ರಾಣೆಬೆನ್ನೂರ

ಗಣೇಶಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸಬೇಕು; ವೇಂಕಟರಮಣ ನಾಯಕ

ಗಣೇಶಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸಬೇಕು; ವೇಂಕಟರಮಣ ನಾಯಕ

ರಾಣಿಬೆನ್ನೂರು:31 ಗಣೇಶೋತ್ಸವದಲ್ಲಿನ ಪರಿಸರ ಮಾಲಿನ್ಯದ ನೆಪವನ್ನು ಹೇಳಿ ’ಕೃತಕ ಟ್ಯಾಂಕ್ ಮತ್ತು ಅರಿಶಿನ ಗಣಪತಿ, ಗೋಮಯ ಗಣಪತಿ ಎಂಬ ಧರ್ಮಬಾಹಿರ ಹಾಗೂ ಆಯೋಗ್ಯ ಸಂಕಲ್ಪನೆಯನ್ನು ನಡೆಸಿ ಗಣೇಶಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸಬೇಕೆಂದು ಹಿಂದು ಜನಜಾಗೃತಿ ಸಮಿತಿಯ ವೇಂಕಟರಮಣ ನಾಯಕ ಹೇಳಿದರು. 

 ಅವರು ನಗರದ ಆಡಳಿತ ಕಚೇರಿಯಲ್ಲಿ ಉಪ ತಹಶೀಲ್ದಾರ್ ಅರುಣ ಎಸ್ ಕಾರಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. 

ಕರ್ನಾಟಕ ಸರ್ಕಾರದ ಪರಿಸರ ಇಲಾಖೆಯು ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಯಿಂದ ಪರಿಸರ ಮಾಲಿನ್ಯವಾಗುತ್ತದೆಯೆಂದು ಅರಿಶಿನ ಗಣೇಶ ಮೂರ್ತಿ ಮಾಡಲು ಜನರಿಗೆ ಕರೆ ನೀಡಿದೆ. ಅದಕ್ಕಾಗಿ ಈ ವರ್ಷ 10 ಲಕ್ಷ ಅರಿಶಿನ ಗಣಪತಿ ಮೂರ್ತಿ ನಿರ್ಮಾಣ ಮಾಡುವ ಅಭಿಯಾನ ಮಾಡುತ್ತಿದೆ. ಇದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಶ್ರೀಗಣೇಶನ ತತ್ವಗಳು ಆವೇಮಣ್ಣಿನಿಂದ ಮಾಡಿದ ಮೂರ್ತಿಯಲ್ಲಿ ಸಂಗ್ರಹವಾಗುತ್ತದೆ ಮತ್ತು ಪ್ರಕ್ಷೇಪಣೆಯಾಗುತ್ತದೆ ಹಾಗೂ ಎಲ್ಲಾ ಭಕ್ತರಿಗೆ ಗಣೇಶ ತತ್ವದ ಲಾಭವಾಗುತ್ತದೆ. ಭಕ್ತರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಇಂದು ಸರ್ಕಾರ ಮತ್ತು ಪರಿಸರವಾದಿಗಳು ವರ್ಷದಲ್ಲಿ ಒಂದು ಸಲ ಜರಗುವ ಗಣೇಶೋತ್ಸವದಿಂದ ಪ್ರದೂಷಣೆಯಾಗುತ್ತದೆ ಹಿಂದೂ ಧರ್ಮಾಚರಣೆಯ ವಿಷಯದಲ್ಲಿ ಮೂಗು ತೋರಿಸುತ್ತದೆ ಹಾಗೂ ಗಣೇಶಮೂರ್ತಿಯನ್ನು ಹರಿಯುವ ನೀರಿನಲ್ಲಿ ಪಾರಂಪಾರಿಕ ಪದ್ಧತಿಯಲ್ಲಿ ವಿಸರ್ಜಿಸಲು ವಿರೋಧಿಸುತ್ತಾರೆ. ಗಣೇಶಭಕ್ತರು ಕೃತಕ ಟ್ಯಾಂಕ್‌ದಲ್ಲಿ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಬಂದೆರಗಿದೆ ಎಂದರು. 

ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ತೆಗ್ಗಿನ್ ಮಾತನಾಡಿ, ಪ್ರತಿವರ್ಷ ಲಕ್ಷ-ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಕೃತಕ ಕೆರೆಗಳನ್ನು ತಯಾರು ಮಾಡಬಾರದು. ಅದರ ಬದಲು ಮೂರ್ತಿ ವಿಸರ್ಜನೆಯ ವಿಷಯದಲ್ಲಿ 2010 ರಲ್ಲಿ ಕೇಂದ್ರೀಯ ಪ್ರದೂಷಣ ನಿಯಂತ್ರಣ ಮಂಡಳಿಯು ನೀಡಿದ ಸೂಚನೆಗನುಸಾರ ’ಗಣೇಶಮೂರ್ತಿ ವಿಸರ್ಜನೆಗಾಗಿ ಜಲಾಶಯದಲ್ಲಿ ಅಥವಾ ಕೊಳದಲ್ಲಿ ಒಂದು ಮೂಲೆಯಲ್ಲಿ ಕಬ್ಬಿಣದ ತಂತಿಗಳಿಂದ ಕಟ್ಟಿದ ಬಲೆಗಳಿಂದ ಕಟ್ಟಿದ ಕಲ್ಲಿನ ಗೋಡೆಯನ್ನು ತಯಾರಿಸಿ ಅಲ್ಲಿ ಗಣೇಶಭಕ್ತರಿಗೆ ಗಣೇಶಮೂರ್ತಿಗಳನ್ನು ವಿಸರ್ಜಿಸಲು ಹೇಳಬೇಕು.  

ಯಾವುದಾದರೊಂದು ತಂತಿಯ ಬಲೆಯ ಭದ್ರಗಳಿರುವ ಗೋಡೆಯನ್ನು ಕಟ್ಟಿದರೆ ಅದು ದೀರ್ಘಕಾಲದವರೆಗೆ ಬಾಳ್ವಿಕೆ ಬರುತ್ತದೆ. ಹಾಗೂ ಪ್ರತಿವರ್ಷ ನಗರ ಸಭೆ ಮಾಡುವ  ಲಕ್ಷಗಟ್ಟಲೆ ರೂಪಾಯಿಗಳು ಉಳಿತಾಯವಾಗುತ್ತದೆ ಎಂದರು. ಪ್ರವೀಣ್ ಮಜ್ಜಗ್ಗಿ, ಸೋಮರೆಡ್ಡಿ ಹಾದಿಮನಿ, ರಮೇಶ ಮಾಕನೂರು, ವಸಂತ ಬಣಕಾರ, ಚಂದ್ರು ಇಟಗಿ, ಶ್ರೀಕಾಂತ್ ಪಟಣ್ಣಶೆಟ್ಟಿ, ಹರೀಶ ನೆಲವಗಿ, ಸಂಜೀವರೆಡ್ಡಿ ಕೊಪ್ಪದ, ವಾಗೇಶ ಕಮದೋಡ, ಹನುಮಂತಪ್ಪ ಹಾದಿಮನಿ, ಭರತ್ ಬಡಿಗೇರ ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ