ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಕಾಕಿ ಸಂಸ್ಥೆಯ ವತಿಯಿಂದ ಗಣೇಶೋತ್ಸವ.
ರಾಣಿಬೆನ್ನೂರು 18: ನಗರದ ಪಿ ಬಿ ರೋಡ್?ಗೆ ಹೊಂದಿಕೊಂಡಿರುವ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಕಾಕಿ ಜನ ಸೇವಾ ಸಂಸ್ಥೆಯ ವತಿಯಿಂದ ಉತ್ತರ ಭಾರತದ ಶೈಲಿಯ ರೀತಿ ವಿನಾಯಕನಿಗೆ ಅರಮನೆ ನಿರ್ಮಾಣ ಮಾಡಲಾಗಿದೆ ಎಂದು ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಕಾಕಿ ತಿಳಿಸಿದರು. ಅವರು ಸಿದ್ದೇಶ್ವರ ನಗರದ ಕಾಕಿ ಜನ ಸೇವಾ ಸಂಸ್ಥೆ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿವರ್ಷದಂತೆ ಈ ವರ್ಷವೂ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಹಿಂದಿನ ವರ್ಷ ದುಬೈನಲ್ಲಿ ನೋಡಿ ಬಂದಂತಹ ಅಲ್ಲಿನ ಗಣೇಶನ ಮಾದರಿಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಅದೇ ರೀತಿಯಲ್ಲಿ ತಾಲೂಕಿನ ಜನರಿಗೆ ತೋರಿಸಬೇಕೆಂಬ ಉದ್ದೇಶದಿಂದ 6ನೇ ವರ್ಷದ ಗಣೇಶೋತ್ಸವವನ್ನು ಆಯೋಜಿಸಲಾಗಿದೆ. ನುರಿತ ಕಲಾವಿದರನ್ನು ಒಳಗೊಂಡ ಕಲ್ಯಾಣ ಮಂಟಪದಲ್ಲಿಯೇ ತಿರುಪತಿಯ ಮಾದರಿಯಲ್ಲಿ ಗಣೇಶನ ಮೂರ್ತಿಯನ್ನು ನೋಡುವಂತೆ ಮಾಡಲಾಗಿದೆ.
11 ದಿನಗಳ ಕಾಲ ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದ್ದು ಕಲ್ಯಾಣ ಮಂಟಪದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದರು.ಹಿರಿಯ ಮುಖಂಡರಾದ ಶಿವಾನಂದ ಬಾಗಾದಿ ಅವರು, ವಿಘ್ನೇಶ್ವರ ಮಹಾರಾಜ ಪ್ರತಿಷ್ಠಾಪನೆ ಮಾಡಲಾಗುವುದು. ಕಳೆದ 5 ವರ್ಷದಲ್ಲಿ ಬಾಹುಬಲಿ, ಇಡಗುಂಜಿ ಗಣೇಶ, ಕೊಲ್ಲಾಪುರ ಮಹಾಲಕ್ಷ್ಮೀ, ಸೇರಿದಂತೆ ವಿಭಿನ್ನ ರೂಪದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಭಾರಿ ಅದಕ್ಕಿಂತ ವಿಭಿನ್ನವಾಗಿ ಜನರಿಗೆ ವಿಘ್ನೇಶ್ವರನನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ ಅಲ್ಲದೆ ಸಾಂಸ್ಕೃತಿಕವಾಗಿ 65 ಕೆಜಿ ಭಾರದ ಧನಸ್ಸು ಎತ್ತುವ ಸ್ಪರ್ಧೆ ಇದೆ. ವಿಜೇತರಿಗೆ ಸೂಕ್ತ ಬಹುಮಾನ ದೊರೆಯಲಿದೆ. ನಿತ್ಯವೂ ಸಾವಿರಾರು ಭಕ್ತರಿಗೆ ಮಹಾಪ್ರಸಾದ, ಅನ್ನ ಸಂತರೆ್ಣ ಆಯೋಜಿಸಲಾಗಿದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಮೂರ್ತಿ ನಿರ್ಮಿತ ಕಲಾವಿದ ರಾಜು ಸುಂಕಾಪುರ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಶ್ರೀಧರ್ ಅಮಾಸಿ, ಶಿವಶಂಕರ ಕಾಕಿ, ಶ್ರೀನಿವಾಸ್ ಸುರಹೊನ್ನಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.