ಶಿಗ್ಗಾವ್

ಗವಾಯಿಗಳ ಸಂಸ್ಥೆ ಅಂಧ ಅನಾಥರಿಗೆ ಆಶ್ರಯ ತಾಣವಾಗಬೇಕು: ಸಂಗನಬಸವ ಶ್ರೀ

ಗವಾಯಿಗಳ ಸಂಸ್ಥೆ ಅಂಧ ಅನಾಥರಿಗೆ ಆಶ್ರಯ ತಾಣವಾಗಬೇಕು: ಸಂಗನಬಸವ ಶ್ರೀ

ಶಿಗ್ಗಾವಿ 13: ಸಾಧನೆಯು ಯಾರ ಸ್ವತ್ತಲ್ಲ ಆತ್ಮ ವಿಶ್ವಾಸ ಹಾಗೂ ಸಾಧಿಸುವ ಮನಸ್ಸಿದ್ದರೆ ಏನನ್ನಾದರು ಸಾಧಿಸಬಹುದು ಎಂದು ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು. 

ಪಟ್ಟಣದ ಚನ್ನಪ್ಪ ಕುನ್ನೂರ ಮಹಾವಿದ್ಯಾಲಯದಲ್ಲಿ  ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆ ವತಿಯಿಂದ ನಡೆದ ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಿಗೆ ಸನ್ಮಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಸುಮಾರು ವರ್ಷಗಳಿಂದ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯಿಂದ ಅನೇಕ ಸಾಂಸ್ರ್ಕತಿಕ ಕಾರ್ಯಕ್ರಮಗಳನ್ನು ಸಂಘಟಿಸುವುದರ ಜೊತೆಗೆ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ ಅವರಿಗೆ ಸರ್ಕಾರ ಹಾಗೂ ಇತರ ಸಂಘ ಸಂಸ್ಥೆಗಳು ಸಹಾಯ ಸಹಕಾರ ನೀಡಿದರೆ ಇನ್ನೂ ಅನೇಕ ಕಾರ್ಯಕ್ರಮ ಮಾಡಲು ಅನೂಕೂಲ ಆಗುವುದು ಎಂದರು.  

ಪ್ರಾಚಾರ್ಯ ನಾಗರಾಜ ಧ್ಯಾಮನಕೊಪ್ಪ  ಮಾತನಾಡಿ ಇಂದು ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದ್ದು ಅವರ ಸಾಧನೆಯನ್ನು ಗುರುತಿಸಿ ಇಂತಹ ಸಾಧನೆ ಮಾಡಲು ಸಾಧಕರು ಅನೇಕ ಕಷ್ಟ ಕಾರ​‍್ಪಣಯಗಳನ್ನು ಎದುರಿಸಿ ಶ್ರಮದಿಂದ ಮುಂದೆ ಬಂದಿದ್ದಾರೆ ಅಂತಹ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. 

ಸನ್ನಾನ ಸ್ವೀಕರಿಸಿದ ಜಯದೇವ ಅಗಡಿ ಅವರು ಮಾತನಾಡಿ ನಮಗೆ ದೊರೆತ ಅವಕಾಶವನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡರೆ ಏನನ್ನಾದರು ಸಾಧನೆ ಮಾಡಬಹುದು ಹಾಗೆಯೇ ಇಂದು ಯುವಕರು ಕ್ರಷಿ ಕ್ಷೇತ್ರದ ಕಡೆಗೆ ಗಮನಹರಿಸಿದರೆ ಉತ್ತಮವಾದ ಸಾಧನೆ ಮಾಡಬಹುದು ಎಂದರು.              

 ಡಾ.ಶ್ರೀಶೈಲ್ ಹುದ್ದಾರ ಅವರು ಮಾತನಾಡಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಸಂಸ್ಥೆಯು ನಿರಂತರವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಜನಮಾನಸದಲ್ಲಿ ಉಳಿದಿದೆ ನಾಡಿನ ಅನೇಕ ಕಲಾವಿದರಿಗೆ ಸಾಧನೆ ಮಾಡಲು ಸ್ಪೂರ್ತಿಧಾಯಕವಾಗಿದೆ ಎಂದರು. 

ಸಂಸ್ಥೆಯ ಸದಸ್ಯ ರಮೇಶ ಸಾತಣ್ಣವರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಎಸ್‌.ಎನ್‌.ಮುಗಳಿ ಸಂಸ್ಥೆಯ ಗೌರವಾಧ್ಯಕ್ಷರಾದ ಕೊಟ್ರೆಶ್ ಮಾಸ್ತರ ಬೆಳಗಲಿ, ಪಕ್ಕಿರೇಶ ಮಾಸ್ತರ ಕೊಂಡಾಯಿ, ಕೇದಾರ​‍್ಪ ಬಗಾಡೆ, ತಿಪ್ಪಣ್ಣ ಸಾತಣ್ಣವರ, ಡಾ.ಲತಾ ಜಿ ನಿಡಗುಂದಿ, ಸುಮಂಗಲಾ ಹೆಸರೂರ, ವಿಜಯಲಕ್ಷ್ಮೀ ಹೆಸರೂರ, ಚಿನ್ನಪ್ಪ ಕುಂದಗೊಳ, ಚಂದ್ರಶೇಖರ ಕಮಡೊಳ್ಳಿ, ಶಿದ್ಲಿಂಗಪ್ಪ ನೆರೆಗಲ್, ಎಸ್‌.ಕೆ.ಹೂಗಾರ, ಬಿ.ಎಚ್ ಚಲವಾದಿ, ಚನ್ನಪ್ಪ ಕುನ್ನೂರ ಮಹಾವಿದ್ಯಾಲಯದ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು ಕಲಾವಿದರಾದ ಬಸವರಾಜ ಶಿಗ್ಗಾಂವ ಹಾಗೂ ಬಸವರಾಜ ಕರಡಿ ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು ಶಿವಾನಂದ ಹೊಸಮನಿ ವಂದಿಸಿದರು. 


ಸುದ್ದಿ ಓದಿ