ರಾಣೆಬೆನ್ನೂರ

ಇಂದಿನಿಂದ ಗಂಗಾಪುರ ದುರುಗಮ್ಮದೇವಿ ಜಾತ್ರೋತ್ಸವ

ಇಂದಿನಿಂದ ಗಂಗಾಪುರ ದುರುಗಮ್ಮದೇವಿ ಜಾತ್ರೋತ್ಸವ

ರಾಣೇಬೆನ್ನೂರು 9:  ತಾಲೂಕಿನ ಗಂಗಾಪುರ ಗ್ರಾಮದ ಪರಮ ಕಲ್ಯಾಣಿ ದುರುಗಮ್ಮದೇವಿಯ, ವಾರ್ಷಿಕ ಜಾತ್ರಾ ಮಹೋತ್ಸವವು, ಮೇ 9 2024 ಗುರುವಾರದಿಂದ ಆರಂಭವಾಗಿದ್ದು ಮೇ 11ರವರೆಗೆ ಮೂರು ದಿವಸಗಳ ಕಾಲ ಬಹು ವಿಜೃಂಭಣೆಯಿಂದ ಜರುಗಲಿದೆ ಎಂದು  ದುರುಗಮ್ಮ ದೇವಿ ಟ್ರಸ್ಟ್‌ ಕಮಿಟಿ ಹಾಗೂ ಗಂಗಾಪುರ ಗ್ರಾಮದ ಭಕ್ತ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಗುರುವಾರ ಸಂಜೆ 7 ಗಂಟೆಯಿಂದ  ದುರುಗಮ್ಮ ದೇವಿಯ ಮಹಾಪೂಜೆಯೊಂದಿಗೆ, ನಡೆದು ಶ್ರೀದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ, ಸಂಚರಿಸಿ  10 ಶುಕ್ರವಾರ ಮುಂಜಾನೆ ಏಳು ಗಂಟೆಯಿಂದ, ಶ್ರೀದೇವಿಗೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಿಸಲಾಗುವುದು. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕವಾಗಿ ಭಕ್ತಾದಿಗಳಿಗೆ ಮಹಾಪ್ರಸಾದ ಅನ್ನಸಂತರೆ​‍್ಣ ಜರಗುವುದು. ಸಂಜೆ 5:00 ಗಂಟೆಗೆ ಶ್ರೀದೇವಿಗೆ ಉಡಿ ತುಂಬುವುದು, ರಾತ್ರಿ 11:00 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶನಿವಾರ 11ರಂದು ಮುಂಜಾನೆ, 8 ಗಂಟೆಗೆ, ಶ್ರೀದೇವಿಯ ಮಹಾ ಮಂಗಳಾರತಿಯೊಂದಿಗೆ, ಜಾತ್ರೋತ್ಸವದ ಸಾಂಗ  ಮಂಗಳಗೊಳ್ಳುವುದು. 


ಸುದ್ದಿ ಓದಿ