ರಾಣೆಬೆನ್ನೂರ

ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ

ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ

ರಾಣಿಬೆನ್ನೂರು 29:  ಸಕಲ ಮಾನವರು ಜೀವನದ ಮುಕ್ತಿಯನ್ನು ಪಡೆಯಲು ಸುಲಭ ಉಪಾಯ ಅದು ಓಂ ನಮಃ ಶಿವಾಯ ಈ ಮಂತ್ರವನ್ನು ಅಂತಪ್ಪ ಸದ್ಗುರುವಿನ ಮುಖಾಂತರ ಪಡೆದುಕೊಂಡು ಉಚ್ಛರಿಸಿದರೆ ಮಾತ್ರ ಪಾಪಕರ್ಮಗಳು ನಾಶವಾಗಿ ಮುಕ್ತಿಯನ್ನು ಪಡೆಯಲು ಸಾಧ್ಯ ಎಂದು ಇಂಚಲ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದಭಾರತಿ ಮಹಾಸ್ವಾಮಿಜಿ ಹೇಳಿದರು. 

ಬುಧವಾರ ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮೀಜಿಗಳ ಜಯಂತಿ ಅಂಗವಾಗಿ ಇಂಚಲದ ಸಾದು ಸಂಸ್ಥಾನ ಮಠದ ಸದ್ಗುರು ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿಗಳವರ 84ನೇಯ ಜಯಂತೋತ್ಸವ, ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ 30ನೇ ವೇದಾಂತ ಪರಿಷತ್ ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ಜೀವನದಲ್ಲಿ ಅರಿತೋ ಮರೆತೋ ಒಂದು ಬಾರಿ ಉಚ್ಚರಿಸಿದರೆ ಸಕಲ ಭೋಗ, ಭಾಗ್ಯಗಳು ಲಭಿಸುತ್ತವೆ. ನಾಲ್ಕು ವೇಧಗಳ ಸಾರವೇ ಪಂಚಾಕ್ಷರಿ ಮಂತ್ರ, 7 ಕೋಟಿ ಮಂತ್ರಗಳಲ್ಲಿ ಪಂಚಾಕ್ಷರಿ ಬೀಜ ಮಂತ್ರವಾಗಿದೆ, ಇದನ್ನು ಜಪಿಸಲು ಸರ್ವರೂ ಅಧಿಕಾರಿಗಳಿದ್ದು, ಗೌಪ್ಯವಾಗಿದ್ದ ಈ ಉಪಾಯವನ್ನು ಶ್ರೀಸಿದ್ಧಾರೂಡರು ಸರ್ವರಿಗೂ ಕರುಣಿಸಿದ್ದಾರೆ ಎಂದು ಶ್ರೀಗಳು ನುಡಿದರು. 

ಇಂದು ಗೃಹಸ್ಥಾಶ್ರಮಕ್ಕೆ ಪಾದಾರೆ​‍್ಣ ಮಾಡುವವರು ಸಂಸ್ಕಾರಯುತ ಸಾಮರಸ್ಯ  ಜೀವನ ನಡೆಸುವ ಮೂಲಕ ಗುರು ಹಿರಿಯರನ್ನ ಪ್ರೀತಿಯಿಂದ ಕಾಣಬೇಕು, ಬದುಕು ಬಂಗಾರವಾಗಬೇಕು, ಕಂಟಕವಾಗಬಾರದು ಎಂದು ಶ್ರೀಗಳು ತಿಳಿಸಿದರು. 

ಸಾನಿಧ್ಯ ವಹಿಸಿದ್ದ ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಶ್ರೀಗಳು ಮಾತನಾಡಿ, ಪ್ರತಿಯೊಬ್ಬ ಮನುಷ್ಯನಲ್ಲಿ ಮನೆ ಮಾಡಿಕೊಂಡಿರುವ ದುಷ್ಠಗುಣಗಳನ್ನು ಸಂಹರಿಸಿ ಸುಗುಣವಂತರನ್ನಾಗಿಸುವ ಮಾರ್ಗವೆ ಪರಶಿವನ ಪಂಚ ಮುಖಗಳಿಂದ ಉದ್ಭವವಾದ ಪಂಚಾಕ್ಷರಿ ಮಂತ್ರವಾಗಿದೆ, ಹೋಗುತಿಹುದು ಕಾಯ ವ್ಯರ್ಥ ಅದರ ಲಾಭ ತಿಳಿದವ ಯೋಗಿ ಸಮರ್ಥ. ಭಕ್ತಿ, ಜ್ಞಾನ, ವೈರಾಗ್ಯ ಮೋಕ್ಷ ಸಂಪಾದನೆಯ ಮಾರ್ಗಗಳಾದರೆ, ತನ್ನನ್ನು ತಾನು ತಿಳಿದು ನಡೆಯುವುದೆ ಧರ್ಮ ಮಾರ್ಗವಾಗಿದೆ ಎಂದು ಶ್ರೀಗಳು ನುಡಿದರು.             

ದಾವಣಗೇರಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಹಲವಾರು ಜನ್ಮಗಳ ಪುಣ್ಯದ ಫಲವಾಗಿ ಮನುಷ್ಯ ಜನ್ಮ ಪ್ರಾಪ್ತಿಯಾಗಿದೆ. ಅರಿತೊ ಮರೆತು ಈ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳನ್ನು ಕಳೆದುಕೊಳ್ಳಲು ಓಂ ನಮಃ ಶಿವಾಯ ಮಂತ್ರವನ್ನು ಅಂತಪ್ಪ ಸದ್ಗುರುವಿನ ಮುಖಾಂತರ ಪಡೆದುಕೊಂಡು ಉಚ್ಛರಿಸಿದರೆ ಸಾಕು ಕರ್ವ್ಮಗಳು ನಾಶವಾಗಿ ಮುಕ್ತಿ ಪಡೆಯಲು ಸಾಧ್ಯ ಎಂದು ಶ್ರೀಗಳು ಹೇಳಿದರು. 

ಹುಬ್ಬಳ್ಳಿಯ ಸಚ್ಚಿದಾನಂದ ಶ್ರೀಗಳು ಮಾತನಾಡಿ,  ಗುರುವಿನ ಸೇವೆ ಹಾಗೂ ಪುಣ್ಯ ಕಾರ್ಯ ಮಾಡಲು ಏಕಾಗ್ರತೆಗೆ ಪಂಚಾಕ್ಷರಿ ಮಂತ್ರ ಉತ್ತಮ ಮಾರ್ಗವಾಗಿದೆ ಇದು ಮೂಕ್ಷ ಸಂಪಾದನೆಗೆ ಸುಲಭ ಉಪಾಯ ಎಂದು ಶ್ರೀಗಳ ತಿಳಿಸಿದರು.  

ಶ್ರೀಮಠದ ಪೀಠಾಧಿಪತಿ ನಾಗರಾಜಾನಂದ ಸ್ವಾಮಿಜಿ, ಇಂಚಲದ ಪ್ರರ್ಣಾನಂದ ಭಾರತಿ ಶ್ರೀಗಳು, ಹದಡಿಯ ಚಂದ್ರಗಿರಿ ಮಠದ ಮುರಳೀಧರ ಶ್ರೀಗಳು, ಮಣಕೂರ ಸಿದ್ಧಾರೂಢ ಗುರುದೇವಾಶ್ರಮದ ಮಾತಾಜಿ ಚನ್ನಬಸಮ್ಮನವರು, ಗೋಕಾಕ ತಾಲೂಕ ಹಡಗಿನಾಳ ಸುಜ್ಞಾನ ಕುಟೀರದ ಮಲ್ಲೇಶ್ವರ ಶರಣರು ನಿಜಗುಣ ಶಿವಯೋಗಿಗಳ ಪದ್ಯದ ಕಾವಿವಿಡದಾತ್ಮ ರಾಶಿಗೆ, ಪರತರ ಮುಕ್ತಿಗೆ ಉಪಾಯವಿದು ನಿಜಶಿವ ಮಂತ್ರವಣ್ಣ ಎಂಬ ವಿಷಯ ಕುರಿತು ಉಪದೇಶಾಮೃತ ನೀಡಿದರು.  

ಇದೇ ಸಂದರ್ಭದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನವದಂಪತಿಗಳು ದಾಂಪತ್ಯ ಜೀವನಕ್ಕೆ ಪಾದಾರೆ​‍್ಣ ಮಾಡಿದರು. ನಂತರ ಡಾಽ ಶಿವಾನಂದ ಭಾರತಿ ಮಹಾಸ್ವಾಮೀಜಿಗಳವರ 84ನೇ ವರ್ಷದ ಜಯಂತಿ ಅಂಗವಾಗಿ ದಾವಣಗೇರಿ ಬಾಪುಜಿ ಮೆಡಿಕಲ ಕಾಲೇಜ ಪ್ರೊಽ ಡಾಽ ಎಂ. ಸುನಿತಾ ಮತ್ತು ಕುಟುಂಬದವರಿಂದ ಶ್ರೀಗಳವರ ತುಲಾಬಾರ ನೆರವೇರಿಸಿದರು. 

ವಿಧಾನಸಭಾ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ, ಗ್ರಾಪಂ ಅಧ್ಯಕ್ಷೆ ಲಲಿತಾ ಹಿರೇಬಿದರಿ, ಉಪಾಧ್ಯಕ್ಷೆ ನೀಲಮ್ಮ ಪೂಜಾರ, ಶ್ರೀಮಠದ ಅಧ್ಯಕ್ಷ ಫಕ್ಕೀರ​‍್ಪಗೌಡ್ರ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಜನಾರ್ಧನ ಕಡೂರ, ಹುಬ್ಬಳ್ಳಿ ಶ್ರೀಸಿದ್ಧಾರೂಢ ಮಠದ ಧರ್ಮದರ್ಶಿ ಸಿದ್ದನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಅರುಣಸ್ವಾಮಿ ಹಿರೇಮಠ, ಡಾಕೇಶ ಲಮಾಣಿ, ಗುರುಶಾಂತ ಬಾಗಿಲದವರ, ಶಿವಣ್ಣ ಬಣಕಾರ, ಗೋಪಾಲ ಕೊಡ್ಲೇರ, ಗುಡ್ಡಪ್ಪ ಹೆಡಿಯಾಲ, ಪ್ರಕಾಶ ಚನ್ನಗೌಡ್ರ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ