ಜುಗೂಳ ಗ್ರಾಮದ ಒಂಬತ್ತು ದಿನಗಳ ಗಣೇಶನಿಗೆ ವಿದಾಯ: ಭಕ್ತಿ ಭಾವದಿಂದ ಅದ್ದೂರಿ ಮೆರವಣಿಗೆ
ಕಾಗವಾಡ 16: ತಾಲೂಕಿನ ಜುಗೂಳ ಗ್ರಾಮದಲ್ಲಿ ಗಣೇಶ ಚತುರ್ಥಿ ಹಬ್ಬದವು ಒಂಬತ್ತನೇ ದಿನವಾದ ರವಿವಾರ ದಿ. 15 ರಂದು ಗಣಪತಿ ವಿಸರ್ಜನೆಯ ಧಾರ್ಮಿಕ ಕಾರ್ಯವು ಅತ್ಯಂತ ಸಂಭ್ರಮ ಹಾಗೂ ಸಂಡಗರದಿಂದ ಜರುಗಿತು.
ಗ್ರಾಮದ ಜೈನ್ಗಲ್ಲಿಯ ತ್ರಿನೇತ್ರ ಮಂಡಳ, ಪರಶುರಾಮ ಮಂಡಳ, ಯುವಶಕ್ತಿ ಮಂಡಳ, ಬಸವೇಶ್ವರ ಮತ್ತು ಮಲ್ಲಿಕಾರ್ಜುನ ಮಂಡಳಗ ಸಾರ್ವಜನಿಕವಾಗಿ ಪ್ರತಿಷ್ಠಾಪಿಸ್ಪಟ್ಟ ಗಣಪತಿ ಮೂರ್ತಿಗಳಿಗೆ ಪೂಜಾ ವಿಧಿವಿಧಾನದ ನಂತರ ಅದ್ದೂರಿಯ ಮೆರವಣಿಗೆಯೊಂದಿಗೆ ವಿದಾಯ ಹೇಳಲಾಯಿತು.
ಮುಖ್ಯವಾಗಿ ಅಬ್ಬರದ ಡಿಜೆ ಸೌಂಡ ಶಬ್ದಗಳ ಅಬ್ಬರವಿಲ್ಲದೇ ಚಲನಚಿತ್ರ ಮತ್ತು ಜಾನಪದ ಗೀತೆಗಳ ಹಾಡಿಗೆ ಯುವಪಡೆ ಕುಣಿದು ಕುಪ್ಪಳಿಸಿ, ತಮ್ಮ ತಮ್ಮ ಮಂಡಳಗಳ ವಿನಾಯಕನನ್ನು ಬೀಳ್ಕೊಟ್ಟರು.
ಗ್ರಾಮದ ಸಾರ್ವಜನಿಕ ಗಜಾನನ ಮಂಡಳಗಳ ಸದಸ್ಯರಾದ ಮಹಾವೀರ ಗಣೇಶವಾಡಿ, ಭರತ ಲಾಂಡಗೆ, ಬಾಬಾಸಾಬ ತಾರದಾಳೆ, ಬಾಹುಬಲಿ ಉಪಾಧ್ಯೆ, ಆನಂದ ಖೋತ, ತಾತ್ಯಾಸಾಬ ಮಾಳಿ, ಸಚೀನ ಯಮಕನಮರಡಿ, ಕಲ್ಲಪ್ಪಾ ಅರಗೆ, ಮಹೇಶ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.