ರಾಣೆಬೆನ್ನೂರ

ವಿದ್ಯಾರ್ಥಿಗಳ ಭವಿಷ್ಯ ಪರಿಣಾಮಕಾರಿ ಶಿಕ್ಷಣ ಪಡೆಯುವಲ್ಲಿ ಇದೆ : ಶುಭಾಷ ಸಾವುಕಾರ

ವಿದ್ಯಾರ್ಥಿಗಳ ಭವಿಷ್ಯ ಪರಿಣಾಮಕಾರಿ ಶಿಕ್ಷಣ ಪಡೆಯುವಲ್ಲಿ ಇದೆ : ಶುಭಾಷ ಸಾವುಕಾರ

ರಾಣೇಬೆನ್ನೂರು 21: ಶಿಕ್ಷಣವೆನ್ನುವುದು ನಿಂತ ನೀರಲ್ಲ, ಸದಾಕಾಲ ಹರಿಯುವ ಗಂಗೆ. ಇಂದಿನ ವಿದ್ಯಾರ್ಥಿಗಳು ಬಹಳಷ್ಟು ಕಷ್ಟಪಟ್ಟು ಓದುವ ಅಗತ್ಯವಿಲ್ಲ. ಓದುವುದಕ್ಕೆ ಇಷ್ಟಪಡಬೇಕಾಗುತ್ತದೆ ಜ್ಞಾನ, ವಿಜ್ಞಾನ  ಮತ್ತು ತಂತ್ರಜ್ಞಾನ ಇವುಗಳ್ಳೆಲವು ವಿಫುಲವಾಗಿ ದೊರೆಯುವುದರಿಂದ ಶೈಕ್ಷಣಿಕವಾಗಿ, ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ಆರ್ ಟಿ ಇ ಎಸ್ ಸಂಸ್ಥೆಯ ಅಧ್ಯಕ್ಷ ಸುಭಾಷ್ ಸಾವುಕಾರ ಹೇಳಿದರು.  

ಅವರು, ಸೋಮವಾರ ನಗರ ಹೊರವಲಯದ, ರಾ.ತಾ.ಆರಿ​‍್ಟ.ಇ.ಎಸ್ ಮಾತನಾಡಿದರು.  

ಅಂದು ಶಿಕ್ಷಣ ಪಡೆಯಬೇಕೆನ್ನುವ ಹಂಬಲವಿದ್ದರೂ, ಶಿಕ್ಷಣ ನೀಡುವ ಸಂಸ್ಥೆಗಳ ಕೊರತೆ ಇತ್ತು, ತಂದೆಯವರ ದೂರದೃಷ್ಟಿ  ಶಿಕ್ಷಣ ಪ್ರೇಮಿಗಳ ಅಭಿಮಾನ ಕಾರಣದಿಂದ ಅಂದು ಈ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ಎಂದು ಇತಿಹಾಸವನ್ನು ಸ್ಮರಿಸಿ ಮಾತನಾಡಿದ ಸುಭಾಷ್ ಸಾವುಕಾರ ಅವರು ಸಂಸ್ಥೆ ಪ್ರಾರಂಭದಿಂದಾಗಿ, ಹತ್ತಾರು ಸಾವಿರ ವಿದ್ಯಾರ್ಥಿಗಳು ಸುಲಭವಾಗಿ ಪದವಿ ಶಿಕ್ಷಣ ಪಡೆಯುವಂಥಾಗಿದೆ ಎಂದರು.  

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ.ಪ್ರೇಮಾನಂದ ಲಕ್ಕಣ್ಣನವರ ಅವರು, ವಿದ್ಯಾರ್ಥಿ ಜೀವನ ಅತ್ಯಂತ ಸುಂದರ ಎನ್ನುವ ಮಾತು ವಾಸ್ತವಿಕ ಸತ್ಯ. ಇಂದು ಇಷ್ಟಪಟ್ಟು ಅಧ್ಯಯನ ಮಾಡಿದರೇ, ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ರೂಪಿಸಿಕೊಂಡು, ತಂದೆ,ತಾಯಿ ಸಮಾಜಕ್ಕೆ ಮಾದರಿಯಾಗಬಹುದಾಗಿದೆ ಎಂದರು.  

ಇಂದಿನ ವಿದ್ಯಾರ್ಥಿಗಳು ಶಿಕ್ಷಣ ಕಷ್ಟೇ ಸೀಮಿತವಾಗದೆ, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡು ವೃತ್ತಿಪರ ಶಿಕ್ಷಣದತ್ತ ಮುಖ ಮಾಡಬೇಕಾದ ಅಗತ್ಯವಿದ್ದು, ಈ ನಿಟ್ಟಿನಲ್ಲಿ  ಪ್ರತಿಯೊಬ್ಬ ವಿದ್ಯಾರ್ಥಿಗಳು ಚಿಂತಿಸಬೇಕಾದ ಅಗತ್ಯವಿದೆ ಎಂದು ಲಕ್ಕಣ್ಣನವರ, ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.  

ಕಾಲೇಜು ಪ್ರಾಚಾರ್ಯ ಸಿ.ಎ. ಹರಿಹರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯ, ಕಲಾಪಗಳಿಗೆ  ಚಾಲನೆ ನೀಡಿ ಶುಭ ಹಾರೈಸಿದರು.  

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸೀತಾ ಕೆ. ಕೋಟಿ,ಮಹಿಳಾ ಕಾರ್ಯದರ್ಶಿ ಭಾಗ್ಯ ಮಳಿಯಪ್ಪನವರ, ಐ. ಕ್ಯೂ.ಎ.ಸಿ, ಸಂಯೋಜಕ ಡಾ.ಆರ್ ಮಧುಕುಮಾರ, ಸೇರಿದಂತೆ ಕಾಲೇಜು ವಿವಿಧ ವಿಭಾಗಗಳ ಉಪನ್ಯಾಸಕರು, ಆಡಳಿತ ಮಂಡಳಿ ಸದಸ್ಯರು  ಸಿಬ್ಬಂದಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಾಲೇಜಿನ ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಮೊತ್ತ, ಪಾರಿತೋಷಕ  ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.  ಅಲ್ತಾಫ್ ಸಿ. ಬಿ. ಪ್ರಾರ್ಥಿಸಿದರು. ಸಾಂಸ್ಕೃತಿಕ ವೇ. ಕಾರ್ಯಾಧ್ಯಕ್ಷೆ ಡಾ. ಸರಸ್ವತಿ ಬಮ್ಮನಾಳ ಸ್ವಾಗತಿಸಿದರು. ವಿದ್ಯಾರ್ಥಿ ಓ. ಕಾರ್ಯಾಧ್ಯಕ್ಷ ಹೆಚ್‌. ಜಿ. ಬಸವರಾಜ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಸುನಿಲ ಕಡೂರ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ