ಗಣೇಶ ಹಬ್ಬ, ಈದ ಮೀಲಾದ ಶಾಂತಿಯುತವಾಗಿ ಆಚರಿಸಿ: ಸಿಪಿಐ ಅವಜಿ
ಸಂಕೇಶ್ವರ 07: ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ ಗಣೇಶ ಹಬ್ಬ ಮತ್ತು ಈದ ಮಿಲಾದ್ ಈ ಹಬ್ಬಗಳು ಕೂಡಿ ಬಂದಿವೆ. ಬಾಲ ಗಂಗಾಧರ ತಿಲಕ ಇವರು ಆಚರಿಸಿದ ಗಣೇಶ ಹಬ್ಬ ಈಗ ರಾಷ್ಟ್ರೀಯ ಹಬ್ಬವಾಗಿ ಪರಿವರ್ತನೆಗೊಂಡಿದೆ. ಮುಸ್ಲಿಂ ಬಾಂಧವರ ಹಬ್ಬವು ಸಹ ಇದೆ ತಿಂಗಳಿನ 28ರಂದು ಹಾಗೂ ಗಣೇಶ ಹಬ್ಬವೂ ಸೆಪ್ಟೆಂಬರ 19ರಂದು ಆರಂಭಗೊಳ್ಳುತ್ತದೆ. ಪ್ರಸಿದ್ಧ ನೀಲಗಾರ ಗಣೇಶನ ಹಬ್ಬವೂ ಸತತ 21 ದಿನ ಜರಗುತ್ತದೆ.
ಈ ಹಬ್ಬಗಳ ಪ್ರಯುಕ್ತವಾಗಿ ಮುಂಜಾಗ್ರತೆ ಕ್ರಮವಾಗಿ ಸಂಕೇಶ್ವರದ ಹಾಗೂ ಸಂಕೇಶ್ವರ ಪೋಲಿಸ್ ಠಾಣೆಯ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮೀಣ ಭಾಗದ ಗಣೇಶ ಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಂಕೇಶ್ವರ ಪೋಲಿಸ್ ಠಾಣೆಯ ಸಿಪಿಐ ಎಸ್.ಎಮ್. ಅವಜಿ ಅವರು ಮಾತನಾಡುತ್ತಾ ಸರ್ವೋಚ್ಚ ನ್ಯಾಯಾಲಯದ ನಿಯಮಾನುಸಾರವಾಗಿ ಡಾಲ್ಬಿ ಸೌಂಡ ಸಿಸ್ಟಮಗಳನ್ನು ಬಳಸಬಾರದೆಂದು ತೀರ್ು ಇದ್ದು ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿಯೂ ಸಹ ಇದೆ. ಸರ್ಕಾರದ ಆದೇಶ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ತೀರ್ುಗಳನ್ನು ನಾವು ಸಂವಿಧಾನಿವಾಗಿ ಎಲ್ಲರೂ ಬದ್ಧರಿರಬೇಕು ಅದರಂತೆಯೇ ನಡೆಯಬೇಕು. ಯಾವುದೇ ಅಹಿತಕರ ಘಟನೆಗಳ ನಡೆಯದಂತೆ ಆಯಾ ಗಣೇಶ ಮಂಡಳದ ಪದಾಧಿಕಾರಿಗಳು ಎಚ್ಚರ ವಹಿಸಬೇಕು ಎಂದರು.
ಸ್ಥಳೀಯ ಪೋಲಿಸ್ ಅಧಿಕಾರಿ ಜೆ.ಡಿ. ನರಸಿಂಹರಾಜ ಅವರು ಮಾತನಾಡಿ ಪಾಶ್ಚಿಮಾತ್ಯ ದೇಶದಲ್ಲಿಯ ಈ ಡಾಲ್ಬಿ ಸಿಸ್ಟಮ ನಮ್ಮ ದೇಶದ ಸಂಸ್ಕೃತಿ ಅಲ್ಲ. ನಮ್ಮ ದೇಶದಲ್ಲಿ ಕರಡಿ ಮಜಲು, ಡೊಳ್ಳಿನ ಕುಣಿತ, ಲೇಜಿಮ, ಮುಂತಾದವುಗಳನ್ನು ಈ ಗಣೇಶ ಹಬ್ಬದ ಸಂಭ್ರಮದಲ್ಲಿ ಬಳಸಿಕೊಂಡು ಸಂಭ್ರಾಮಾಚರಣೆ ಮಾಡಬೇಕೆಂದು ಹೇಳಿದರು.
ಯುವಕರು ಯಾವುದೇ ಕ್ಷುಲ್ಲಕ ತಂಟೆಯನ್ನು ಮಾಡಿದರೆ ಅವರ ಮೇಲೆ ಕೇಸಗಳನ್ನು ಹಾಕಬಾರದೆಂದು ಯುವ ಧುರೀಣ ದೀಲೀಪ ಹೊಸಮನಿ, ಹಾಗೂ ಪತ್ರಕರ್ತ ಎಂ.ಬಿ. ಘಸ್ತಿ ಪೋಲಿಸ ಅಧಿಕಾರಿಯವರಿಗೆ ಮನವಿ ಮಾಡಿಕೊಂಡರು.
ಇವರು ಹಿರಿಯರಾದ ನಗರದ ಗಣ್ಯ ವ್ಯಕ್ತಿ ಅಪ್ಪಾಸಾಹೇಬ ಶಿರಕೋಳಿ, ಬಂಡು ಹತನೂರೆ, ಡಾ. ಜಯಪ್ರಕಾಶ ಕರಜಗಿ, ಪುರಸಭೆ ಸದಸ್ಯ ಜೀತೆಂದ್ರ ಮರಡಿ ಹಾಗೂ ಪುರಸಭೆಯ ಸದಸ್ಯರೆಲ್ಲರೂ ಜೊತೆಗೆ ಮಾತನಾಡಿ ಯುವಕರಿಗೆ ಬುದ್ಧಿಮಾತು ಹೇಳಿ ಹಾಗೆ ಶಾಂತ ರೀತಿಯಿಂದ ಗಣೇಶ ಹಬ್ಬ ಹಾಗೂ ಈದ ಮೀಲಾದ ಹಬ್ಬ ಆಚರಿಸಬೇಕೆಂದು ಹೇಳಿದರು. ಸುನ್ನತ ಜಮಾತ ತಂಜೀಮ ಕಮೀಟಿ ಅಧ್ಯಕ್ಷ ದಸ್ತಗೀರ ಬಾಬು ತೇರಣಿ ಮತ್ತು ಇನ್ನುಳಿದ ಮುಸ್ಲಿಂ ಬಾಂಧವರು ಧುರೀಣರು ಸಭೆಯಲ್ಲಿ ಹಾಜರರಿದ್ದರು.