ಕಾಗವಾಡ

ಗೌರಿ ಗಣೇಶ ಅಲಂಕಾರ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಗೌರಿ ಗಣೇಶ ಅಲಂಕಾರ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಲೋಕದರ್ಶನ ವರದಿ 

ಕಾಗವಾಡ 14: ಗಣೇಶನ ಹಬ್ಬ ಪವಿತ್ರವಾದ ಹಬ್ಬ, ಪಾವಿತ್ರೆತೆ ಕಾಪಾಡಿಕೊಳ್ಳಲು ದಾದಾರಿ ಫೌಂಡೇಶನ್ ವತಿಯಿಂದ ಅತ್ಯುತ್ತಮ ಪ್ರದರ್ಶನ ನೀಡಿರುವ ಗಣೇಶ ಮಂಡಳಗಳು ಆಯ್ಕೆ ಮಾಡಿ ಬಹುಮಾನ ನೀಡುವ ಪ್ರಯತ್ನವನ್ನು ಮಾಡಿದೇವೆ ಎಂದು ಕಾಗವಾಡದ ದಾದಾರಿ ಫೌಂಡೇಶನ್ ಅಧ್ಯಕ್ಷ ರಾಜಗೌಡ ಪಾಟೀಲ್ ಹೇಳಿದರು. 

ಮಂಗಳವಾರ ದಿ. 13ರಂದು ದಾದಾರಿ ಫೌಂಡೇಶನ್ ವತಿಯಿಂದ ಗೌರಿ ಗಣೇಶ ಅಲಂಕಾರ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾಗವಾಡ ಪಟ್ಟಣದಲ್ಲಿ ಪ್ರಥಮ ಬಾರಿಗೆ ದಾದಾರಿ ಫೌಂಡೇಶನ್ ವತಿಯಿಂದ ಗೌರಿ ಗಣೇಶ ಅಲಂಕಾರ ಸ್ಪರ್ಧೆಯನ್ನು ಏರಿ​‍್ಡಸಿದರು. 

ಸ್ಪರ್ಧೆಯಲ್ಲಿ ಸುಮಾರು 250 ಗಣೇಶ ಮಂಡಳಿಗಳು ಭಾಗವಹಿಸಿದ್ದವು. ಸ್ಪರ್ಧೆಗೆ ನಿರ್ಣಾಯಕರಾಗಿ 50 ಜನರನ್ನ ನೇಮಕ ಮಾಡಲಾಗಿತ್ತು. ಈ ನಿರ್ಣಾಯಕರು ಪ್ರಥಮ, ದ್ವೀತಿಯ, ತೃತೀಯ ಬಹುಮಾನ ಪಡೆಯುವಂಥ ಸ್ಪರ್ಧಾರ್ಥಿಗಳನ್ನು ಹೆಸರು ಸೂಚನೆ ನೀಡಿದ್ದಾರೆ ಆದ್ದರಿಂದ ಇವತ್ತು ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು ಎಂದರು.  

ಮುಖ್ಯ ಅತಿಥಿ ಕಾಮಿಡಿ ಸ್ಟಾರ್ ಧನಂಜಯ ಪವಾರ ಮಾತನಾಡಿ, ನಾನು ಮನೆಯಲ್ಲಿ ಟೈಮ್ ಪಾಸ್‌ಗಾಗಿ ಹಾಸ್ಯಗಳನ್ನು ವಿಡಿಯೋಗಳನ್ನು ಮಾಡುತ್ತಿದ್ದೆ ಅದು ಮುಂದೆ ವೈರಲ್ ಆಗಿ ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಈ ಮಟ್ಟಕ್ಕೆ ಕರೆತಂದಿದೆ ನಾನು ಹೇಳುವದಿಷ್ಟೇ ಎಲ್ಲರೂ ಯಾವತ್ತೂ ಖುಷಿಖುಷಿಯಿಂದ ಬಾಳುವದನ್ನು ಕಲಿಯಬೇಕು. ಎಲ್ಲದಕ್ಕಿಂತ ತಾಯಿ ಋಣವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. 

ಉಗಾರ ಲಯನ್ಸ್‌ ಕ್ಲಬ್ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ್, ಸ್ವಪ್ನಿಲ್ ಪಾಟೀಲ್, ಎಎಸ್‌ಐ ಸೋನವಾನೆ, ರಮೇಶ ಚೌಗಲಾ, ಎಎಸ್‌ಐ ಶಶಿಕಾಂತ ಗುಮಟೆ, ಸಚಿನ್ ಚೌಗಲೆ, ಮಲಗೌಡ ಪಾಟೀಲ್, ಎಮ್ ಬಿ ಪಾಟೀಲ್, ಜ್ಯೋತಿ ಪಾಟೀಲ್, ಜಗದೀಶ ಮದಭಾವಿ, ಬಾಳಾಸಾಬ ಕಲ್ಲೊಳೆ, ಮಹದೇವ ಕಳೇಕರ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ