ರಾಣೆಬೆನ್ನೂರ

ಶಾಲಾ ಮಕ್ಕಳಿಗೆ ಉಚಿತ ಶೊ-ಸಾಕ್ಸ್ ವಿತರಣೆ ಕಾರ್ಯಕ್ರಮ

ಶಾಲಾ ಮಕ್ಕಳಿಗೆ ಉಚಿತ ಶೊ-ಸಾಕ್ಸ್ ವಿತರಣೆ ಕಾರ್ಯಕ್ರಮ

ಲೋಕದರ್ಶನ ವರದಿ

 ರಾಣೇಬೆನ್ನೂರ 09: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗಪಡೆದುಕೊಂಡು ಜೀವನದಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕು ಎಂದು ಗ್ರಾಪಂ ಸದಸ್ಯ ಚಂದ್ರಪ್ಪ ದಳವಾಯಿ ಹೇಳಿದರು.

  ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಲ್ಪಡುವ ಉಚಿತ ಶೂ ಮತ್ತು ಸಾಕ್ಸ್ ವಿತರಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಸರಕಾರ ಹೆಚ್ಚಿನ ಕಾಳಜಿವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

  ಮುಖ್ಯೋಪಾಧ್ಯಾಯ ಐ ಹೆಚ್ ಮೈದೂರ ಮಾತನಾಡಿ, ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸದತ್ತ ಗಮನ ನೀಡಿ, ಶಿಕ್ಷಣ ಕ್ಷೇತ್ರದದಲ್ಲಿ ಪ್ರಗತಿ ಸಾಧಿಸಬೇಕು ಅಂದಾಗ ತಾವುಗಳು ಶಾಲೆಗೆ ಹಾಗೂ ಕಲಿಸಿದ ಗುರುಗಳಿಗೆ ಮತ್ತು ತಂದೆ ತಾಯಿ ಹಾಗೂ ಗ್ರಾಮಕ್ಕೆ ಕೀರ್ತಿ ತಂದಂತಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಓದುವುದರ ಕಡೆ ಹೆಚ್ಚಾಗಿ ಗಮನ ಕೊಡಬೇಕು ಎಂದು ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದರು.

  ಎಸ್ಡಿಎಂಸಿ ಸದಸ್ಯರಾದ ಮಾಬುಸಾಬ್ ನದಾಫ್, ನೇತ್ರಾವತಿ ಹಾವನೂರ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು 

ಸುದ್ದಿ ಓದಿ