ಧಾರವಾಡ - ಹುಬ್ಬಳ್ಳಿ

ಬಡ ವಿದ್ಯಾಥರ್ಿಗಳಿಗಾಗಿ ಉಚಿತ ತರಬೇತಿ ಕಾರ್ಯಕ್ರಮ

ಬಡ ವಿದ್ಯಾಥರ್ಿಗಳಿಗಾಗಿ ಉಚಿತ ತರಬೇತಿ ಕಾರ್ಯಕ್ರಮ


ಧಾರವಾಡ 30:  ಶಿಕ್ಷಣ ಪ್ರೇಮಿಗಳು, ಯುವಕರ ಆಶಾಕಿರಣ ಹಾಗೂ ಜೆಡಿಎಸ್ ನ ರಾಜ್ಯ ಉಪಾದ್ಯಕ್ಷರಾದ ನಾನಾಗೌಡ ಬಿರಾದಾರ ಮತ್ತು ಮಲ್ನಾಡ ಐ.ಎ.ಎಸ್ ಧಾರವಾಡ ಇವರ ಸಹಭಾಗಿತ್ವದಲ್ಲಿ ನಡೆದ ವಿಜಯಪುರ ಜಿಲ್ಲೆಯ 100 ಬಡ ಮತ್ತು ಪ್ರತಿಭಾವಂತ ವಿದ್ಯಾಥರ್ಿಗಳಿಗೆ 4 ತಿಂಗಳು ಏಂಖ/ಕಖ ಸಂಪೂರ್ಣ ಉಚಿತ ತರಬೇತಿಯ ಕಾರ್ಯಕ್ರಮವು  ದಿ. 28ರಂದು ನಗರದ ಸಿದ್ಧೇಶ್ವರ ಕಲಾಭವನದಲ್ಲಿ ಯಶಸ್ವಿಯಾಗಿ ನೇರವೆರಿತು. ಮತ್ತು ವಿಶೇಷ ತಜ್ಞರು ಹಾಗೂ ಅಧಿಕಾರಿಗಳಿಂದ ಸ್ಪಧರ್ಾತ್ಮಕ ಪರೀಕ್ಷೆಯ ಯಶಸ್ಸಿನ ಸಿದ್ಧ ಸೂತ್ರಗಳು ಮತ್ತು ಯಶಸ್ಸಿನ ಗುಟ್ಟುಗಳ ಬಗ್ಗೆ ಕಾಯರ್ಾಗಾರವೂ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 1000 ವಿದ್ಯಾಥರ್ಿಗಳು ಭಾಗವಹಿಸಿದ್ದರು ಮತ್ತು ಉಚಿತ ತರಬೇತಿಗಾಗಿ ಸುಮಾರು 500 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ 100 ವಿದ್ಯಾಥರ್ಿಗಳಿಗೆ ಧಾರವಾಡದಲ್ಲಿ ಮಲ್ನಾಡ ಐ.ಎ.ಎಸ್ ಅಕಾಡೆಮಿ ವತಿಯಿಂದ ಸತತ 4 ತಿಂಗಳು ಕೆಎಎಸ್/ಪಿಎಸ್ಐ ಗಾಗಿ ಸಂಪೂರ್ಣ ಉಚಿತ ತರಬೇತಿ ನಡೆಯಲಿದೆ. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಶೈಲ ಚಾಂದಕವಠೆ ವಹಿಸಿದ್ದರು ಮತ್ತು ಮುಖ್ಯ ಅತಿಥಿಗಳಾಗಿ ನಾನಾಗೌಡ ಬಿರಾದಾರ ಜೆಡಿಎಸ್ ರಾಜ್ಯ ಉಪಾಧ್ಯಕ್ಷರು ವಹಿಸಿದ್ದರು. ಗಡ್ಡೆಪ್ಪ ಗುಂಜಟಗಿ, ಚಿಕ್ಕನಗೌಡ್ರ, ಸಂಗನಗೌಡ ಬಿರದಾರ, ಶರಣು, ಡಿ.ಬಿ.ಮುಲ್ಲಾ, ಬಿ.ಬಿ.ಪಾಟೀಲ, ವಿಜಯ ಯಂಕಂಚಿ, ಪರಮಾನಂದ, ಸೋಮು ಹುಣಸಗಿ, ಶಂಕರ ಹುಣಸಗಿ ಮತ್ತಿತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ