ರಾಣೆಬೆನ್ನೂರ

ರಾಣೆಬೆನ್ನೂರಲ್ಲಿ ಉಚಿತ ಯೋಗ ಪ್ರಕೃತಿ ಚಿಕಿತ್ಸಾ ಶಿಬಿರ

ರಾಣೆಬೆನ್ನೂರಲ್ಲಿ ಉಚಿತ ಯೋಗ ಪ್ರಕೃತಿ ಚಿಕಿತ್ಸಾ ಶಿಬಿರ

ರಾಣೇಬೆನ್ನೂರು 23:  ನಗರದಲ್ಲಿ ಪ್ರಥಮ ಬಾರಿಗೆ ಉಚಿತ ಯೋಗ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಎಸ್ ಡಿ ಎಮ್ ವೈದ್ಯಕೀಯ ಅಧೀಕ್ಷಕ ಡಾ.ಶಿವರಾಜ ಪಿ ಪಾಟೀಲ್ ಹೇಳಿದರು.  

ಗುರುವಾರ ಗೌರಿಶಂಕರ್ ನಗರದ ನಿವೃತ್ತ ನೌಕರರ ಸಂಘದ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿಬಿರವು ಇದೆ ಫೆಬ್ರುವರಿ  25ರಂದು ರವಿವಾರ ಮುಂಜಾನೆ 10 ಗಂಟೆಯಿಂದ ಸಂಜೆ 4-30 ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.  

ಶಿಬಿರದ ಸಂಪೂರ್ಣ ಯಶಸ್ವಿಗೆ ಜೆ.ಸಿ. ಐ. ಅಲೂಮಿನಿ ಕ್ಲಬ್, ನಿವೃತ್ತ ನೌಕರರ ಸಂಘ ಕಾಗಿನೆಲೆ ಕನಕ ನಿಸರ್ಗ ಮನೆ ಆಸ್ಪತ್ರೆ  ಮತ್ತು ಸುಶೀಲಾ ದೇವಿ ನಿಸರ್ಗ ಚಿಕಿಸ್ತಾ ಆಸ್ಪತ್ರೆ ಜಗದಾಳ ಇವರು ಸಹಯೋಗ ನೀಡಿದ್ದಾರೆ.  

ಶಿಬಿರದಲ್ಲಿ ತರಬೇತಿ ಮತ್ತು ಮಾಹಿತಿ ಮಾರ್ಗದರ್ಶನ ನೀಡಲಾಗುವುದು, ಗೌಟ, ಸಂಧಿವಾತ, ಮಂಡಿ  ನೋವು, ಬೆನ್ನು ನೋವು, ಡಿಸ್ಕ್‌ , ಪ್ರೊಲ್ಯಾಪ್ಸ್‌, ಕುತ್ತಿಗೆ ನೋವು, ಸೊಂಟದ ನೋವು, ಭುಜದ ನೋವು, ಪಾದದ ಹಿಮ್ಮಡಿ ನೋವು, ಸೊಂಟದ ನರದ ನೋವು ಮತ್ತಿತರ ಕಾಯಿಲೆಗಳಿಗೆ ಸಂಬಂಧಿಸಿದಂತೆ, ಪ್ರಕೃತಿ ಚಿಕಿತ್ಸೆ ನೀಡಲಾಗುವುದು. ಎಂದರು.  

ಶಿಬಿರದಲ್ಲಿ ವಿಶೇಷವಾಗಿ ವೈದ್ಯರ ತಪಾಸಣೆ, ನಿಗದಿತ ಯೋಗ ಚಿಕಿತ್ಸೆ, ಪ್ರಕೃತಿ ಚಿಕಿತ್ಸೆ, ಪಿಸಿಯೂ ಥೇರೆಪಿ, ಆಕ್ಯುಪ್ರೇಸ್ಸೇರ್, ಅಕ್ಯಪಂಚರ್, ಆಯುರ್ವೇದಿಕ್ ಓಷಧಿ  ನೀಡಲಾಗುವುದು ಎಂದರು.  

ರಾಣೆಬೆನ್ನೂರು ನಗರ ಮತ್ತು ತಾಲೂಕಿನ ಜನರು ಈ ಸಹಜ ಹಾಗೂ ನೈಸರ್ಗಿಕ ಪ್ರಕೃತಿ ಚಿಕಿತ್ಸಾ  ಶಿಬಿರದ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದು ಡಾ: ಶಿವ ರಾಜ ಪಾಟೀಲ್ ಅವರು ಕೋರಿದರು.  

 ಮಾಧ್ಯಮಗೋಸ್ಟಿಯಲ್ಲಿ, ಗಣ್ಯರಾದ  ಪ್ರಭುಲಿಂಗಪ್ಪ ಹಲಗೇರಿ, ವಿ.ಎಂ. ಕರ್ಜಿಗಿ, ಎಸ್ ಕೆ ನೇಸ್ವಿ, ಕುಮಾರ್ ಬೆಣ್ಣಿ, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ