ಉಚಿತ ಕಣ್ಣಿನ ತಪಾಸಣೆ ಶಿಬಿರ
ಜಮಖಂಡಿ 29:ಕಣ್ಣಿನ ದೋಷದಿಂದ ಬಡಜನರು ಅಮೂಲ್ಯವಾದ ಕಣ್ಣುಗಳನ್ನು ಕಳೆದುಕೊಂಡು ದೃಷ್ಟಿ ಹೀನತೆಯಿಂದ ಬಳಲಬಾರದೆಂದು ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡುವ ಜೊತೆಗೆ ಲೋಕಕಲ್ಯಾಣದ ಕಾರ್ಯವನ್ನು ಮಾಡಲಾಗಿದೆಂದು ರುದ್ರಾವಧೂತ ಮಠದ ಸಹಜಾನಂದ ಅವಧೂತರು ಹೇಳಿದರು.
ನಗರದ ರುದ್ರಸ್ವಾಮಿ ಪೇಠ ಗಲ್ಲಿಯಲ್ಲಿ ರುದ್ರಾವಧೂತ ಮಠದ ಸಭಾ ಭವನದಲ್ಲಿ ನಡೆದ ರುದ್ರಾವಧೂತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹುಬ್ಬಳಿ ಮತ್ತು ಜಮಖಂಡಿಯ ಎಮ್ಎಮ್ ಜೋಶಿ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿವರ್ಷವೂ ಕೂಡಾ ಬೇಸಿಗೆ ದಿನಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಶಿಬಿರವನ್ನು ಹಮ್ಮಿಕೊಳ್ಳಲಾಗುವದು. ಶಿಕ್ಷಣವನ್ನು ಪಡೆದುಕೊಳ್ಳಲು ಬಂದ ವಿದ್ಯಾರ್ಥಿಗಳಿಗೆ ಊಟ, ವಸತಿ, ಪುಸ್ತಕಗಳು, ನೋಟಬುಕ್ಗಳನ್ನು ನೀಡಿ. ಎಲ್ಲ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ನುರಿತ 12 ರಿಂದ 20 ಜನ ಶಿಕ್ಷಕರು ತರಬೇತಿಯನ್ನು ನೀಡುವರು. ಹೀಗೆ ಹಲವಾರು ಸಾಮಾಜಿಕ ಸೇವೆಯನ್ನು ಶ್ರೀ ರುದ್ರಾವಧೂತ ಮಠದಿಂದ ಮಾಡಲಾಗುತ್ತದೆ ಎಂದರು.
ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.