ಗಾಂಧೀ ತತ್ವಗಳು ಸರ್ವಕಾಲಕೂ ಪ್ರಸ್ತುತ : ಡಾ ಗಾಜಿ
ಗುಳೇದಗುಡ್ಡ, 02: ದೇಶ ಕಂಡ ಅಪರೂಪದ ಮಹಾಪುರುಷರಲ್ಲಿ ಗಾಂಧೀಜಿಯವರೂ ಒಬ್ಬರೂ. ಅವರು ಯುಗ ಪುರುಷರಾಗಿ ಜಗತ್ತಿಗೆ ಮಾದರಿಯಾದವರು. ಸತ್ಯ,ಅಹಿಂಸೆ ಮತ್ತು ಸತ್ಯಾಗ್ರಹ ಗಳಂತಹ ಅಸ್ತ್ರ ಬಳಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರ ತತ್ವ, ಸಿದ್ಧಾಂತಗಳು ಸರ್ವ ಕಾಲಕೂ ಪ್ರಸ್ತುತ ಎಂದು ಉಪನ್ಯಾಸಕ ಡಾ.ವೈ.ಪಿ.ಗಾಜಿ ಹೇಳಿದರು.
ಅವರು ಶನಿವಾರ ಸ್ಥಳೀಯ ಭಂಡಾರಿ ಹಾಗೂ ರಾಠಿ ಪದವಿ ಪೂರ್ವ ಕಾಲೇಜನಲ್ಲಿ ಜರುಗಿದ ಮಹಾತ್ಮಾ ಗಾಂಧೀಜಿಯವರ 152 ನೇ ಜಯಂತಿ ಹಾಗೂ ಭಾರತದ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತ್ರೀಜಿಯವರ 117 ನೇ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ನೆಲದ ಪುಣ್ಯ ಹಣ್ಣಾದಾಗ ಹುಟ್ಟಿ ಬರುವ ಮಹಾತ್ಮರಲ್ಲಿ ಗಾಂಧೀಜಿಯವರೂ ಒಬ್ಬರು. ಅವರ ವ್ಯಕ್ತಿತ್ವ ವಿಶಾಲವಾದ ಸಾಗರವಿದ್ದಂತೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ, ಅಸ್ಪೃಶ್ಯತೆ ನಿವಾರಣೆಯಲ್ಲಿ, ಸ್ರೀ ಸ್ಥಾನಮಾನ ಸುಧಾರಣೆಯಲ್ಲಿ, ಹೇಗೆಹಲವು ಹತ್ತಾರು ದೃಷ್ಠಿಕೋನದಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ನಮ್ಮ ಕಣ್ಣನ್ನು ತೆರೆಸುತ್ತವೆ. ಮಹಾತ್ಮರೆನಿಸುವ ಅವರ ಗುಣಗಳು ಯಾವತ್ತೂ ನಮಗೆ ಅನುಕರಣೀಯವೆಂದರು.
ಶಿಕ್ಷಣಶಾಸ್ತ್ರ ಉಪನ್ಯಾಸಕ ಎನ್.ಬಿ.ಕೋಟಿ ಲಾಲ್ಬಹದ್ದೂರ ಶಾಸ್ತ್ರೀಜಿಯವರ ಕುರಿತು ಮಾತನಾಡಿ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಲ್ಲಿ ಶಾಸ್ತ್ರೀಜೂ ಅವರೂ ಒಬ್ಬರು. ಅವರ ಆಡಳಿತದ ಕುರುಹುಗಳನ್ನು ಇಂದಿಗೂ ಜೀವಂತಿಕೆ ಪಡೆದಿವೆ ಎಂದರು.
ಈ ಕಾರ್ಯಕ್ರಮದಲ್ಲಿ ಮೊದಲು ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವ ನಮನ ಅರ್ಿಸಲಾಯಿತು. ಪದವಿ ಉಪನ್ಯಾಸಕ ಡಾ.ಎಂ.ಎಸ್.ಪಾಟೀಲ, ಪದವಿಪೂರ್ವ ವಿಭಾಗದ ಉಪನ್ಯಾಸಕ ಎಂ.ಎಸ್.ಸಾರಂಗಿ, ಎಂ.ಬಿ.ಬಡಿಗೇರ, ಎಂ.ಎ.ಮುಲ್ಲಾ, ಜೆ.ಐ.ರಾಠೋಡ, ಉಪನ್ಯಾಸಕಿಯರಾದ ಜಿ.ಎಸ.ಕಲ್ಯಾಣಿ, ಕೆ.ಎಸ್.ತಿವಾಡಿ, ಡಿ.ಪಿ.ಹೆರೂರ, ಐ.ಬಿ.ಹುನಗುಂದ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.