ರಾಣೆಬೆನ್ನೂರ

ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ, ಶಾಸ್ರೀಜಿ ದಿನಾಚರಣೆ

ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ, ಶಾಸ್ರೀಜಿ ದಿನಾಚರಣೆ

ರಾಣಿಬೆನ್ನೂರ 04: ಇಲ್ಲಿನ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 155ನೇ ಹಾಗೂ ಲಾಲ್ ಬಹದ್ದೂರ ಶಾಸ್ರೀಯವರ 120ನೇ ಜನ್ಮ ದಿನಾಚರಣೆೆಯನ್ನು ಆಚರಿಸಲಾಯಿತು.  

ಈ ವೇಳೆ ಮುಖ್ಯೋಪಾಧ್ಯಾಯ ಚನ್ನಬಸಪ್ಪ ಅವರು, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಾ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ತಮ್ಮ ಅಹಿಂಸೆ ಚಳುವಳಿಯಿಂದ ವಿಶ್ವದ ಗಮನ ಸೆಳದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಲು ಪ್ರಯತ್ನಿಸಿದ್ದಾರೆ ಎಂದರು.  

ಶಿಕ್ಷಕ ನಾಗರಾಜ, ಲತಾ ಸಿ.ಎಸ್ , ಮಹಮ್ಮದರಫಿಕ್ ರಟ್ಟಿಹಳ್ಳಿ, ನಾಗರಾಜ್‌ಎಮ್, ಪುಷ್ಪ ಉಜ್ಜೇರ್, ಆಶಾ ಬಿ.ಎ, ಗೀತಾ ಕಮ್ಮಾರ, ಪ್ರವೀಣಗೌಡ ಪಾಟೀಲ್, ಶಹರಬಾನು ಹಾಜೀ, ಮಮತ ಕೆ.ಎಮ್, ುಐಶ್ವರ್ಯಎಸ್, ಚೈತ್ರ ಸಿ.ಪಿ, ದೀಪಾ ಕೆ, ಅನೀತಾ ಪಿ.ಎಮ್, ಈರಮ್ಮ , ಬಸವರಾಜ ಕಣವಿ ಮತ್ತು ವಿದ್ಯಾರ್ಥಿಗಳು ಇದ್ದರು.  

ಸುದ್ದಿ ಓದಿ