ಮೋದಿ ಗೆಲವಿನ ಹಿನ್ನಲೆಯಲಿ ಉಚಿತ ಊಟದ ವ್ಯವಸ್ಥೆ
ರಾಣಿಬೆನ್ನೂರ, 07; ಪ್ರಧಾನಿ ನರೇಂದ್ರ ಮೋದಿ ದೇಶಾಭಿಮಾನ ಹಾಗೂ ದೇಶದ ಭದ್ರತೆಗೆ ಸದಾ ಶ್ರಮಿಸುತ್ತಿರುವ ಅವರ ಆದರ್ಶಗಳನ್ನು ಮೆಚ್ಚಿ ಅವರ ಅಭಿಮಾನಿಯಾಗಿದ್ದು, 9 ರಂದು ಸತತ 3ನೇ ಬಾರಿ ಪ್ರಧಾನಿ ಹುದ್ದೆ ಅಲಂಕರಿಸುತ್ತಿರು ಹಿನ್ನಲೆಯಲ್ಲಿ ನಮ್ಮ ಹೋಟೆಲಿನಲ್ಲಿ ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹಲಗೇರಿ ಗ್ರಾಮದ ನರೇಂದ್ರ ಮೋದೀಜೀ ಟೀ ಸ್ಟಾಲ್ ನ ಮಾಲೀಕ ವೀರೇಶ ಉಜ್ಜನಗೌಡ್ರ ಹೇಳಿದರು.
ತಾಲೂಕಿನ ಹಲಗೇರಿ ಗ್ರಾಮದಲ್ಲಿ ಕರೆಯಲಾಗಿದ್ದು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೋದಿಯವರ ಅಪ್ಪಟ ಅಭಿಮಾನಿಗಿದ್ದು 2014ರಲ್ಲಿ ಮೋದಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಚಾ ಫೆ ಚರ್ಚಾ ತೆರೆದಿದ್ದು ಅದು ಇಂದು ಬೃಹದ್ದಾಕಾರದ್ದಾಗಿ ಬೆಳೆದಿರುವುದು ನಮಗೆ ಸಂತಸ ತಂದಿದೆಅದೇ ರೀತಿ 2019 ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿಯವರು ಆಯ್ಕೆಗೊಂಡು ಪುನಃ ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಅಂದು ಸಹ 5000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು
ನಮ್ಮಲ್ಲಿ ಎಲ್ಲಾ ಪಕ್ಷದ ಗ್ರಾಹಕರು ನಮ್ಮ ಹೊಟೇಲ್ ನ ಊಟದ ರುಚಿ ಸವಿದಿದ್ದಾರೆ. ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ವಿತರಿಸುವುದರ ಜೊತೆಗೆ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ನಮ್ಮ ಹೋಟೆಲ್ ನತ್ತ ಸೆಳೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಮೋದಿ ಅವರು ಪ್ರದಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದೃಶ್ಯಾವಳಿಗಳನ್ನು ಎಲ್ಇಡಿ ಮೂಲಕ ಲೈವ್ ನೋಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಂದಿನ ಊಟಕ್ಕೆ ಹೋಳಿಗೆ, ಚಿತ್ರಾನ್ನ, ಬಜಿ, 2 ತರ ಪಲ್ಯ ವ್ಯವಸ್ಥೆ ಮಾಡುತ್ತಿದ್ದು 4000 ಜನ ಸೇರುವ ನೀರೀಕ್ಷೆ ಇದೆ ಎಂದವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುರೇಶ ಮಲ್ಲಗೋಡ, ಶಿವು ಕಣ್ಣಪ್ಪಳವರ, ಗೀರೀಶ ಹಾದಿಮನಿ, ಶಿವಪುತ್ರ್ಪ ಹರಿಯಾಳದವರ ಸೇರಿದಂತೆ ಮತ್ತಿತರರು ಇದ್ದರು.