ಸಂವಿಧಾನ ಆಶಯ ಈಡೇರಿಸಿ: ಅನುಪಮ
ಲೋಕದರ್ಶನ ವರದಿ
ಹೂವಿನ ಹಡಗಲಿ: ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಂಬೇಡ್ಕರ್ ವಿಚಾರಧಾರೆಗಳನ್ನು ಹೆಚ್ಚು ಓದಿರಿ ಎಂದು ಸಿವಿಲ್ ನ್ಯಾಯಾಧೀಶ ಅನುಪಮ ಡಿ ಹೇಳಿದರು.
ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶುಕ್ರವಾರತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ ಸಂಘ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಸಮಾನತೆಯ ಹರಿಕಾರ ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆಗೆ ಮಾತ್ರ ಸೀಮಿತರಾಗದೆ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಿರಿ ಎಂದರು.ಮನುಷ್ಯನ ದುರಾಸೆಯೇ ಭ್ರಷ್ಟಾಚಾರಕ್ಕೆ ಮೂಲ. ಭವ್ಯ ಭಾರತದ ಪ್ರಜೆಗಳಾದ ಮಕ್ಕಳು, ಯುವಕರು ಭ್ರಷ್ಟಾಚಾರ ಪಿಡುಗಿನ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ವಕೀಲರಾದ ಉಮೇಶ್ ಎಸ್ ಎಂ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಉಪಯುಕ್ತ ಮಾಹಿತಿ ಹಂಚಿಕೊಂಡರು.ವಕೀಲರ ಸಂಘದ ಅಧ್ಯಕ್ಷ ಜಿ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಬಿ ಇ ಓ ಮಹೇಶ್ ಪೂಜಾರಸಿ ಡಿ ಪಿ ಒ ರಾಮನಗೌಡಉಪ ತಹಶೀಲ್ದಾರ್ ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಎಸ್ ಜ್ಯೋತಿ, ವಕೀಲರಾದ ಡಿ ಸಿದ್ದನಗೌಡ, ಚನ್ನವೀರಯ್ಯ ಉಪಸ್ಥಿತರಿದ್ದರು.ಕೆ ತಂಜೀಂ, ಎಚ್ ಕೆ ಸ್ನೇಹ ಪ್ರಾರ್ಥಿಸಿದರು. ಸುರೇಶ ಅಂಗಡಿ, ದ್ವಾರಕೀಶ್ ರೆಡ್ಡಿ ನಿರ್ವಹಿಸಿದರು.ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಭಾಷಣ, ಪ್ರಬಂಧ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆಮಕ್ಕಳಿಗಾಗಿ ಸಂವಿಧಾನ, ಸಂವಿಧಾನ ಪೀಠಿಕೆ ಓದುಪುಸ್ತಕಗಳು ಪ್ರಶಸ್ತಿ ಪತ್ರಗಳನ್ನುನ್ಯಾಯಾಧೀಶರು ವಿತರಿಸಿದರು