ಕಾಗವಾಡ

ಮಿರಜದಲ್ಲಿ 22ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಮಿರಜದಲ್ಲಿ 22ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಾಗವಾಡ 18:  ಮಿರಜದ ಖ್ಯಾತ ಸ್ತ್ರೀರೋಗ ಮತ್ತು ಬಂಜೆತನ ನಿವಾರಣೆ ತಜ್ಞರಾದ ಡಾ. ಸಚಿನ ಸುಗಣ್ಣವರ ಇವರ ಸಚಿನ ಆಸ್ಪತ್ರೆಯಲ್ಲಿ ರವಿವಾರ ದಿ. 22ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು ಹಾಗೂ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. 

ಮಿರಜದ ಸಚಿನ ಟೆಸ್ಟ್‌ಟ್ಯೂಬ್ ಬೆಬಿ ಸೆಂಟರ್‌ದಲ್ಲಿ ಕಳೇದ ಅನೇಕ ವರ್ಷಗಳಿಂದ ಬಂಜೆತನ ನಿವಾರಣೆ ಸಂತಾನ ಭಾಗ್ಯ ಲಬ್ಬಿಸದೆ ಇರುವ ದಂಪತಿಗಳಿಗೆ ಉಚಿತ ತಪಾಸಣೆ ಮತ್ತು ಉಪಚಾರ ನೀಡಿ ಮಾನವೀಯತೆ ಮೆರೆದಿದ್ದಾರೆ. 

ಶಿಬಿರದಲ್ಲಿ ಕರ್ನಾಟಕದ ಚಿಕ್ಕೋಡಿ, ರಾಯಬಾಗ, ಅಥಣಿ ತಾಲ್ಲೂಕಿನ ಮತ್ತು ವಿಜಯಪುರ, ಬಾಗಲಕೋಟ ಜಿಲ್ಲೆಯ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುಟುಂಬಗಳು ಶಿಬಿರಗಳಲ್ಲಿ ಪಾಲ್ಗೊಂಡು ಅವರಿಗೆ ಇರುವ ತೊಂದರೆಗಳು ನಿವಾರಿಸಿಕೊಳ್ಳುತ್ತಿದ್ದಾರೆ. ವಾರದ ಭಾನುವಾರ ರಜೆ ದಿನವೂ ಸುಗಣ್ಣವರ ದಂಪತಿಗಳು ಮೌಜ್ ಮಜೆ ಮಾಡುವದಲ್ಲಿ ಕಾಲಹರನ ಮಾಡದೆ, ತಮ್ಮ ಸಮಯವನ್ನು ಸಂತಾಯ ಭಾಗ್ಯ ಲಬ್ಬಿಸದೆ ಇರುವ ದಂಪತಿಗಳಿಗೆ ಉಚಿತ ಉಪಚಾರ ನೀಡಿ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿ ವೈದ್ಯಕೀಯ ಪವೀತ್ರ ಸೇವೆ ನೀಡುತ್ತಿದ್ದಾರೆ. 

ರವಿವಾರ ದಿ. 22 ರಂದು ಬೆಳಗ್ಗೆ 9 ರಿಂದ ಸಂಜೆ 3 ರವರೆಗೆ ಶಿಬಿರ ಜರುಗುವದಿದೆ. ಹೆಚ್ಚಿನ ಮಾಹಿತಿಗಾಗಿ 9765010834 ಗೆ ಸಂಪರ್ಕಿಸಿರಿ ಎಂದು ಡಾ. ಸಚಿನ ಸುಗಣ್ಣವರ ಕರೆ ನೀಡಿದ್ದಾರೆ. 


ಸುದ್ದಿ ಓದಿ