ಮಿರಜದಲ್ಲಿ ನಾಳೆ ಉಚಿತ ಆರೋಗ್ಯ ತಪಾಸಣೆ ಶಿಬಿರ
ಕಾಗವಾಡ 20: ಮಿರಜದ ಖ್ಯಾತ ಸ್ತ್ರೀರೋಗ ಮತ್ತು ಬಂಜೆತನ ನಿವಾರಣೆ ತಜ್ಞರಾದ ಡಾ. ಸಚಿನ ಸುಗಣ್ಣವರ ಇವರ ಸಚಿನ ಆಸ್ಪತ್ರೆಯಲ್ಲಿ ರವಿವಾರ ದಿ. 22 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು ಹಾಗೂ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.
ಶಿಬಿರದಲ್ಲಿ ಕನರ್ಾಟಕದ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಮತ್ತು ವಿಜಯಪುರ, ಬಾಗಲಕೋಟ ಜಿಲ್ಲೆಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುಟುಂಬಗಳು ಶಿಬಿರಗಳಲ್ಲಿ ಪಾಲ್ಗೊಂಡು ಅವರಿಗೆ ಇರುವ ತೊಂದರೆಗಳು ನಿವಾರಿಸಿಕೊಳ್ಳುತ್ತಿದ್ದಾರೆ. ವಾರದ ಭಾನುವಾರ ರಜೆ ದಿನವೂ ಸುಗಣ್ಣವರ ದಂಪತಿಗಳು ಸಂತಾನ ಭಾಗ್ಯ ಲಭಿಸದೆ ಇರುವ ದಂಪತಿಗಳಿಗೆ ಉಚಿತ ಉಪಚಾರ ನೀಡಿ ಮತ್ತು ಕಡಿಮೆ ಖಚರ್ಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ವೈದ್ಯಕೀಯ ಪವಿತ್ರ ಸೇವೆ ನೀಡುತ್ತಿದ್ದಾರೆ.
ರವಿವಾರ ದಿ. 22 ರಂದು ಬೆಳಗ್ಗೆ 9 ರಿಂದ ಸಂಜೆ 3 ರವರೆಗೆ ಶಿಬಿರ ಜರುಗುವದಿದೆ. ಹೆಚ್ಚಿನ ಮಾಹಿತಿಗಾಗಿ 9765010834ಗೆ ಸಂಪಕರ್ಿಸಿರಿ ಎಂದು ಡಾ. ಸಚಿನ ಸುಗಣ್ಣವರ ಕರೆ ನೀಡಿದ್ದಾರೆ