ರಾಣೆಬೆನ್ನೂರ

ಗೀತಾ.ಸಿ ಅವರಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ

ಗೀತಾ.ಸಿ ಅವರಿಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ

ರಾಣಿಬೆನ್ನೂರು,06:  ತಾಲೂಕಿನ ಜೋಯಿಸರಹರಳಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಗೀತಾ.ಸಿ ಇವರಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಕೇಂದ್ರ ಸಂಘವು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ   ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. 

ಇತ್ತೀಚೆಗೆ ಬೆಂಗಳೂರಿನ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಚೇರಿ ಆವರಣದಲ್ಲಿ ಏರಿ​‍್ಡಸಿದ್ದ   ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೀತಾಗೆ 2023-24ನೇ ಸಾಲಿನ ಪ್ರಶಸ್ತಿ ನೀಡಿ  ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಕೇಂದ್ರ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಡಾ. ವಿ.ಪಿ ಕುಮಾರಸ್ವಾಮಿ,  ಮಾಜಿ ಸಚಿವರಾದ ಪಿಜಿ ಆರ್ ಸಿಂಧ್ಯಾ, ಎಚ್‌.ಎಂ ರೇವಣ್ಣ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ  ಸಿ.ಎಸ್ ಷಡಕ್ಷರಿ, ಹಾವೇರಿ ಸಂಘದ ಅಧ್ಯಕ್ಷ ಆರ್‌.ಎಸ್ ಪಾಟೀಲ, ಉಪಾಧ್ಯಕ್ಷ ಸಿ.ಜಿ ಹೊನ್ನಪ್ಪನವರ, ಕಾರ್ಯದರ್ಶಿ ಗದಿಗೆಪ್ಪ ದುರುಗಪ್ಪನವರ, ಮಾರುತಿ ಬಿ.ಎಂ ಸಮ್ಮುಖದಲ್ಲಿ ಗೀತಾ  ಅವರಿಗೆ ಪ್ರಶಸ್ತಿ  ಪ್ರಧಾನ ಮಾಡಿ ಗೌರವಿಸಲಾಯಿತು. 


ಸುದ್ದಿ ಓದಿ