ಕಬ್ಬು ಕಟಾವು ಕಾರ್ಮಿಕರಿಗೆ, ಮಕ್ಕಳಗೆ ಉಚಿತ ಆರೋಗ್ಯ ತಪಾಸಣೆ
ಕಾಗವಾಡ 23: ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜಯಂತಿ ನಿಮಿತ್ಯವಾಗಿ ಉಗಾರ್ ಲೈನ್ಸ್ ಕ್ಲಬ್ ಇವರಿಂದ ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ ಮತ್ತು ಅವರ ಮಕ್ಕಳಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಪಚಾರ ಶಿಬಿರವನ್ನು ಹಮ್ಮಿಕೊಂಡಿದ್ದರು.
ರವಿವಾರ ಬೆಳಗ್ಗೆ ಉಗಾರ ಲೈನ್ಸ್ ಕ್ಲಬ್ ಅಧ್ಯಕ್ಷ ಡಾ. ಬಿ. ಎ. ಪಾಟೀಲ್ ಇವರ ನೇತೃತ್ವದಲ್ಲಿ ಶಿರಗುಪ್ಪಿ ಗ್ರಾಮದ ಹತ್ತಿರ ಕಬ್ಬು ಕಟಾವು ಮಾಡಲು ಆಗಮಿಸಿದ ವಿಜಯಪುರ, ಮಹಾರಾಷ್ಟ್ರದ ಸೋಲಾಪುರ್, ಬಿಡ್ ಮುಂತಾದ ಜಿಲ್ಲೆಗಳಿಂದ ಕಾರ್ಮಿಕರು ಟೆಂಟ್ ಹಾಕಿಕೊಂಡು ದಿನನಿತ್ಯ ಕಬ್ಬು ಕಟಾವ್ ಮಾಡುತ್ತಿದ್ದಾರೆ.
ಚಳಿಗಾಲದ ಈ ದಿನಗಳಲ್ಲಿ ಚಳಿಗೆ ಯಾವುದಕ್ಕೂ ಲೆಕ್ಕಿಸದೆ ಈ ಕಾರ್ಮಿಕರು ಚಿಕ್ಕ ಮಕ್ಕಳು, ಮಹಿಳೆಯರೊಂದಿಗೆ ಕಬ್ಬು ಕಟಾವ್ ಮಾಡುತ್ತಿದ್ದಾರೆ. ಕೊರೊನಾ ಮೂರನೆ ಅಲೆಯಲ್ಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮತ್ತು ಉಪಚಾರ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿ ತೆಗೆದುಕೊಂಡು ಈ ಶಿಬಿರವನ್ನು ಹಮ್ಮಿಕೊಂಡಿದರು.
ಲೈನ್ಸ್ ಕ್ಲಬ್ನ ಸಂಚಾಲಕ ಡಾ. ಎಂ.ಬಿ,ಭೋಮಾಜ ಮಾತನಾಡಿ ಲೈನ್ಸ್ ಕ್ಲಬ್ನ ಅಧ್ಯಕ್ಷೆ ಡಾ ಬಿ.ಎ. ಪಾಟೀಲ್ ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಕೊರೊನಾ ಮಹಮರಿ ಇಂತಹ ಕಠಿಣ ಸಮಯದಲ್ಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಪಚಾರ. ನೀಡುತ್ತಿದ್ದೇವೆ ಮತ್ತು ಕಾರ್ಮಿಕರ ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ, ಈ ಮಕ್ಕಳಿಗೆ ಓದು ಬರೆಯಲು ಪಠ್ಯ ಇನ್ನಿತರ ಸಾಹಿತ್ಯವನ್ನು ನೀಡುತ್ತಿದ್ದೇವೆ ಎಂದರು.
ಅಧ್ಯಕ್ಷ ಡಾ ಬಿ. ಎ. ಪಾಟೀಲ್, ಡಾ ಅಮೋಲ ಸರಡೆ, ಡಾ ಎಂ. ಬಿ ಭೋಮಾಜ, ಬಿ.ಎನ. ಚೌಗುಲೆ, ಮನಿಷ್ಯ ಶಹಾ, ಶುಭಾಶ ಹೆಬ್ಬಳ್ಳಿ, ಮುಜೀಬ್ ಸಂದರವಾಲೆ, ಮುಂತಾದವರು ಶಿಬಿರ ಯಶಸ್ವಿಗೆ ಸಹಕರಿಸಿದರು.