ರಾಣೇಬೆನ್ನೂರು ಮೇದಾರ ಕೇರಿಯಲ್ಲಿ ಬಿದಿರಿನ "ಐ ಫೀಲ್" ಗೋಪುರ: ಆಕರ್ಷಿಸುತ್ತಿರುವ ವಿಘ್ನೇಶ್ವರ ಮಹಾರಾಜ್
ರಾಣೇಬೆನ್ನೂರು 20: ವಾಣಿಜ್ಯ ನಗರದ ಹಲಗೇರಿ ರಸ್ತೆಯಲ್ಲಿರುವ ಬಂಬೂ ಬಜಾರ್ ಮ್ಯಾದಾರ ಓಣಿಯಲ್ಲಿ, ಶ್ರೀ ಗಜಾನನ ಉತ್ಸವ ಸಮಿತಿಯು, ಸಮಾಜದ ಹಿರಿಯರು, ಯುವಕರು ಸೇರಿ ಈ ಬಾರಿ ವಿಶೇಷವಾದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ. ತಮ್ಮ ವಂಶ ಪರಂಪರೆಯಿಂದ ಬಳುವಳಿಯಾಗಿ ಬಂದಿರುವ ಮೇಧಾರಿಕೆಯನ್ನು ಕುಲ ಕಸುಬನ್ನಾಗಿ ವೃತ್ತಿ ಅವಲಂಬಿಸಿರುವ ಇವರು ನಿಜ ಕಾಯಕಯೂಗಿಗಳು. ತಾವು ವಾಸಿಸುವ ಮೇದಾರ ಕೆರೆಯಲ್ಲಿ ಕಳೆದ 45 ವರ್ಷಗಳಿಂದ ರಾಷ್ಟ್ರೀಯ ಹಬ್ಬವಾದ ಗಣೇಶೋತ್ಸವವನ್ನು ಪ್ರತಿ ಬಾರಿಯೂ, ಸ್ಪರ್ಧಾತ್ಮಕವಾಗಿ ಆಚರಿಸುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ತಮ್ಮ ಕುಲ ಆರಾಧ್ಯ ದೇವತೆ ಶ್ರೀ ಮಲಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ, 45ನೇ ವರ್ಷದ ಅಂಗವಾಗಿ, ಯಾವುದೇ ಆಧುನಿಕ ಸ್ಪರ್ಶವಿಲ್ಲದೆ ಕೇವಲ ತಮ್ಮ ಕುಲ ವೃತ್ತಿಗೆ ಸಂಬಂಧಿಸಿದ ವಸ್ತುಗಳನ್ನೇ,ಸಂಪೂರ್ಣ ಬಿದಿರು ಬಳಸಿಕೊಂಡು, ""ಐಫೀಲ್"" ಗೋಪುರದ ಮಾದರಿಯನ್ನು ಒಳಾಂಗಣದಲ್ಲಿ ನಿರ್ಮಿಸಿ, ವಿಶೇಷವಾದ ವಿಘ್ನೇಶ್ವರನ ಭವ್ಯಮೂರ್ತಿಯನ್ನು ಪ್ರತಿಷ್ಠಾಪಿಸಿ ಸಾಧನೆ ಮೆರೆದಿದ್ದಾರೆ.
ಇಂದು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಹೊರಟ ಭವ್ಯ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ. ನಂತರ ಆಕರ್ಷಣಿಯವಾಗಿ ನಿರ್ಮಿಸಲಾದ "ಐ ಫೀಲ್ "ಗೋಪುರದ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆ ಮುಂಚೂಣಿಯಲ್ಲಿ ಶ್ರೀ ಗಜಾನನ ಉತ್ಸವ ಸಮಿತಿಯ ಅಧ್ಯಕ್ಷ, ಕೃಷ್ಣಪ್ಪ ಗುಡದಳ್ಳಿ, ಉಪಾಧ್ಯಕ್ಷ ಶ್ರೀಕಾಂತ್ ಗುಡಗೇರಿ,ಕಾರ್ಯದರ್ಶಿ ರಾಘು ಅಬ್ಬಿಗೇರಿ, ಖಜಾಂಚಿ ಮಂಜು ಗುಡದಳ್ಳಿ, ಸದಸ್ಯರಾದ, ಬಿ. ರವಿ, ರಾಜು ಕೊಪ್ಪಳ, ಟಿ ವಿಶ್ವ, ಕರಬಸಪ್ಪ ಚಳಗೇರಿ, ದುರ್ಗಪ್ಪ ಬಜ್ಜಿ, ಅಪ್ಪು ಅಬ್ಬಿಗೇರಿ, ಹನುಮಂತಪ್ಪ ಗುಡಿಗೇರಿ, ರಮೇಶ್ ಕೊಡಕಳ್ಳಿ ಸೇರಿದಂತೆ ಸರ್ವ ಸದಸ್ಯರು ಸಮಾಜದ ಮುಖಂಡರು, ಮತ್ತು 200ನೂರಕ್ಕೂ ಹೆಚ್ಚು ಮಹಿಳೆಯರು ಹಾಗೂ ಶ್ರೀ ಶಿವಶರಣ ಮೇದಾರ ಕೇತೇಶ್ವರ ಯುವಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡು ಉತ್ಸವದ ಮೆರವಣಿಗೆಗೆ ಸಾಕ್ಷಿಯಾಗಿದ್ದರು. ಇಂದಿನಿಂದ ಸಾರ್ವಜನಿಕ ಭಕ್ತಾದಿಗಳಿಗೆ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದು ಸೆಪ್ಟೆಂಬರ್ 26ರ ವರೆಗೆ ದರ್ಶನಕ್ಕೆ ಅವಕಾಶವಿದೆ ಎಂದು ಗಜಾನೋತ್ಸವ ಸಮಿತಿಯ ಮುಖಂಡರು ತಿಳಿಸಿದ್ದಾರೆ.