, ಸ. ಕಾ. ಅಭಿಯಂತರ ಮಹೇಶ್ ಕಲಾಲ, ಕಂದಾಯ ಅಧಿಕಾರಿ ಪಿ.ವಸಂತ, ಪ್ರಭು ಬಾಲೆಹೊಸೂರು, ನಿರ್ಮಲಾ ನಾಯಕ್, ಎಂ. ಎಸ್. ಗುಡಿಸಲಮನಿ, ಕೋಡಿ ಭೀಮರಾವ್ ಹಾಗೂ ನಗರಸಭೆಯ ಸಿಬ್ಬಂದಿಗಳು ವಿವಿಧ ಇಲಾಖೆಗಳ ಸಿಬ್ಬಂದಿಗಳು, ನಗರದ ಅನೇಕ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಅರುಣ್ ಕುಮಾರ್ ಚಂದನ್ ಅವರು, ಜನಜಾಗೃತಿ ಜಾತಾದ, ನೇತೃತ್ವ ವಹಿಸಿದ್ದರು.