ಇಂಡಿ

ಬಿಪಿಎಲ್ ಕಾರ್ಡ್‌ ಹೊಂದಿದ ಬಡವರ್ಗದ ಜನರಿಗೆ ಉಚಿತ ಕಿಡ್ನಿ ಚಿಕಿತ್ಸೆ:

ಬಿಪಿಎಲ್ ಕಾರ್ಡ್‌ ಹೊಂದಿದ ಬಡವರ್ಗದ ಜನರಿಗೆ ಉಚಿತ ಕಿಡ್ನಿ ಚಿಕಿತ್ಸೆ:

ಇಂಡಿ: ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ಹೊಂದಿದ ಬಡವರ್ಗದ ಜನರಿಗೆ ಉಚಿತ ಕಿಡ್ನಿ ಚಿಕಿತ್ಸೆ ನೀಡಲಾಗುವದೆಂದು ವಿಜಯಪುರದ ಯಶೋಧಾ ಆಸ್ಪತ್ರೆಯ ಡಾ. ರವೀಂದ್ರ ಮದ್ದರಕಿ ಹೇಳಿದರು. 

ಶನಿವಾರ ಪಟ್ಟಣದ ಬಿರಾದಾರ ಆಸ್ಪತ್ರೆಯಲ್ಲಿ ಕಿಡ್ನಿ ಕುರಿತು ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಕುರಿತು ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು. 

ಕಿಡ್ನಿ ಶಾಶ್ವತವಾಗಿ ಹಾಳಾಗಲು ಮಧುಮೇಹ ಮತ್ತು ರಕ್ತದೊತ್ತಡ ಪ್ರಮುಖ ಕಾರಣವಾಗಿವೆ. ಆದರೂ ಬೊಜ್ಜು, ಧೂಮಪಾನ ಹಾಗೂ ಅಧಿಕ ಕೊಲೆಸ್ಟ್ರಾಲ್ ಇವು ದೀರ್ಘಕಾಲಿನ ಕಿಡ್ನಿ ರೋಗಕ್ಕೆ ಕಾರಣ ಎಂದರು. 

ಪ್ರತಿ ಮೂರನೆಯ ವ್ಯಕ್ತಿಯು ಕಿಡ್ಕಿ ತೊಂದರೆಯಿಂದ ಬಳಲುತ್ತಿರುತ್ತಾನೆ ಎಂದ ಅವರು ಯಶೋಧಾ ಆಸ್ಪತ್ರೆಯಲ್ಲಿ  ಬಡವರಿಗೆ ಚಾರಿಟೇಬಲ್ ಟ್ರಸ್ಟನಿಂದ ಕೇವಲ 600 ರೂ ದಲ್ಲಿ ಡಯಾಲೆಸಿಸ್ ಮಾಡಲಾಗುವದು. ಮತ್ತು ಕಿಡ್ನಿ ಕಸಿ ಮತ್ತು ಕಿಡ್ನಿ ಬದಲಾವಣೆ ಕೂಡ ಈಗ ವಿಜಯಪುರ ಸೌಲಭ್ಯ ಅತೀ ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತಿದೆ ಎಂದರು.  

ಪ್ರತಿ ತಿಂಗಳ ನಾಲ್ಕನೆಯ ಶನಿವಾರ ಮಧ್ಯಾಹ್ನ 12 ರಿಂದ 4 ಘಂಟೆಯವರೆಗೆ ಇಂಡಿ ನಗರದ ಸ್ಟೇಟ್‌ಬ್ಯಾಂಕ್ ಮೇಲ್ಭಾಗದಲ್ಲಿನ ಬಿರಾದಾರ ಆಸ್ಪತ್ರೆಯಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವದು ಎಂದರು.  

ಕಿಡ್ನಿ ಶಸ್ತ್ರ ಚಿಕಿತ್ಸಕ ಶ್ರೀನಾಥ ಪಾಟೀಲ, ಡಾ. ಸವಿತಾ ಬಿರಾದಾರ ಮಾತನಾಡಿದರು. 

ಸುಧಾಕರಗೌಡ ಬಿರಾದಾರ ಹಬೀಬ ವಾಚಮೇಕರ, ಸಂಗನಗೌಡ ಬಿರಾದಾರ ಮತ್ತಿತರಿದ್ದರು.  


ಸುದ್ದಿ ಓದಿ