ಉಚಿತ ಆರೋಗ್ಯ ಶಿಬಿರಗಳು ಬಡವರಿಗೆ ವರದಾನ: ಶ್ರೀಕಾಂತ ದುಂಡಿಗೌಡ್ರ
ಶಿಗ್ಗಾವಿ 06: ಎಲ್ಲಾ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತುಇಂದು ಮನುಕುಲಕ್ಕೆ ಮುಖ್ಯವಾಗಿದೆ, ಕೋವಿಡ್ ಸಂದರ್ಭದಲ್ಲಿ ಸ್ನೇಹಿತರು, ಅನೇಕ ಬಂಧುಗಳನ್ನು ಕಳೆದುಕೊಂಡ ಕಹಿ ನೆನಪು ಕಾಡುತ್ತಲೇಇರುವುದರಿಂದಜನತೆಆರೋಗ್ಯತಪಾಸಣೆಗೆ ಹೆಚ್ಚಿನಒತ್ತು ನೀಡಬೇಕುಎಂದು ಭರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು
ತಾಲೂಕಿನ ಅಂದಲಗಿ ಗ್ರಾಮದಲ್ಲಿಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತಕ್ಷಮತಾ ಸೇವಾ ಸಂಸ್ಥೆ ಹಾಗೂ ಶ್ರೀಮತಿ ಗಂಗಮ್ಮಎಸ್. ಬೊಮ್ಮಾಯಿಟ್ರಸ್ಟ್ ಸಹಯೋಗದಲ್ಲಿನಡೆದಉಚಿತಆರೋಗ್ಯ ಶಿಬಿರದಲ್ಲಿ ಮಾತನಾಡಿದಅವರುಗ್ರಾಮೀಣಜನತೆಕಷ್ಟದ ಬದುಕು ಸಾಗಿಸುತ್ತಿದ್ದು, ಕಾಲಕಾಲಕ್ಕೆ ಆರೋಗ್ಯತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಅರಿವುಇಲ್ಲದಿರುವುದರಿಂದ ಸ್ವಯಂ ಸೇವಾ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳ ಮೂಲಕ, ಉಚಿತತಪಾಸಣೆ ಶಿಬಿರಗಳ ಮೂಲಕ ಆರೋಗ್ಯರಕ್ಷಣೆಯ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ ಎಂದು ತಿಳಿಸಿದರು.ಶಿಬಿರದ ನೇತೃತ್ವವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತಕ್ಷಮತಾ ಸೇವಾ ಸಂಸ್ಥೆ ಹಾಗೂಶ್ರೀಮತಿ ಗಂಗಮ್ಮಎಸ್. ಬೊಮ್ಮಾಯಿಟ್ರಸ್ಟ್* ಅವರು ವಹಿಸಿಕೊಂಡಿರುವುದು ಸಂತಸದ ವಿಷಯಇವರಕಾರ್ಯ ಶ್ಲಾಘನೀಯಕಾರ್ಯವಾಗಿದೆಎಂದರು.
ಡಾ. ಎಂ.ಎಂ ತಿರ್ಲಾಪೂರ ಮಾತನಾಡಿ ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿ ವಾಂತಿ-ಬೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು.ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಖಾಯಿಲೆಗಳಾಗಿದ್ದು, ಬಡಜನರುಆರ್ಥಿಕವಾಗಿ ಭರಿಸಲು ಅಸಾಧ್ಯ.ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೆಜಳಪಡಿಸಿದಾಗ ಮಾತ್ರಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದಡಾ.ಮಹೇಶ್ ನಾಲ್ವಾಡ್, ರೋಗದ ಲಕ್ಷಣಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.ನಾನು ಕೂಡಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದ್ದುಒಂದುಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡಜನರ ಸೇವೆಯನ್ನುಅವರಋಣವನ್ನು ಈ ರೀತಿಯಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯಎಂಬುದನ್ನುಅರಿತಿದದೇನೆಎಂದರು.ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ.ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಸಚಿವರು ಹೆಚ್ಚಾಗಿ ಆಯೋಜಿಸಬೇಕುಎಂದು ತಿಳಿಸಿದರು.
ಗ್ರಾಮ ಪಂಚಾಯತಅಧ್ಯಕ್ಷ ಮಹ್ಮದಜಾಫರ ಮ, ಯಡಹಳ್ಳಿ, ಶಿವಾನಂದ ಮ್ಯಾಗೇರಿ, ಡಾ.ಎಂ.ಎಂ.ತಿರ್ಲಾಪೂರ, ವಕೀಲಎಸ್. ಕೆ.ಅಕ್ಕಿ, ಮುಖಂಡರುಗಳಾದ ಬಿ.ಎಸ್. ಹಿರೇಮಠ, ಸಿ. ಬಿ. ಹಿರೇಮಠ, ರಾಮಣ್ಣ ಸಣ್ಣಮನಿ, ಶಿವಪುತ್ರಪ್ಪ ಜವಳಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಸಿದ್ದಲಿಂಗಪ್ಪ ಜವಳಿ, ಸಿ.ಜಿ ಕಾಳಿ, ಶೇಖಪ್ಪ ವೀ. ಅವಳಿ, ಪಾತೀಮಾ ಇ, ಜೇಕಿನಕಟ್ಟಿ,ಚನ್ನವ್ವ ಚ.ಜಂಬಯ್ಯನವರ, ಈರಪ್ಪ ಕ. ಚಲವಾದಿ, ವಿನೋದ ಗ.ಕಲಗುದರಿ, ಪುಟ್ಟಯ್ಯಗಿರಿಮಲ್ಲಯ್ಯನವರ, ವೀರಭದ್ರಪ್ಪ ಹೋತನಳ್ಳಿ, ಪರ್ವತಗೌಡ ಪಾಟೀಲ, ಚನ್ನಬಸವ ಗೌಡ್ರ ಪಾಟೀಲ, ಯಲ್ಲಪ್ಪಕೊರವರ, ಹನುಮಂತಪ್ಪಗಲಗಿನಕಟ್ಟೆ, ಮಾದೇವಪ್ಪ ಹಡಪದ, ಮಾದೇವಪ್ಪ ಬುರ್ಲಿ, ನಾಗಪ್ಪ ವಡ್ಡರ, ಲಲಿತಾ ಪುಟ್ಟಣ್ಣವರ, ರತ್ನವ್ವ ವಾಲೀಕಾರ, ವೀರಭದ್ರಗೌಡ ಬ, ವಾಲಿಕಾರ, ಪ್ರತಾಪಸಿಂಗ್ ಹ. ಮಿಶ್ರಿಕೋಟಿ, ಪ್ರೇಮವ್ವ ಮ.ಕಲ್ಲಾಪೂರ, ಗಂಗಾಧರಗೌಡಷ.ಪಾಟೀಲ, ಶಿವಾನಂದ ಪೂಜಾರ, ಬಾಸ್ಕರ್ದೇಶಪಾಂಡೆ, ಲೋಕನಗೌಡರ ಪಾಟೀಲ, ಮಂಜುನಾಥಓಲೇಕಾರ, ಶಂಕರಗೌಡುಕಡ್ಡಿ, ನಾಗನಗೌಡತರ್ಲಿ, ಯಲ್ಲಪ್ಪ ಹರಿಜನ, ಮೈಲಾರ್ಪ ಕಾಳೆ, ಹಾಗೂ ಅಂದಲಗಿ, ಶಡಗರವಳ್ಳಿ ಮುದ್ದಿಕೊಪ್ಪ ಗ್ರಾಮದ ಗುರುಹಿರಿಯರು ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.400ಕ್ಕೂ ಹೆಚ್ಚು ರೋಗಿಗಳ ಆರೋಗ್ಯತಪಾಸಣೆ ನಡೆಸಲಾಯಿತು.ಮಂಜುನಾಥಒಲೇಕಾರ್ಕಾರ್ಯಕ್ರಮ ನಿರ್ವಹಿಸಿದರು.