ಗಂಗಾಪುರ ದುರ್ಗಾದೇವಿ ಜಾತ್ರೋತ್ಸವ : ಸಾಮೂಹಿಕ ವಿವಾಹ
ರಾಣೇಬೆನ್ನೂರು ಎ 24 ತಾಲೂಕಿನ ಸುಕ್ಷೇತ್ರ ಗಂಗಾಪುರ ಗ್ರಾಮದ ಪರಮ ಕಲ್ಯಾಣಿ ದುರುಗಮ್ಮದೇವಿ 36 ನೇ ವಾರ್ಷಿಕ ಮಹಾ ಜಾತ್ರೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮಗಳು ಮೇ 1-2023 ಸೋಮವಾರದಿಂದ ಮೇ 3ರವರೆಗೆ ಜರುಗಲಿದೆ. 1 ರಂದು ಸೋಮವಾರ ಸೂರ್ಯೋದಯ ಕಾಲ ಶ್ರೀದೇವಿಗೆ ಅಭಿಷೇಕ, ದುರ್ಗಾ ಹೋಮ, ಸೇರಿದಂತೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 7:00ಗೆ ಗ್ರಾಮದಲ್ಲಿ ಶ್ರೀದೇವಿಯ ಭವ್ಯ ಮೆರವಣಿಗೆಯು ನಡೆಯಲಿದೆ. ಮೇ 2 ಮಂಗಳವಾರ ಮಧ್ಯಾಹ್ನ 12:30 ಕ್ಕೆ ಅಭಿಜಿನ್ ಲಗ್ನದಲ್ಲಿ ಸಾಮೂಹಿಕ ವಿವಾಹ ಕಾರ್ಯ ಜಯಗಳಿವೆ. ಮಧ್ಯಾಹ್ನ 1:30 ಕ್ಕೆ ಮಹಾಪ್ರಸಾದ ವಿತರಣೆ, ಸಂಜೆ 5:00 ಗಂಟೆಗೆ ಶ್ರೀದೇವಿಗೆ ಸರ್ವ ಭಕ್ತಾದಿಗಳಿಂದ ವುಡಿ ತುಂಬುವ ಕಾರ್ಯಕ್ರಮ. ರಾತ್ರಿ 10-30ಕ್ಕೆ ವೈವಿಧ್ಯಮಯ ಮನೋಜನ ಕಾರ್ಯಕ್ರಮಗಳು ಜರುಗಲಿವೆ. ಬುಧವಾರ 3 ನಂದು ಶ್ರೀದೇವಿಗೆ ಮಹಾಮಂಗಳಾರತಿಯೊಂದಿಗೆ ಜಾತ್ರೋತ್ಸವವು ಸಾಂಗ ಮಂಗಲ ಗೊಳ್ಳುವುದು. ಎಂದು ದುರ್ಗಮ್ಮ ದೇವಿ ಟೆಸ್ಟ್ ಕಮಿಟಿ ಹಾಗೂ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ