ಪಟ್ಟಣದಲ್ಲಿ ಉಚಿತ ಬೇಸಿಗೆ ಶಿಬಿರ ಆಯೋಜನೆ ವಿಶೇಷ
ಶಿಗ್ಗಾವಿ 13: ಉಚಿತ ಬೇಸಿಗೆ ಶಿಬಿರಗಳು ಮೊದಲಿಗೆ ಹುಬ್ಬಳ್ಳಿ ಧಾರವಾಡ ದಾವಣಗೆರೆ ಪಟ್ಟಣದಂತಹ ನಗರಗಳಲ್ಲಿ ಆಯೋಜನೆ ಮಾಡಲಾಗುತ್ತಿತ್ತು ಆದರೆ ಇಂದು ಶಿಗ್ಗಾವಿ ಪಟ್ಟಣದಲ್ಲಿ ಭರತ ಸಂಸ್ಥೆಯಿಂದ ಆಗುತ್ತಿರುವುದು ವಿಶೇಷವಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ನಡೆದ ಶ್ರೀಕಾಂತ ದುಂಡಿಗೌಡ್ರ ಪ್ರಾಯೋಜಿತ ಉಚಿತ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಶಿಬಿರದಲ್ಲಿ ಎಲ್ಲ ಮಕ್ಕಳು ಸಕ್ರಿಯವಾಗಿ ಉತ್ಸುಹಕತೆಯಿಂದ ಭಾಗವಹಿಸಿ ಶಿಬಿರವನ್ನು ಯಶಸ್ವಗೋಳಿಸಲು ಪಾಲಕರ ಪೋಷಕರ ಸಹಕಾರ ಬಹಳ ಮುಖ್ಯವಾಗಿದೆ ಶಿಬಿರ ಆರೋಗ್ಯಯುತ ಸಮಾಜ ನಿರ್ವಹಣೆ ಮಾಡಲು ಪಠ್ಯೇತರ ಚಟುವಟಿಕೆ ಹೊರತು ಪಡಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಈ ಶಿಬಿರ ಒಳ್ಳೆಯ ಸುವರ್ಣವಕಾಶ ಪಟ್ಟಣಕ್ಕೆ ಒದೊಗಿಬಂದಿದೆ ಎಂದರು.
ಮುಖ್ಯ ಅತಿಥಿ ಬಾಲಗಾಯಕಿ ಮಹನ್ಯಾ ಪಾಟೀಲ ಅನೇಕ ಚಲನಚಿತ್ರ ಗೀತೆಗಳನ್ನು ತಮ್ಮ ಮಧುರ ಕಂಠದಿಂದ ಪ್ರಸರಿಸಿದರು. ಪ್ರಾಸ್ತಾವಿಕವಾಗಿ ಪ್ರೋ ಶಶಿಕಾಂತ ರಾಠೋಡ ಮಾತನಾಡಿ ತಮ್ಮ ನ್ಯಾಯಸಮ್ಮತ ದುಡಿಮೆಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಶ್ರೀಕಾಂತ ದುಂಡಿಗೌಡ್ರ ಕಾರ್ಯ ಶ್ಲಾಘನೀಯ. ಉಚಿತ ಬೇಸಿಗೆ ಶಿಬಿರವನ್ನು ಕಳೆದ 2 ವರ್ಷಗಳಿಂದ ಮಾಡಬೇಕು ಅಲ್ಲದೇ 21 ದಿನಗಳ ಬೇಸಿಗೆ ಶಿಬಿರವನ್ನು ಮಾಡಬೇಕು ಎಂದು ಶ್ರೀಕಾಂತ ದುಂಡಿಗೌಡ್ರ ಸಂಕಲ್ಪವಾಗಿತ್ತು ಹಾಗೂ ಶಿಬಿರವು ರಚನಾತ್ಮಕತೆಯ ಜೊತೆಗೆ ಸಾಂಸ್ಕೃತಿಕ ಮತ್ತು ಎಲ್ಲ ಆಯಾಮಗಳು ಇರಲಿ ಹಾಗೂ ಶಿಬಿರಾರ್ಥಿಗಳ ಜೊತೆಗೆ ಪಾಲಕರ ಪೋಷಕರು ಮನೋಭಾವ ಬದಲಾವಣೆಗೆ ವಿಶೇಷ ವೇದಿಕೆಯಾಗಿತ್ತು ಎಂದರು.
ಭಾರತ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಇದೊಂದು ಹೊಸ ಅನುಭವ ಉಚಿತ ಬೇಸಿಗೆ ಶಿಬಿರ ಮಾಡಬೇಕು ಎಂದು ಕನಸ್ಸು ಕಂಡೆವು ಅದನ್ನು ಸಹಕಾರಗೋಳಿಸದವರು ಶಿಕ್ಷಕರು, ಶಿಬಿರಾರ್ಥಿಗಳು ಮತ್ತು ಪಾಲಕರು ಪೋಷಕರು, ಸಾರ್ವಜನಿಕರು ಅಲ್ಲದೇ ಮಕ್ಕಳ ವಿಕಾಸಕ್ಕೆ ಈ ಶಿಬಿರ ವಿಶೇಷವಾದ ಕಾರ್ಯಕ್ರಮವಾಗಿದೆ ಅಲ್ಲದೇ ಮುಖ್ಯ ಅತಿಥಿ ಮಹನ್ಯಾ ಪಾಟೀಲರ 1159 ನೇ ಕಾರ್ಯಕ್ರಮವಾಗಿದೆ. ಇದರ ಮುಖ್ಯ ಉದ್ದೇಶ ಮಕ್ಕಳಿಗೆ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಬೇಕು ಹಾಗೂ ಮಕ್ಕಳು ಮೊಬೈಲ್ ಹಾಗೂ ದೂರದರ್ಶನದಿಂದ ಹೊರತಂದು ಅವರನ್ನು ಇತರೇ ಚಟುವಟಿಕೆಗಳಿಗೆ ಸಕ್ರಿಯವಾಗಿ ಪಾಲ್ಗೋಳ್ಳುವ ಮುಖ್ಯ ಉದ್ದೇಶವಾಗಿದೆ ಎಂದರು.
ಡಾ.ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯ ಶ್ರೀಗಳು ಮಕ್ಕಳಿಗೆ ಸೌಲಭ್ಯ ಕೊಡತ್ತಾ ಇದ್ದೀರಿ ಆದರೆ ಮಕ್ಕಳಿಗೆ ಸಂಸ್ಕಾರ ಕೊಡತಾ ಇಲ್ಲ ಆ ಸಂಸ್ಕಾರ ಕೊಡುವ ಶಿಬಿರ ಇದಾಗಿದೆ ಎಂದು ಸಾನಿಧ್ಯವಹಿಸಿ ಆರ್ಶಿವದಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಹೊಸಪೇಟೆ, ಶ್ರೀನಿವಾಸ ಬಿ, ಭರತ ಕಳ್ಳಿಮನಿ, ಗುರುಪಾಟೀಲ, ಪ್ರಭು ಗೂರ್ಪನವರ, ರಮೇಶ ವನಹಳ್ಳಿ, ರವಿ ಮಡಿವಾಳರ, ವಿಶ್ವನಾಥ ಗಾಣಿಗೇರ, ಚೇತನ ಕಲಾಲ, ಪ್ರತೀಕ ಕೊಳೇಕರ, ಮುತ್ತು, ಚಂದ್ರು ಜಕ್ಕಣ್ಣವರ, ಸಾಧಿಕ ಮಲ್ಲೂರ, ದರ್ಶನ ಕರೂರ, ಕುಲಕರ್ಣಿ, ಬಸವರಾಜ ಸವಡಿ, ಶಿವಯ್ಯ ಪೂಜಾರ ಸೇರಿದಂತೆ ಪಾಲಕರು, ಪೋಷಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಂದ ವಿಶೇಷ ನೃತ್ಯಗಳು ಮತ್ತು ನಾಟಕದ ರೂಪಕಗಳು ನಿರ್ವಹಣೆಯಾದವು. ಶಿಕ್ಷಕ ಸೇತ ಸನದಿ ಸ್ವಾಗತಿಸಿದರು, ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.